More

    ಅವ್ರು ರೇಪ್‌ ಮಾಡಿದ್ದಾರೆ ಎಂದ ಗಾಯಕಿ: ನಾವು ನಿತ್ಯ ಸಂಪರ್ಕದಲ್ಲಿದ್ದೆವು ಎಂದ ಸಚಿವ- ಒಟ್ನಲ್ಲಿ ಕೇಸ್‌ ಆಯ್ತು ಸುಖಾಂತ್ಯ

    ಮುಂಬೈ: ಗಾಯಕಿಯ ಮೇಲೆ ಅತ್ಯಾಚಾರ ಆರೋಪ ಎದುರಿಸುತ್ತಿರುವ ಮಹಾರಾಷ್ಟ್ರದ ಕಾಂಗ್ರೆಸ್​ ಸಚಿವ ಧನಂಜಯ್‌ ಮುಂಡೆ ಹಾಗೂ ಗಾಯಕಿ ರೇಣು ಶರ್ಮಾ ಅವರ ಪ್ರಕರಣ ಸದ್ಯ ಸುಖಾಂತ್ಯ ಕಂಡಿದೆ.

    ಸಾಮಾಜಿಕ ನ್ಯಾಯ ಖಾತೆ ಸಚಿವ ಆಗಿರುವ ಧನಂಜಯ್‌ ಮುಂಡೆ ಅವರ ವಿರುದ್ಧ ಗಾಯಕಿ ರೇಣು ಶರ್ಮಾ ದೂರು ದಾಖಲು ಮಾಡಿದ್ದರು. ಸಚಿವರು ತಮ್ಮ ಮೇಲೆ ಅತ್ಯಾಚಾರ ಎಸಗಿರುವುದಾಗಿ ಹೇಳಿದ್ದರು. ಈ ಕುರಿತು ತಾವು ಈ ಹಿಂದೆಯೇ ದೂರು ದಾಖಲು ಮಾಡಿದರೂ ಪೊಲೀಸರು ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಗಾಯಕಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಮೇಲಿನ ಅತ್ಯಾಚಾರದ ಕೇಸ್​ ಕುರಿತು ಬರೆದುಕೊಂಡಿದ್ದರು.

    ಸಚಿವರು ತಮಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ. ಅವರ ವಿರುದ್ಧ ಕ್ರಮ ತೆಗೆದುಕೊಳ್ಳಿ ಎಂದು ಪ್ರಧಾನ ಮಂತ್ರಿ ಹಾಗೂ ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಫಡ್ನವೀಸ್​ ಅವರಿಗೂ ಪತ್ರ ಬರೆದಿದ್ದರು.

    ಈ ಆರೋಪದ ಕುರಿತು ಪ್ರತಿಕ್ರಿಯೆ ನೀಡಿದ್ದ ಮುಂಡೆ, 2003ರವರೆಗೂ ನಾನು ಆಕೆಯೊಂದಿಗೆ ದೈಹಿಕ ಸಂಪರ್ಕದಲ್ಲಿದ್ದೆ, ನಮಗೆ ಇಬ್ಬರು ಮಕ್ಕಳಿದ್ದಾರೆ. ಮನೆಯವರೂ ಕೂಡ ನಮ್ಮಿಬ್ಬರ ಸಂಬಂಧವನ್ನು ಒಪ್ಪಿಕೊಂಡಿದ್ದರು. ಇದೀಗ ಅಕ್ಕ-ತಂಗಿ ಸೇರಿ ಬ್ಲ್ಯಾಕ್​ಮೇಲ್​ ಮಾಡುತ್ತಿದ್ದಾರೆ ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ರೇಣು ವಿರುದ್ಧವೇ ಅವರು ದೂರು ದಾಖಲಿಸಿದ್ದರು.

    ಒಟ್ಟಿನಲ್ಲಿ ಈ ಪ್ರಕರಣವೀಗ ಸುಖಾಂತ್ಯಗೊಂಡಿದೆ. ಕಾರಣ, ಪೊಲೀಸರಿಗೆ ನೀಡಿದ್ದ ದೂರನ್ನು ರೇಣು ವಾಪಸ್‌ ಪಡೆದಿದ್ದಾರೆ. ‘ಮುಂಡೆ ವಿರುದ್ಧ ನೀಡಿದ್ದ ದೂರನ್ನು ಹಿಂದಕ್ಕೆ ತೆಗೆದುಕೊಳ್ಳುತ್ತಿದ್ದೇನೆ’ ಎಂದು ಮಹಿಳೆ ತಿಳಿಸಿರುವುದಾಗಿ, ಪ್ರಕರಣದ ತನಿಖೆ ನಡೆಸುತ್ತಿರುವ ತನಿಖಾ ಅಧಿಕಾರಿಗೆ ಮಾಹಿತಿ ನೀಡಿದ್ದಾರೆ. ಆದರೆ ದೂರು ಹಿಂಪಡೆದಿರುವುದಕ್ಕೆ ಯಾವುದೇ ಕಾರಣವನ್ನು ಉಲ್ಲೇಖಿಸಿಲ್ಲ ಎಂದಿದ್ದಾರೆ.
    ದೂರು ಹಿಂಪಡೆದಿರುವ ಸಂಬಂಧ ನೋಟರಿ ದೃಢೀಕೃತ ಪ್ರಮಾಣ ಪತ್ರ ಸಲ್ಲಿಸುವಂತೆ ಪೊಲೀಸರು ದೂರುದಾರರಿಗೆ ಸೂಚಿಸಿದ್ದಾರೆ.

    ಮಕ್ಕಳಾಗಿಲ್ಲವೆಂದು ಮತ್ತೊಂದು ಮದ್ವೆಯಾದ್ರೆ ಮೊದಲಾಕೆಗೆ ಆರು ಹುಟ್ಟಿದವು- ಆಸ್ತಿ ವಿಭಾಗ ಹೇಗೆ?

    ಶಿವಮೊಗ್ಗದಲ್ಲಿ ಭೀಕರ ದುರಂತಕ್ಕೆ ಎಂಟು ಬಲಿ- ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಎಂದ ಸಿಎಂ

    ಕಬಡ್ಡಿ ಆಡುತ್ತಲೇ ಯುವಕನ ಪ್ರಾಣ ಹೋಯ್ತು! ಆಘಾತಕಾರಿ ಘಟನೆಯ ವಿಡಿಯೋ ವೈರ‌ಲ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts