ಕೋವಿಡ್ 19 ಕಾರಣಕ್ಕೆ ಸಿವಿಲ್ ಸರ್ವೀಸ್ ಎಕ್ಸಾಂ ಮುಂದೂಡಲಾಗದು: ಸುಪ್ರೀಂಗೆ ಯುಪಿಎಸ್​ಸಿ

supreme court
Published on

ನವದೆಹಲಿ: ಕೋವಿಡ್​ 19 ಕಾರಣಕ್ಕೆ ಅಕ್ಟೋಬರ್ 4ಕ್ಕೆ ನಿಗದಿಮಾಡಿರುವ 2020ನೇ ಸಾಲಿನ ಸಿವಿಲ್ ಸರ್ವೀಸ್ ಪ್ರಿಲಿಮ್ಸ್ ಎಕ್ಸಾಂ ಮುಂದೂಡಲಾಗದು ಎಂದು ಯೂನಿಯನ್ ಪಬ್ಲಿಕ್ ಸರ್ವೀಸ್ ಕಮಿಷನ್ (ಯುಪಿಎಸ್​ಸಿ) ಸೋಮವಾರ ಸುಪ್ರೀಂ ಕೋರ್ಟ್​ಗೆ ಸ್ಪಷ್ಟಪಡಿಸಿದೆ. ನಾಗರಿಕ ಸೇವಾ ಪರೀಕ್ಷಾರ್ಥಿಗಳು ಸುಪ್ರೀಂ ಕೋರ್ಟ್​ಗೆ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್​ ನಡೆಸುತ್ತಿದ್ದು, ಇದಕ್ಕೆ ಪ್ರತಿಕ್ರಿಯೆಯಾಗಿ ಯುಪಿಎಸ್​ಸಿ ಈ ಹೇಳಿಕೆ ನೀಡಿದೆ.

ನ್ಯಾಯಮೂರ್ತಿ ಎಎಂ ಖಾನ್​ವಿಲ್ಕರ್​ ನೇತೃತ್ವದ ನ್ಯಾಯಪೀಠ ಈ ಕೇಸ್​ನ ವಿಚಾರಣೆ ನಡೆಸಿದ್ದು, ನಾಳೆಯೊಳಗೆ ಅಫಿಡವಿಟ್ ಸಲ್ಲಿಸುವುದಕ್ಕೆ ತಿಳಿಸಿದೆ. ಅಲ್ಲದೆ, ಪರೀಕ್ಷೆ ಮುಂದೂಡಲಾಗದೇ ಇರುವುದಕ್ಕೆ ಕಾರಣ ನೀಡಬೇಕು ಎಂದೂ ಸೂಚಿಸಿದೆ. ಮುಂದಿನ ವಿಚಾರಣೆಯನ್ನು ಅಕ್ಟೋಬರ್ 23ಕ್ಕೆ ನಡೆಸುವುದಾಗಿ ತಿಳಿಸಿದೆ.

ಈ ಪರೀಕ್ಷೆ ಈ ಹಿಂದೆ ಮೇ 31ಕ್ಕೆ ನಿಗದಿಯಾಗಿತ್ತು. ಆದರೆ, ಕೋವಿಡ್ 19 ಸೋಂಕಿನ ಕಾರಣ ಅಕ್ಟೋಬರ್ 4ಕ್ಕೆ ಮರುನಿಗದಿ ಮಾಡಲಾಗಿದೆ. ದೂರು ಅರ್ಜಿಯ ಪ್ರಕಾರ ಏಳು ಗಂಟೆಗಳ ಅವಧಿಯ ಆಫ್ ಲೈನ್ ಎಕ್ಸಾಂ ಅನ್ನು ದೇಶದ ವಿವಿಧ ನಗರಗಳಲ್ಲಿರುವ 72 ಕೇಂದ್ರಗಳಲ್ಲಿ 6 ಲಕ್ಷ ಆಕಾಂಕ್ಷಿಗಳು ಬರೆಯಲಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net