

ಲಕ್ನೋ: ಭಯೋತ್ಪಾದಕರು ತೆಗೆದುಕೊಳ್ಳುವಂತಹ ಮಾತ್ರೆಗಳನ್ನು ಉತ್ತರ ಪ್ರದೇಶದಲ್ಲಿ ವಿದ್ಯಾರ್ಥಿಗಳು ಸೇವಿಸುತ್ತಿರುವ ಕುರಿತು ಆಘಾತಕಾರಿ ವಿಚಾರವೊಂದು ಬೆಳಕಿಗೆ ಬಂದಿದೆ.
ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ 10ನೇ ತರಗತಿ ವಿದ್ಯಾರ್ಥಿನಿ ಕುಸಿದುಬಿದ್ದು ಆಸ್ಪತ್ರೆ ಸೇರಿದ್ದಳು. ಆಸ್ಪತ್ರೆಯಲ್ಲಿ ವಿದ್ಯಾರ್ಥಿನಿ ಪ್ರಜಕ್ತಾ ಸ್ವರೂಪ್ಗೆ ಚಿಕಿತ್ಸೆ ನೀಡಲಾಗಿತ್ತು. ಉಗ್ರರು ನುಂಗುವ ಮಾತ್ರೆ ಸೇವಿಸಿರುವುದು ತಿಳಿದುಬಂದಿದೆ. ತಪಾಸಣೆ ವೇಳೆ ಆಕೆಯ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿತ್ತು. ನರಗಳು ಊದಿಕೊಂಡಿರುವುದು ಪತ್ತೆಯಾಗಿತ್ತು, ವಿದ್ಯಾರ್ಥಿನಿ, ನಿದ್ದೆ ಬರದಂತೆ ಮಾತ್ರೆ ನುಂಗುತ್ತಿದ್ದೆ ಎಂದಿದ್ದಳು.
ಉಗ್ರರು ನಿದ್ರೆಯನ್ನು ತಡೆಯಲು ಸೇವಿಸುವ ಮಾತ್ರೆ ಇದಾಗಿದ್ದು, ಇದನ್ನು ನುಂಗಿದರೆ 40 ಗಂಟೆಗಳ ಕಾಲ ನಿದ್ರೆ ಬರುವುದಿಲ್ಲ, ಈ ಆಘಾತಕಾರಿ ವಿಚಾರವನ್ನು ವೈದ್ಯರು ಬಹಿರಂಗಪಡಿಸಿದ್ದಾರೆ. ಈ ಔಷಧಿಗಳನ್ನು ‘ಚುನಿಯಾ’ ಮತ್ತು ‘ಮೀಠಿ’ ಮುಂತಾದ ಹೆಸರುಗಳಲ್ಲಿ ಕೆಲ ಶಾಪ್ಗಳಲ್ಲಿ ಮಾರಾಟ ಮಾಡಲಾಗುತ್ತಿದೆ
26/11 ಮುಂಬೈ ದಾಳಿ ವೇಳೆ ಮೊದಲ ಬಾರಿ ಈ ಮಾತ್ರೆಗಳು ಪತ್ತೆಯಾಗಿದ್ದವು. ಉಗ್ರರ ಬ್ಯಾಗ್ಗಳಲ್ಲಿ ಈ ಮಾತ್ರೆಗಳು ಪತ್ತೆಯಾಗಿದ್ದವು. ಪರೀಕ್ಷೆಗಳ ಸಮಯದಲ್ಲಿ ಈ ಮಾತ್ರೆಗೆ ಹೆಚ್ಚು ಬೇಡಿಕೆ ಇದೆ