ಕಾಸರಗೋಡು ಜಿಪಂ ಅಧ್ಯಕ್ಷೆಗೆ ಯುಆರ್‌ಬಿ ಗ್ಲೋಬಲ್ ಪ್ರಶಸ್ತಿ

baby
ಬೇಬಿ ಬಾಲಕೃಷ್ಣನ್
Published on

ಕಾಸರಗೋಡು: ಸಾಮಾಜಿಕ ಕ್ಷೇತ್ರದಲ್ಲಿ ಸಲ್ಲಿಸಿರುವ ಕೊಡುಗೆಗಾಗಿ ಕಾಸರಗೋಡು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪಿ.ಬೇಬಿ ಬಾಲಕೃಷ್ಣನ್ ಅವರಿಗೆ ಯುಆರ್‌ಬಿ ಗ್ಲೋಬಲ್ ಪ್ರಶಸ್ತಿ ಲಭಿಸಿದೆ.

ಸಾಮಾಜಿಕ ಕ್ಷೇತ್ರಗಳಲ್ಲಿ ಅವರ ದುಡಿಮೆ, ಕಾರ್ಯಪ್ರವೃತ್ತಿ ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ. 1995ರಲ್ಲಿ ಮಡಿಕೈ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಅವರು, ಅಂದು ಭಾರತದಲ್ಲಿಯೇ ಅತಿ ಕಿರಿಯ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎಂಬ ಖ್ಯಾತಿಗೂ ಪಾತ್ರರಾಗಿದ್ದರು. 2000ರಲ್ಲಿ ಮತ್ತೆ ಅದೇ ಪಂಚಾಯಿತಿ ಅಧ್ಯಕ್ಷೆಯಾಗಿ ಮರು ಆಯ್ಕೆಯಾಗಿದ್ದರು. ಕಾಸರಗೋಡು ಜಿಲ್ಲೆಯನ್ನು ಸಂಪೂರ್ಣ ಡಿಜಿಟಲ್ ಸಾಕ್ಷರತಾ ಜಿಲ್ಲೆಯನ್ನಾಗಿ ಮಾರ್ಪಡಿಸಿರುವುದಲ್ಲದೆ, ಕಾಸರಗೋಡು ಜಿಲ್ಲೆಗೆ ಅಧಿಕೃತ ವೃಕ್ಷ, ಪಕ್ಷಿ, ಮೃಗ, ಸಸ್ಯಗಳನ್ನು ಘೋಷಣೆ ಮಾಡಿ, ಇವುಗಳ ಪೋಷಣೆಗೂ ಪಣತೊಡಲಾಗಿತ್ತು. ನವದೆಹಲಿಯ ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸ್‌ನಿಂದ ಉತ್ತಮ ಮಹಿಳಾ ನೇತಾರೆ ಸಹಿತ ಹಲವಾರು ಪ್ರಶಸ್ತಿ ಲಭಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net