

ಲಖನೌ: ಎನ್ಕೌಂಟರ್ನಲ್ಲಿ ಸತ್ತ ಗ್ಯಾಂಗ್ಸ್ಟರ್ ವಿಕಾಸ್ ದುಬೆ ಸಹೋದರ ದೀಪ್ ಪ್ರಕಾಶ್ ದುಬೆ ತಲೆಗೆ ಉತ್ತರ ಪ್ರದೇಶ ಸರ್ಕಾರ 20,000 ರೂ.ಬಹುಮಾನ ಘೋಷಿಸಿದೆ.
ಸಹೋದರ ವಿಕಾಸ್ ದುಬೆಯ ಅಕ್ರಮ ಕೆಲಸಗಳು, ಅಪರಾಧಗಳಲ್ಲಿ ದೀಪ್ ಪ್ರಕಾಶ್ ದುಬೆಯ ಪಾಲೂ ಇದೆ. ಈತನಿಗೆ ಸೋದರನ ಎಲ್ಲ ಚಟುವಟಿಕೆಗಳೂ ಗೊತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ದೀಪ್ ಪ್ರಕಾಶ್ ಲಖನೌದಲ್ಲಿ ತನ್ನ ಪತ್ನಿ, ಕುಟುಂಬದೊಂದಿಗೆ ವಾಸವಾಗಿದ್ದ. ಆದರೆ ಶೂಟ್ಔಟ್ ಆದ ದಿನದಿಂದಲೇ ನಾಪತ್ತೆಯಾಗಿದ್ದು ಇನ್ನೂ ಅನುಮಾನಕ್ಕೆ ಕಾರಣವಾಗಿದೆ.
ಒಂದೊಮ್ಮೆ ದೀಪ ಪ್ರಕಾಶ್ ನಮಗೆ ಸಿಕ್ಕರೆ, ಇನ್ನೂ ಅನೇಕ ಮಾಹಿತಿಗಳನ್ನು ನಾವು ಕಲೆಹಾಕಬಹುದಾಗಿದೆ. ವಿಕಾಸ್ ದುಬೆ ಸಂಪರ್ಕದಲ್ಲಿ ಯಾರ್ಯಾರು ಇದ್ದಾರೆ ಎಂಬ ವಿವರಗಳೂ ಲಭ್ಯವಾಗುತ್ತವೆ ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್)