ಯೋಗಿ ಆದಿತ್ಯನಾಥ್​​ಗೆ ಹಿಟ್ಲರ್​ ಆತ್ಮ ಆವರಿಸಿದೆ ಎಂದಿದ್ದೇಕೆ ಅಸಾದುದ್ದೀನ್ ಓವೈಸಿ

Untitled-design-30
Published on

ಹೈದರಾಬಾದ್​​: ಕನ್ವರ್ ಯಾತ್ರೆ ಮಾರ್ಗದಲ್ಲಿರುವ ಹೋಟೆಲ್​​​ಗಳ ಮಾಲೀಕರು ಮತ್ತು ಉದ್ಯೋಗಿಗಳ ಹೆಸರನ್ನು ಪ್ರದರ್ಶಿಸುವಂತೆ ಮುಜಾಫರ್‌ನಗರ ಪೊಲೀಸರ ಆದೇಶವು ಅಸ್ಪೃಶ್ಯತೆಯನ್ನು ಉತ್ತೇಜಿಸುತ್ತದೆ ಎಂದು ಲೋಕಸಭೆ ಸಂಸದ ಮತ್ತು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಗುರುವಾರ ಹೇಳಿದ್ದಾರೆ. ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್​​ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಯೋಗಿ ಆದಿತ್ಯನಾಥ್ ಅವರಿಗೆ ಹಿಟ್ಲರ್​​ ಆತ್ಮ ಆವರಿಸಿದೆ ಎಂದು ಹೇಳಿದ್ದಾರೆ.

ಈ ಆದೇಶವನ್ನು ನಾನು ಖಂಡಿಸುತ್ತೇನೆ, ಏಕೆಂದರೆ ಇದು ಅಸ್ಪೃಶ್ಯತೆಯನ್ನು ನಿಷೇಧಿಸುವ ಭಾರತೀಯ ಸಂವಿಧಾನದ 17ನೇ ವಿಧಿಯನ್ನು ಉಲ್ಲಂಘಿಸುತ್ತದೆ. ಉತ್ತರಪ್ರದೇಶ ಸರ್ಕಾರ ಅಸ್ಪೃಶ್ಯತೆಯನ್ನು ಉತ್ತೇಜಿಸುತ್ತಿದೆ. ಹೆಸರು ಮತ್ತು ಧರ್ಮದ ಪ್ರದರ್ಶನವನ್ನು ನಿರ್ದೇಶಿಸುವ ಈ ಆದೇಶವು ಆರ್ಟಿಕಲ್ 21 (ಜೀವನದ ಹಕ್ಕು) ಮತ್ತು ಆರ್ಟಿಕಲ್ 19 (ಜೀವನದ ಹಕ್ಕು) ಉಲ್ಲಂಘನೆಯಾಗಿದೆ ಎಂದು ಹೇಳಿದ್ದಾರೆ.

ಆದೇಶ ಹೊರಡಿಸಿದಾಗಿನಿಂದ ಮುಜಾಫರ್‌ನಗರದ ಅನೇಕ ಮುಸ್ಲಿಂ ಉದ್ಯೋಗಿಗಳು ತಮ್ಮ ಉದ್ಯೋಗವನ್ನು ಕಳೆದುಕೊಂಡಿದ್ದಾರೆ, ಏಕೆಂದರೆ ಢಾಬಾ ಮಾಲೀಕರು ಅವರನ್ನು ಕೆಲಸ ಬಿಡಲು ಹೇಳಿದ್ದಾರೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಮೆಕ್‌ಡೊನಾಲ್ಡ್ಸ್, ಕೆಎಫ್‌ಸಿ ಮತ್ತು ಪಿಜ್ಜಾ ಹಟ್‌ ಸಂಸ್ಥೆಗಳಿವೆ. ಆದರೆ ಅವುಗಳ ವಿರುದ್ಧ ಯಾವುದೇ ನಿರ್ದೇಶನಗಳಿಲ್ಲ. ನೀವು (ಸರ್ಕಾರ) ಅವರೊಂದಿಗೆ ಏನಾದರೂ ಒಪ್ಪಂದ ಮಾಡಿಕೊಂಡಿದ್ದೀರಾ? ಈ ಆದೇಶವು ಉತ್ತರ ಪ್ರದೇಶದ ಮುಖ್ಯಮಂತ್ರಿಗೆ ಹಿಟ್ಲರ್‌ನ ಆತ್ಮವಿದೆ ಎಂದು ಸ್ಪಷ್ಟವಾಗಿ ತೋರಿಸುತ್ತದೆ. ಇದು ಕ್ರಿಸ್ಟಾಲ್‌ನಾಚ್ ಚಳುವಳಿಯಂತೆ ಕಾಣುತ್ತದೆ ಎಂದು ಹೇಳಿದ್ದಾರೆ.

ಇಂತಹ ಆದೇಶಗಳನ್ನು ಅನುಮೋದಿಸಲು ಅವರು ಯಾರು ಎಂದು ಎಐಎಂಐಎಂ ಮುಖ್ಯಸ್ಥ ಓವೈಸಿ, ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ್ದಾರೆ. ನೀವು ನಿರ್ದಿಷ್ಟ ಸಮುದಾಯಕ್ಕಾಗಿ ಮಾತ್ರ ಕೆಲಸ ಮಾಡುತ್ತಿದ್ದೀರಾ? ಸಂವಿಧಾನದ ಪ್ರಸ್ತುತತೆ ಎಲ್ಲಿದೆ? ಸಂವಿಧಾನವನ್ನು ಕಸದ ಬುಟ್ಟಿಗೆ ಎಸೆದಿದ್ದೀರಾ? ನರೇಂದ್ರ ಮೋದಿಯವರು ಸಂವಿಧಾನವನ್ನು ಎತ್ತಿಕೊಂಡು ಮುತ್ತಿಡುವುದನ್ನು ನೋಡುತ್ತೇವೆ ಮತ್ತು ಇದೆಲ್ಲವೂ ನಾಟಕವಾಗಿದೆ ಎಂದು ಟೀಕಿಸಿದರು. ಹಿಂದುತ್ವ ಸಂಘಟನೆಗಳ ಒತ್ತಡಕ್ಕೆ ಮಣಿದಿರುವ ರಾಜ್ಯ ಸರ್ಕಾರ ಮುಸ್ಲಿಂ ವರ್ತಕರ ಬಹಿಷ್ಕಾರಕ್ಕೆ ಉತ್ತೇಜನ ನೀಡುತ್ತಿದೆ ಎಂದು ಆರೋಪಿಸಿದ್ದಾರೆ.

ಇನ್ನು ಕೆಲವೇ ದಿನಗಳಲ್ಲಿ ಕನ್ವರ್ ಯಾತ್ರೆ ಆರಂಭವಾಗಲಿದೆ. ಉತ್ತರ ಪ್ರದೇಶದಾದ್ಯಂತ ಈ ನಿಟ್ಟಿನಲ್ಲಿ ಸಿದ್ಧತೆಗಳು ನಡೆಯುತ್ತಿವೆ. ಯಾತ್ರೆ ಆರಂಭವಾಗುವ ಕೆಲವು ದಿನಗಳ ಮೊದಲು ಮುಜರಾಯಿ ಪೊಲೀಸರಿಂದ ಸೂಚನೆ ಬಂದಿದೆ. ಕನ್ವರ್ ಯಾತ್ರೆಯ ಸಂದರ್ಭದಲ್ಲಿ ಮುಜಾಫರ್‌ನಗರದ ಎಸ್‌ಎಸ್‌ಪಿ ಅಭಿಷೇಕ್ ಸಿಂಗ್ ಅವರು ಹೆದ್ದಾರಿಯಲ್ಲಿರುವ ಹೆದ್ದಾರಿಯ ಹೊಟೇಲ್, ಢಾಬಾ, ಬಂಡಿಗಳಲ್ಲಿ ಮಾಲೀಕರು ಮತ್ತು ಉದ್ಯೋಗಿಗಳ ಹೆಸರನ್ನು ಬರೆಯಬೇಕು ಎಂದು ಆದೇಶಿಸಿದ್ದರು. (ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net