More

    Success Story | ಯುಪಿಎಸ್​ಸಿ ಪಾಸ್ ಆಗಲು ತರಬೇತಿ ಮಹತ್ವದ್ದಲ್ಲ! ಸ್ವಯಂ ಅಧ್ಯಯನವೇ ಅಂತಿಮ

    ಸವಾಲು ಎದುರಾದಾಗ ತಯಾರಿ ಮಾಡಿಕೊಳ್ಳೋಣ ಎಂಬ ಮನಸ್ಥಿತಿಯಿಂದ ಹೊರಬಂದು ಕನಸನ್ನು ಬೆನ್ನಟ್ಟುತ್ತಾ ಸಾಗುತ್ತಲೇ ಇರಬೇಕು. ಯಶಸ್ಸು ಅಷ್ಟು ಸುಲಭವಾಗಿ ಸಿಗುವ ಸಾಧನವಲ್ಲ. ಇದಕ್ಕೆ ಕಠಿಣ ಮತ್ತು ಸತತ ಪರಿಶ್ರಮ ಅತ್ಯವಶ್ಯಕವಾಗಿ ಬೇಕು. ಈ ನಿಟ್ಟಿನಲ್ಲಿ ನಮ್ಮನ್ನು ನಾವು ಮೌಲ್ಯಮಾಪನ ಮಾಡಿಕೊಳ್ಳುತ್ತಾ ಮುನ್ನಡೆಯಬೇಕು. ಇದರಿಂದ ಮುಂದೊಂದು ದಿನ ಯಶಸ್ಸು ನಮ್ಮತ್ತ ಸುಳಿಯುವುದರಲ್ಲಿ ಆಶ್ವರ್ಯವೇ ಇಲ್ಲ ಎಂದು ಮಾತು ಆರಂಭಿಸಿದ ಡಾ.ತ್ರಿಲೋಕ್​ ಚಂದ್ರ ಸದ್ಯ ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಆರೋಗ್ಯ ವಿಭಾಗದಲ್ಲಿ ವಿಶೇಷ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನಾಗರಿಕ ಸೇವಾ ಹುದ್ದೆಯತ್ತ ಒಲವು, ಅದಕ್ಕಾಗಿನ ಪರಿಶ್ರಮಗಳೆಲ್ಲದರ ಬಗ್ಗೆ ವಿಜಯವಾಣಿ ವಿದ್ಯಾರ್ಥಿ ಉದ್ಯೋಗ ಮಿತ್ರದೊಂದಿಗೆ ಮಾತನಾಡಿದ್ದಾರೆ.

    ಶ್ವೇತಾ ನಾಯ್ಕ್​, ಬೆಂಗಳೂರು

    ಹೊಸ ಅನುಭವಕ್ಕೆ ತೆರೆದುಕೊಳ್ಳಬೇಕು ಎಂಬ ನಿಟ್ಟಿನಲ್ಲಿ ಮೆಡಿಕಲ್​ ಪದವಿ ಮುಗಿಸಿದರೂ ಸಿವಿಲ್​ ಸರ್ವಿಸ್​ನತ್ತ ಮನಸ್ಸು ವಾಲಿತ್ತು. ಪ್ರಾಕ್ಟೀಸ್​ ಮಾಡುತ್ತಲೇ ಓದಿನಲ್ಲಿ ನಿರತನಾದೆ. ಕೋಚಿಂಗ್​ ಜತೆ ಜತೆಗೆ ಸ್ವಯಂ ಅಧ್ಯಯನವೂ ಇರುತ್ತಿತ್ತು. ಮೊದಲ ಪ್ರಯತ್ನದಲ್ಲಿ ಕೆಲಸ ಸಿಗದಿದ್ದರೂ ಎರಡನೇ ಪ್ರಯತ್ನದಲ್ಲಿ ಐಎಎಸ್​ ತೇರ್ಗಡೆಯಾದರು. ಮುಂದಿನ ಹಂತವೇ ನಿರ್ಣಾಯಕವಾಗಿತ್ತು. ಅಲ್ಲಿಂದ ಪ್ರಾರಂಭವಾದ ನಾಗರಿಕ ಸೇವೆ ಇನ್ನೂ ಮುಂದುವರಿಯುತ್ತಲೇ ಇದೆ. ಇದೇ ರೀತಿ ಮುಂದುವರಿಯಲಿದೆ ಎಂಬ ಆತ್ಮವಿಶ್ವಾಸವೂ ಇದೆ ಎನ್ನುವುದು ತ್ರಿಲೋಕ್​ ಚಂದ್ರ ಅವರ ಮಾತು.

    ಕೆಲಸದ ವ್ಯಾಪ್ತಿ ಹೆಚ್ಚಿದೆ

    ಎಂಬಿಬಿಎಸ್​ ಮುಗಿಸಿದ ತಕ್ಷಣ ಸಿವಿಲ್​ ಸರ್ವಿಸ್​ಗೆ ತಯಾರಿ ನಡೆಸಿದೆ. ಪ್ರಾಕ್ಟೀಸ್​ ಜೊತೆಗೇ ಓದೂ ಮುಂದುವರಿಯಿತು. ನಾಗರಿಕ ಸೇವೆಯಲ್ಲಿ ಕೆಲಸದ ವ್ಯಾಪ್ತಿ ಹೆಚ್ಚಿರುವ ಕಾರಣ ಜನರಿಗೆ ಸೇವೆ ಹೆಚ್ಚು ಅವಕಾಶ ಇರುತ್ತದೆ. ಪರಿಣಾಮಕಾರಿಯಾಗಿ ಕೆಲಸ ಮಾಡಲು ಇದೊಂದು ಉತ್ತಮ ವೇದಿಕೆ. ಯುಪಿಎಸ್​ಸಿ ದೀರ್ ಅವಧಿಯ ಅಧ್ಯಯನ ಆಗಿರುವುದರಿಂದ ಕುಟುಂಬದ ಸಹಕಾರ ಬಹುಮುಖ್ಯವಾಗಿ ಇರಬೇಕು. ಈ ವಿಷಯದಲ್ಲಿ ನಾನು ಅದೃಷ್ಟವಂತ. ನನ್ನ ಸಂಪೂರ್ಣ ಜರ್ನಿಯಲ್ಲಿ ಫ್ಯಾಮಿಲಿ ಸಪೋರ್ಟ್​ ಖಂಡಿತಾ ಇತ್ತು. ಅವರಿಂದಲೇ ಈ ಮಟ್ಟಕ್ಕೆ ಬರಲು ಸಾಧ್ಯವಾಯಿತು.

    ಇದನ್ನೂ ಓದಿ: Success Story: ಐಎಎಸ್​ ಆಗದಿದ್ದರೆ ಟೆಕ್ಸ್​ಟೈಲ್​ ಉದ್ಯಮ ಮಾಡಲು ನಿರ್ಧರಿಸಿದ್ದೆ!

    ವಿಷಯ ಆಯ್ಕೆ ಬಹಳ ಮುಖ್ಯ

    ನಮ್ಮ ಓದಿನ ಹಿನ್ನೆಲೆ ಏನು ಎಂಬುದನ್ನು ಅರಿತು ಪ್ರಾರಂಭದಲ್ಲೇ ವಿಷಯ ಆಯ್ಕೆಯನ್ನು ಸರಿಯಾಗಿ ಮಾಡಿಕೊಳ್ಳಬೇಕು. ಕೆಲವರು ವಿಷಯಗಳ (ಐಚ್ಛಿಕ) ಆಯ್ಕೆಯಲ್ಲಿ ಎಡವುತ್ತಾರೆ. ಇದರಿಂದ ಮುಂಬರುವ ಪರೀಕ್ಷೆಗಳೂ ಕಷ್ಟವಾಗುತ್ತಾ ಹೋಗಬಹುದು. ಆಸಕ್ತಿ ಮತ್ತು ಶೈಣಿಕ ಹಿನ್ನಲೆ ಆಧಾರದಲ್ಲಿ ಆಯ್ಕೆ ಮಾಡಿಕೊಳ್ಳಬೇಕು. ಶಾಲಾ ಹಂತದಲ್ಲಿ ಓದು ಬರೀ ಪುಸ್ತಕಕ್ಕೆ ಸೀಮಿತವಾಗಿರದೆ ಸಮಗ್ರ ಅಧ್ಯಯನ ಮಾಡಬೇಕು. ಪ್ರಚಲಿತ ವಿದ್ಯಾಮಾನ, ವಿಜ್ಞಾನ, ನ್ಯಾಯಾಂಗ ವಿಷಯ, ಅರ್ಥಶಾಸ್ತ್ರ ಸೇರಿ ವಿವಿಧ ವಿಷಯಗಳ ಬಗ್ಗೆ ತಿಳಿವಳಿಕೆ ಇರಬೇಕು.

    ಸಮಯ ನಿರ್ವಹಣೆ ಇರಲಿ

    ಎಷ್ಟು ಓದುತ್ತೇವೆ ಎನ್ನುವುದಕ್ಕಿಂತ ಹೇಗೆ ಓದುತ್ತೇವೆ ಎನ್ನುವುದು ಮುಖ್ಯವಾಗುತ್ತದೆ. ಇದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಓದಿದ್ದನ್ನು ಪುನರ್ಮನನ ಹೇಗೆ ಮಾಡಿಕೊಳ್ಳುತ್ತೇವೆ ಎಂಬ ಅರಿವಿರಬೇಕು. ಒಂದು ವಿಷಯವನ್ನು ಆಯ್ಕೆ ಮಾಡಿಕೊಂಡಾಗ ಅದರ ಬಗ್ಗೆ ಆಳವಾದ ಅಧ್ಯಯನ ಅಗತ್ಯ. ಪುನರ್ಮನನದ ಜತೆಗೆ ಓದಿದ ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದೂ ಅಷ್ಟೇ ಮುಖ್ಯವಾಗುತ್ತದೆ. ಓದುವಾಗ ಕೆಲವೊಂದು ಗೊಂದಲಗಳು ಎದುರಾಗುವುದು ಸಹಜ. ಇಂತಹ ಸಮಯದಲ್ಲಿ ಮಾರ್ಗದರ್ಶಕರಿಂದ ಮಾರ್ಗದರ್ಶನ ಅಗತ್ಯ. ವಿವಿಧ ವಿಷಯಗಳನ್ನು ಮನನ ಮಾಡಿಕೊಳ್ಳುವ ಜತೆಗೆ ಐಚ್ಛಿಕ ಹಾಗೂ ಇತರ ವಿಷಯಗಳಿಗೆ ಸಮಯ ಮೀಸಲಿಡಬೇಕು.

    ಇದನ್ನೂ ಓದಿ: Success Story | ಐಎಎಸ್ ಆಗಲು ‘ಪೃಥ್ವಿ’ ಸಿನಿಮಾ ಪ್ರೇರಣೆ!

    ಕೋಚಿಂಗ್​ ಮಾರ್ಗದರ್ಶನಕ್ಕಷ್ಟೇ

    ನಾನು ಕೋಚಿಂಗ್​ ಪಡೆದಿದ್ದೆ. ಆದರೆ ಸ್ವಯಂ ಅಧ್ಯಯನಕ್ಕಿಂತ ತರಬೇತಿ ಮಹತ್ವದ್ದಲ್ಲ. ಹೇಗೆ ಓದಬೇಕು ಎಂಬುದನ್ನಷ್ಟೇ ನಾವು ಅಲ್ಲಿ ತಿಳಿಯಬಹುದು. ಆದರೆ ನಾವೇ ಪ್ರತಿ ವಿಷಯಗಳನ್ನು ಆಳವಾಗಿ ಅಧ್ಯಯನ ಮಾಡಿದಾಗ ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಬಹುದು. ಪಠ್ಯಕ್ರಮ ನೋಡಿಕೊಂಡು ಅದರ ಆಧಾರದ ಮೇಲೆ ನೋಟ್ಸ್​ ಮಾಡಿಕೊಳ್ಳಬೇಕು. ನಿಗದಿತ ಸಮಯದೊಳಗೆ ಎಲ್ಲ ಪಠ್ಯಕ್ರಮಗಳನ್ನು ಕವರ್​ ಮಾಡಬೇಕು. ಸಂದರ್ಶನ ನಮ್ಮ ವ್ಯಕ್ತಿತ್ವದ ಮೇಲೆ ಅಬಲಂಬಿತವಾಗಿರುತ್ತದೆ. ನಮ್ಮ ಹವ್ಯಾಸ, ಐಚ್ಚಿಕ ವಿಷಯ ಹೀಗೆ ಪ್ರತಿಯೊಂದರ ಮೇಲೂ ನಾವು ಗಮನಹರಿಸಬೇಕು.

    ಸ್ಪರ್ಧಾಕಾಂಕ್ಷಿಗಳಿಗೆ ಹೇಳೋದೇನು?

    ಯುಪಿಎಸ್​ಸಿಯ 3&4 ವರ್ಷದ ಪತ್ರಿಕೆಗಳನ್ನು ಗಮನಿಸಿ. ಅವರು ಪ್ರಶ್ನೆ ಕೇಳುವ ರೀತಿಯಲ್ಲಿ ಒಂದು ಲಯವಿರುತ್ತದೆ. ಈ ನಿಟ್ಟಿನಲ್ಲಿ ಉತ್ತರದಲ್ಲೊಂದು ಸ್ಪಷ್ಟತೆ, ನಿಖರತೆ ಬಯಸಿರುತ್ತಾರೆ. ಅವುಗಳಲ್ಲಿನ ಮುಖ್ಯ ಅಂಶಗಳೇನು, ಅದಕ್ಕಿರುವ ಆಯಾಮಗಳೇನು ಎಂಬುದನ್ನು ಗುರುತಿಸಿ, ಅರ್ಥ ಮಾಡಿಕೊಳ್ಳುವುದು ಮುಖ್ಯವಾಗುತ್ತದೆ. ಪೂರ್ವಭಾವಿ ಪರೀಕ್ಷೆ ಮುಗಿಯಲಿ, ಮುಖ್ಯ ಪರೀಕ್ಷೆಯಲ್ಲಿ ನೋಡಿಕೊಳ್ಳೋಣ ಎಂದುಕೊಂಡರೆ ಮುಂದೆ ಪಶ್ಚಾತಾಪ ಪಡಬೇಕಾಗುತ್ತದೆ. ಸಿದ್ಧತೆ ಶುರು ಮಾಡಿಕೊಂಡಾಗಲೇ ಅಭ್ಯಾಸ ಮಾಡಿಕೊಳ್ಳಬೇಕು. ಹೀಗಾದಾಗ ವಸ್ತು ವಿಷಯವನ್ನು ಅಭಿವೃದ್ಧಿಪಡಿಸಿಕೊಳ್ಳುವುದು, ಉತ್ತರಗಳನ್ನು ಹೆಚ್ಚು ಸ್ವರೂಪಾತ್ಮಕವಾಗಿ ಬರೆಯುವುದು ಸಾಧ್ಯವಾಗುತ್ತದೆ.

    ಇದನ್ನೂ ಓದಿ: Success Story: ವೆಟರ್ನರಿ ವೈದ್ಯರಾಗಿದ್ದ ಡಾ.ರಾಮ್ ಪ್ರಸಾತ್ ಈಗ ಕರ್ನಾಟಕದಲ್ಲಿ ಐಎಎಸ್ ಆಫೀಸರ್!

    ಪ್ರತಿ ಕ್ಷೇತ್ರದಲ್ಲೂ ಹೊಸ ಅನುಭವ

    ಕಂದಾಯ ಇಲಾಖೆ, ವಾಣಿಜ್ಯ ತೆರಿಗೆ ಇಲಾಖೆ, ನಗರಾಭಿವೃದ್ಧಿ ಪ್ರಾಧಿಕಾರ, ಎಂಪವರ್​ಮೆಂಟ್​ ಆ್ಯಂಡ್​ ಟ್ರೇನಿಂಗ್​, ಆರೋಗ್ಯ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದೇನೆ. ಪ್ರತಿ ಕ್ಷೇತ್ರದಲ್ಲೂ ಹೊಸ ಅನುಭವ ಪಡೆಯುತ್ತೇವೆ. ವಿವಿಧ ಸವಾಲುಗಳನ್ನು ಎದುರಿಸುತ್ತೇವೆ. ಎಲ್ಲ ಇಲಾಖೆಗಳಲ್ಲೂ ಉತ್ತಮವಾಗಿ ಕೆಲಸ ಮಾಡಲು ಸಾಕಷ್ಟು ಅವಕಾಶ ದೊರೆತಿದೆ. ಕಂದಾಯ ಸಮಸ್ಯೆ, ಪಿಂಚಣಿ, ಜಮೀನು ವಿವಾದ, ಕೌಶಲ ಅಭಿವೃದ್ಧಿ, ಕೈಗಾರಿಕಾ ಅಭಿವೃದ್ಧಿ, ಕೃಷಿ, ತೋಟಗಾರಿಕೆ, ಸಾವಯವ ಕೃಷಿ, ಹೈನುಗಾರಿಕೆ, ನೀರು ಸಂರಣೆ ಹೀಗೆ ಪ್ರತಿ ೇತ್ರದಲ್ಲಿ ಸಾಕಷ್ಟು ಒಳ್ಳೆಯ ಕೆಲಸ ಮಾಡಲು ಅವಕಾಶ ಸಿಕ್ಕಿದೆ. ಪ್ರಾಮಾಣಿಕವಾಗಿ ಸರ್ಕಾರಿ ಯೋಜನೆಗಳನ್ನು ಜನರಿಗೆ ತಲುಪಿಸಿದಾಗ ಅವರಿಗೂ ಖುಷಿ ಸಿಗುತ್ತದೆ. ನಮಗೂ ತೃಪ್ತಿ ಇರುತ್ತದೆ. ಇನ್ನೂ ಹೆಚ್ಚು ಹೆಚ್ಚು ಒಳ್ಳೆಯ ಕೆಲಸ ಮಾಡಲು ಜನರೂ ನಮ್ಮ ಜೊತೆ ಕೈಜೋಡಿಸುತ್ತಾರೆ.

    ಪ್ರತಿಯೊಂದು ಇಲಾಖೆಯಲ್ಲಿ ಜನರ ಸೇವೆಗೆ ಸಾಕಷ್ಟು ಅವಕಾಶಗಳು ಸಿಗುತ್ತವೆ. ಅದನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವತ್ತ ನಮ್ಮ ಕೆಲಸ ಸಾಗಬೇಕು.
    > ಡಾ. ತ್ರಿಲೋಕ್​ಚಂದ್ರ, ಬಿಬಿಎಂಪಿ ವಿಶೇಷ ಆಯುಕ್ತ

    ಇದನ್ನೂ ಓದಿ: Success Story: ಕೋಚಿಂಗ್ ಹೋಗಲೇ ಇಲ್ಲೆ… ಆದ್ರೂ ಐಎಎಸ್ ಪಾಸ್; ಏನಿದರ‌ ಗುಟ್ಟು..?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts