ಪೊಲೀಸ್​ ಠಾಣೆಯ ಹೊರಗೆ ಕುಳಿತು ಹುಕ್ಕಾ ಸೇವನೆ! ರೀಲ್ಸ್​ ಮಾಡಲು ಹೋಗಿ ಜೈಲು ಪಾಲಾದ ಯುವಕ

Hookah
Published on

ಲಖನೌ: ಪೊಲೀಸ್​ ಠಾಣೆಯ ಹೊರಗೆ ಕುಳಿತು ಹುಕ್ಕಾ ಸೇವಿಸಿದ ಯುವಕನನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ. ಹೌಪುರ್​ ಜಿಲ್ಲೆಯ ಠಾಣೆ ಹೊರಗೆ ಈ ಘಟನೆ ನಡೆದಿದೆ.

ಠಾಣೆಯ ಹತ್ತಿರದಲ್ಲೇ ಹುಕ್ಕಾ ಸೇವಿಸಿದ್ದಲ್ಲದೆ, ಅದಕ್ಕೆ ಸಂಬಂಧಿಸಿದ ವಿಡಿಯೋವನ್ನು ಯುವಕ ತನ್ನ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ. ವಿಡಿಯೋ ವೈರಲ್​​ ಆದ ಬೆನ್ನಲ್ಲೇ ಅಧಿಕಾರಿಗಳ ಗಮನಕ್ಕೆ ಬಂದಿದೆ. ತಕ್ಷಣ ಯುವಕನ ವಿರುದ್ಧ ಕ್ರಮ ಜರುಗಿಸುವಂತೆ ಅಧಿಕಾರಿಗಳು ಸೂಚನೆ ನೀಡಿದ ಮೇಲೆ ಬಂಧಿಸಲಾಗಿದೆ.

ಯುವಕನೊಬ್ಬ ಉತ್ತರ ಪ್ರದೇಶದ ಹಫೀಜ್​ಪುರ ಪೊಲೀಸ್​ ಠಾಣೆಯ ಹೊರಗಡೆ ಕುಳಿತು ಹುಕ್ಕಾ ಸೇದುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.

ಪೊಲೀಸ್ ಠಾಣೆಯಲ್ಲಿ ವಿಡಿಯೋ ಚಿತ್ರೀಕರಣ ಮಾಡಲು ಇಷ್ಟಪಟ್ಟಿದ್ದ ವ್ಯಕ್ತಿ, ತನ್ನೊಂದಿಗೆ ಹುಕ್ಕಾ ತಂದಿದ್ದ ಎನ್ನಲಾಗಿದೆ. ವಿಡಿಯೋ ಚಿತ್ರೀಕರಣ ಮಾಡುವಾಗ ಆ ವ್ಯಕ್ತಿ ತಮ್ಮ ಗಮನಕ್ಕೆ ಬರಲಿಲ್ಲ ಎಂದು ಪೊಲೀಸ್ ಠಾಣೆಯ ಅಧಿಕಾರಿಗಳು ತಿಳಿಸಿದ್ದಾರೆ.

ಆನ್‌ಲೈನ್‌ನಲ್ಲಿ ರೀಲ್ ಕಾಣಿಸಿಕೊಂಡ ನಂತರ ಯುಪಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಯುವಕನನ್ನು ಬಂಧಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net