More

    ಬೆಂಗಳೂರಿನಲ್ಲಿ ಪಂಡಿತ್ ಕೈವಲ್ಯಕುಮಾರ್ ಸಂಗೀತೋತ್ಸವ ಆಯೋಜನೆ

    ಬೆಂಗಳೂರು: ಕಿರಾಣಾ ಘರಾನಾದ ಪ್ರಸಿದ್ಧ ಸಂಗೀತಗಾರ, ಇತ್ತೀಚೆಗಷ್ಟೇ ಫ್ರಾನ್ಸ್ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್​​ಗೆ ಭಾಜನರಾದ ಪಂಡಿತ್ ಕೈವಲ್ಯಕುಮಾರ ಗುರವ ಅವರ ಸಂಗೀತ ಕಛೇರಿ ಯುಗಾದಿ (ಮಾ.22) ದಿನ ನಗರದಲ್ಲಿ ಆಯೋಜನೆಗೊಂಡಿದೆ.

    Pandit ravindra katoti
    ಪಂಡಿತ್ ರವೀಂದ್ರ ಕಾಟೋಟಿ

    ಬಸವನಗುಡಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಸಭಾಂಗಣದಲ್ಲಿ ಸಂಜೆ 4. 45ರಿಂದ ಈ ಯುಗಾದಿ ಸಂಗೀತೋತ್ಸವ ನಡೆಯಲಿದ್ದು, ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ಎನ್.ಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಮಹೇಶ ಕರಜಗಿ, ಹರಿದಾಸ ಸಂಪದ ಟ್ರಸ್ಟ್​​ನ ಬಿ.ಎಸ್. ಶಶಿಕುಮಾರ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.

    ಇದನ್ನೂ ಓದಿ: ಒಂದೇ ಕಲ್ಲಲ್ಲಿ ಎರಡು ಹಕ್ಕಿ ಹೊಡೆಯಲು ಸಂಸದೆ ಸುಮಲತಾ ಅಂಬರೀಷ್​ ಪ್ಲಾನ್​!

    ಕೈವಲ್ಯಕುಮಾರ ಆವರಿಗೆ ತಬಲಾದಲ್ಲಿ ಪಂಡಿತ್ ಕೇಶವ ಜೋಶಿ, ಹಾರ್ಮೋನಿಯಂನಲ್ಲಿ ಪಂಡಿತ್ ರವೀಂದ್ರ ಕಾಟೋಟಿ, ತಾಳದಲ್ಲಿ ವೆಂಕಟೇಶ್ ಪುರೋಹಿತ್ ಸಾಥ್ ನೀಡುವರು. ಇದಕ್ಕೂ ಮುನ್ನ ಸಿದ್ಧಲಿಂಗಯ್ಯ ಹಿರೆಮಠ ಅವರ ಗಾಯನವಿದ್ದು ವಿನಯ ಕುಲಕರ್ಣಿ ಹಾಗೂ ತೇಜಸ್ ಕಾಟೋಟಿ ಕ್ರಮವಾಗಿ ತಬಲಾ ಮತ್ತು ಹಾರ್ಮೋನಿಯಂ ಸಾಥ್ ನೀಡುವರು. ಬಾಗಲಕೋಟೆಯ ಸಂಗೀತ ವಿದ್ಯಾಲಯ ಹಾಗೂ ಕಲಾಸಂಘವು ಬೆಂಗಳೂರಿನ ಅನಾಮಿಕ ಹಾಗೂ ನಿತಿನ್ ದವಳೆ ಅವರ ಸಹಕಾರದಲ್ಲಿ ಕಾರ್ಯಕ್ರಮ ಆಯೋಜಿಸಿದೆ.

    ಏಪ್ರಿಲ್​ 14ಕ್ಕೆ ಬಿಡುಗಡೆಯಾಗಲಿದೆ ಕೋಮಲ್​ ಹೊಸ ಚಿತ್ರ ‘ಉಂಡೆನಾಮ’

    ಈಗಿನ ಟೀಮ್​ ಇಂಡಿಯಾದಲ್ಲಿ ತನ್ನಂತೆ ಬ್ಯಾಟಿಂಗ್ ಮಾಡುವ ಆಟಗಾರ ಯಾರೆಂಬುದನ್ನು ತಿಳಿಸಿದ ವೀರೂ!

    ಧನುಷ್​ ಜತೆ ಮೀನಾ ಮದುವೆಯಂತೆ! ಸ್ಫೋಟಕ ಮಾಹಿತಿ ಬಿಚ್ಚಿಟ್ಟ ತಮಿಳು ನಟ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts