ವರುಣ್ ತೇಜ ತಂದೆ ಪಾತ್ರದಲ್ಲಿ ಉಪೇಂದ್ರ?; ಫೆ. 12ರಿಂದ ಶೂಟಿಂಗ್ ಶುರು..

Upendra
Published on

ಬೆಂಗಳೂರು: ಟಾಲಿವುಡ್​ನಲ್ಲಿ ನಿರ್ಮಾಣವಾಗುತ್ತಿರುವ ‘ಗನಿ’ ಚಿತ್ರದಲ್ಲಿ ಸ್ಯಾಂಡಲ್​ವುಡ್​ನ ‘ರಿಯಲ್ ಸ್ಟಾರ್’ ಉಪೇಂದ್ರ ನಟಿಸಲಿದ್ದಾರೆ ಎಂಬುದು ಗೊತ್ತಿರುವ ವಿಚಾರವೇ. ಇದೀಗ ಈ ಚಿತ್ರದ ಚಿತ್ರೀಕರಣ ಶುರುವಾಗಿದ್ದು, ಸದ್ಯದಲ್ಲೇ ಉಪೇಂದ್ರ ಸಹ ಸೆಟ್​ಗೆ ಹಾಜರಿ ಹಾಕಲಿದ್ದಾರೆ. ವರುಣ್ ತೇಜ್ ನಾಯಕತ್ವದ ‘ಗನಿ’ ಬಾಕ್ಸಿಂಗ್ ಹಿನ್ನೆಲೆಯಲ್ಲಿ ನಡೆಯುವ ಸಿನಿಮಾ. ಈ ಚಿತ್ರದಲ್ಲಿ ವರುಣ್ ಬಾಕ್ಸರ್ ಆಗಿ ಕಾಣಿಸಿಕೊಂಡರೆ, ಅವರ ತಂದೆಯಾಗಿ ಉಪೇಂದ್ರ ನಟಿಸಲಿದ್ದಾರೆ ಎಂಬ ಸುದ್ದಿ ಟಾಲಿವುಡ್​ನಲ್ಲಿ ಓಡಾಡುತ್ತಿದೆ. ಇತ್ತ ಖಳನಟನ ಪಾತ್ರಕ್ಕೆ ಜಗಪತಿ ಬಾಬು ಆಯ್ಕೆಯಾಗಿದ್ದು, ಉಪೇಂದ್ರ ಮತ್ತು ಜಗಪತಿ ಬಾಬು ಜುಗಲ್​ಬಂದಿ ಚಿತ್ರದ ಹೈಲೈಟ್ ಅಂತೆ.

ಚಿತ್ರದ ಇನ್ನೊಂದು ವಿಶೇಷತೆಯೆಂದರೆ, ‘ದಬಾಂಗ್’ ಖ್ಯಾತಿಯ ಸಾಯಿ ಮಂಜ್ರೇಕರ್, ಈ ಚಿತ್ರದಲ್ಲಿ ವರುಣ್ ತೇಜ್​ಗೆ ನಾಯಕಿಯಾಗುವ ಮೂಲಕ ಟಾಲಿವುಡ್​ಗೆ ಎಂಟ್ರಿ ಕೊಡುತ್ತಿದ್ದಾರೆ. ಸದ್ಯ ಬಹುಭಾಷೆಯಲ್ಲಿ ಸಿದ್ಧವಾಗುತ್ತಿರುವ ‘ಕಬ್ಜ’ ಸೇರಿ ಹಲವು ಸಿನಿಮಾಗಳಲ್ಲಿ ಬಿಜಿಯಾಗಿರುವ ಉಪೇಂದ್ರ, ‘ಗನಿ’ ಚಿತ್ರದ ಚಿತ್ರೀಕರಣದ ಸಲುವಾಗಿ ಫೆ. 12ರಂದು ಹೈದರಾಬಾದ್​ಗೆ ತೆರಳಲಿದ್ದಾರೆ. ಕಿರಣ್ ಕೊರಪಾಟಿ ಮೊದಲ ಬಾರಿ ನಿರ್ದೇಶನಕ್ಕಿಳಿದಿದ್ದು, ಜುಲೈ 30ಕ್ಕೆ ಈ ಚಿತ್ರ ಬಿಡುಗಡೆ ಆಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net