ನೆಲ್ಯಾಡಿ: ಉಪ್ಪಾರಪಳಿಕೆಯಿಂದ ಗೋಳಿತೊಟ್ಟು ಸಂಚರಿಸುವ ರಸ್ತೆಯ ಉಪ್ಪಾರಹಳ್ಳ ಸಮೀಪ ದಾನಿಗಳ ನೆರವಿನಿಂದ ರಸ್ತೆ ದುರಸ್ತಿ ಮಾಡಲಾಯಿತು.
ಉಪ್ಪರಹಳ್ಳ ಎಂಬಲ್ಲಿ ಮಳೆಯಿಂದಾಗಿ ಡಾಂಬರು ಸಂಪೂರ್ಣ ಕೊಚ್ಚಿ ಹೋಗಿದ್ದು ಸಂಚರಿಸಲು ಸಮಸ್ಯೆಯಾಗುತ್ತಿದೆ. ಇತ್ತೀಚೆಗೆ ಯುವಕನೋರ್ವ ಆ ಸ್ಥಳದಲ್ಲಿ ಅಪಘಾತಕ್ಕೆ ಒಳಗಾಗಿದ್ದ. ಕೆಂಪು ಕಲ್ಲಿನ ಹುಡಿಯನ್ನು ಟಿಪ್ಪರ್ ಮೂಲಕ ತಂದು ಸ್ಥಳೀಯ ಹಿಟಾಚಿ ಮಾಲೀಕ ಸಂತೋಷ್ ಆಲಂಬಿಲ ಉಚಿತವಾಗಿ ಕೆಲಸ ನಿರ್ವಹಿಸಿದರು. ಕೊಕ್ಕಡ ಗ್ರಾಪಂ ನಿಕಟಪೂರ್ವ ಅಧ್ಯಕ್ಷ ಯೋಗೀಶ್ ಆಲಂಬಿಲ, ನವೀನ್ ಆಲಂಬಿಲ ಶ್ರಮದಾನಕ್ಕೆ ಸಹಕರಿಸಿದರು.