More

    VIDEO | ಡಾಕೂ ಗಬ್ಬರ್ ಸಿಂಗ್​ಗೆ ಶಿಕ್ಷೆಯಾಗಿದ್ದು ಯಾಕೆ ಗೊತ್ತಾ? ಉತ್ತರಪ್ರದೇಶ ಪೊಲೀಸರ ಅನ್ವೇಷಣೆ!

    ಕಾನ್ಪುರ: ಜನರಲ್ಲಿ ಕಾನೂನಿನ ಬಗ್ಗೆ ಅರಿವು ಮೂಡಿಸಲು, ಕರೊನಾ ನಿಯಮಾವಳಿ ಪಾಲಿಸುವಂತೆ ಪ್ರೇರೇಪಿಸಲು ಇತ್ತೀಚೆಗೆ ಪೊಲೀಸರು ಮಾಡುತ್ತಿರುವ ಪ್ರಯತ್ನಗಳು ತರಹೇವಾರಿ. ಈ ತೆರನ ವಿಭಿನ್ನ ಪ್ರಯತ್ನವೊಂದನ್ನು ಉತ್ತರಪ್ರದೇಶದ ಪೊಲೀಸ್ ಇಲಾಖೆ ತನ್ನ ಟ್ವಿಟರ್ ಖಾತೆಯಲ್ಲಿ ಮಾಡಿದೆ.

    ಹಿಂದಿ ಚಲನಚಿತ್ರ ‘ಶೋಲೆ’ಯಲ್ಲಿ ಬರುವ ಡಾಕೂ ಗಬ್ಬರ್ ಸಿಂಗ್ ಯಾರಿಗೆ ತಾನೇ ಗೊತ್ತಿಲ್ಲ. ಗಬ್ಬರ್ ಪಾತ್ರಧಾರಿ ಅಮ್ಜದ್ ಖಾನ್ ದರ್ಪದಿಂದ ಮಾತನಾಡುವ ಪರಿಯನ್ನು ಅನುಕರಿಸಿದವರೆಷ್ಟೋ ಜನ… ಆ ಚಿತ್ರದಲ್ಲಿ ಗಬ್ಬರ್​ನನ್ನು ಬಂಧಿಸುವ ಪೊಲೀಸ್ ಅಧಿಕಾರಿಯಾಗಿ ಸಂಜೀವ್ ಕುಮಾರ್ ನಟಿಸಿದ್ದಾರೆ. ಬಾಕ್ಸ್ ಆಫೀಸಿನಲ್ಲಿ ಹಿಟ್​ ಆದ ಐತಿಹಾಸಿಕ ಚಿತ್ರವಿದು. ಈಗ ಈ ಫ್ಲಾಶ್​ಬ್ಯಾಕಿಗೆ ಕಾರಣ ಉತ್ತರಪ್ರದೇಶದ ಪೊಲೀಸರ ಹೊಸ ಸಾರ್ವಜನಿಕ ಸಂದೇಶ. ‘ಗಬ್ಬರ್​ಕೋ ಮಿಲಿ ಕಿಸ್​ ಬಾತ್​ ಕಿ ಸಜಾ?’ (ಗಬ್ಬರ್​ಗೆ ಶಿಕ್ಷೆ ಸಿಕ್ಕಿದ್ದು ಯಾಕೆ?) ಎಂಬ ಶೀರ್ಷಿಕೆಯಡಿ ಟ್ವಿಟರ್​ನಲ್ಲಿ ಆ ವಿಡಿಯೋ ತುಣುಕು ಹಂಚಿಕೊಂಡಿರುವ ಪೊಲೀಸರು, ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದು ಅಪರಾಧ; ಅದರಿಂದ ಕರೊನಾ ಹರಡುವ ಸಾಧ್ಯತೆಯೂ ಹೆಚ್ಚು ಎಂಬ ಸಂದೇಶ ನೀಡಿದ್ದಾರೆ.

    ಇದನ್ನೂ ಓದಿ: ಸೆಕ್ಸ್​ ಮಾಡುವಾಗ ಉಸಿರುಗಟ್ಟಿ ಸತ್ತೇ ಹೋದಳು… ಬ್ಯಾಚಲರ್​ ಮನೆಯಲ್ಲಿ ವಿವಾಹಿತೆ ಸಾವು! 

    ಯಾಕ್​ ಥೂ ಎಂದು ಗಬ್ಬರ್ ಉಗುಳುವ, ನಂತರ ಪೊಲೀಸ್​ ಅಧಿಕಾರಿ ಆತನನ್ನು ಅಟ್ಟಿಸಿಕೊಂಡು ಹೋಗಿ ಬಂಧಿಸುವ ದೃಶ್ಯವಿರುವ ಆ ವಿಡಿಯೋ ತುಣುಕನ್ನು ತೋರಿಸಿದ್ದಾರೆ. ಆಮೇಲೆ ಅದರಲ್ಲೇ ಕೊನೆಯಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದು ಕರೊನಾ ಹರಡುವಿಕೆಗೆ ಕಾರಣವಾಗುತ್ತೆ ಮತ್ತು ಅದು ಶಿಕ್ಷಾರ್ಹ ಅಪರಾಧ ಎಂಬ ಸಂದೇಶವನ್ನೂ ಬಿತ್ತರಿಸಿದ್ದಾರೆ. ಈ ಟ್ವೀಟ್ ವೈರಲ್ ಆಗಿದ್ದು, ಪೊಲೀಸರ ಈ ಸೃಜನಾತ್ಮಕ ಪ್ರಯತ್ನಕ್ಕೆ ಹಲವು ನೆಟ್ಟಿಗರ ಪ್ರಶಂಸೆ ಸಿಕ್ಕಿದೆ. ಜೊತೆಗೆ ಪಾನ್ ತಿಂದು ಉಗುಳುವ ಕಾನ್ಪುರದ ಜನರ ಬಗ್ಗೆ ಕೂಡ ಹಲವಾರು ಮೀಮ್​ಗಳು ಬಂದಿವೆ.​

    ಅವ್ರು ರೇಪ್‌ ಮಾಡಿದ್ದಾರೆ ಎಂದ ಗಾಯಕಿ: ನಾವು ನಿತ್ಯ ಸಂಪರ್ಕದಲ್ಲಿದ್ದೆವು ಎಂದ ಸಚಿವ- ಒಟ್ನಲ್ಲಿ ಕೇಸ್‌ ಆಯ್ತು ಸುಖಾಂತ್ಯ

    ಬಿಎಸ್​ಎನ್​ಎಲ್​ ಇಷ್ಟೊಂದು ಬರ್ಬಾದ್ ಆಗಿದ್ಯಾ? ಬರೀ 3 ಸಾವಿರ ರೂ. ಕೊಡಲು ಫಂಡ್ ಇಲ್ವಂತೆ!

    ಬ್ಯಾಂಕ್​ ಲಾಕರ್​ನಲ್ಲೂ ಹಣ ಸೇಫ್​ ಅಲ್ಲ!; ಇಲ್ಲಿಟ್ಟ ಹಣ ಏನಾಯ್ತು ನೋಡಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts