

ಮುಂಬೈ: ನಮಗೆಲ್ಲರಿಗೂ ತಿಳಿದಿರುವಂತೆ ಮುಂಬೈನಲ್ಲಿ ಅಪಾರ್ಟ್ಮೆಂಟ್ ಬಾಡಿಗೆಗೆ ಪಡೆಯುವುದು ಸಾಮಾನ್ಯ ಜನರಿಗೆ ತುಂಬಾ ಕಷ್ಟ. ಕೆಲವು ಜನರು ಹಣದ ತೊಂದರೆಯ ಕಾರಣದಿಂದಾಗಿ ಫ್ಲಾಟ್ಅನ್ನು ಹುಡುಕಲು ಕಷ್ಟಪಡುತ್ತಾರೆ, ಆದರೆ ಇನ್ನೂ ಕೆಲವು ಮಾಲೀಕರು ಕೆಲವು ಧರ್ಮಗಳನ್ನು ಅನುಸರಿಸುವ ಜನರಿಗೆ ಮಾತ್ರವೇ ತಮ್ಮ ಫ್ಲಾಟ್ಗಳನ್ನು ಬಾಡಿಗೆಗೆ ನೀಡಲು ಮುಂದಾಗುತ್ತಾರೆ.
ಮಂಗಳವಾರ, 'ಬಿಗ್ ಬಾಸ್ ಒಟಿಟಿ' ಖ್ಯಾತಿಯ ಉರ್ಫಿ ಜಾವೇದ್, ಟ್ವಿಟರ್‌ನಲ್ಲಿ ಇದೇ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ಮುಂಬೈನಲ್ಲಿ ಅಪಾರ್ಟ್ಮೆಂಟ್ ಬಾಡಿಗೆಗೆ ಪಡೆಯುವುದು ತನಗೆ ಕಷ್ಟವಾಗುತ್ತಿದೆ ಎಂದು ಹೇಳಿದ ಉರ್ಫಿ, ಹಿಂದೂ ಮತ್ತು ಮುಸ್ಲಿಂ ಮಾಲೀಕರು ಆಕೆಗೆ ಅಪಾರ್ಟ್ಮೆಂಟ್ ಬಾಡಿಗೆಗೆ ನೀಡಲು ಬಯಸುವುದಿಲ್ಲ ಎಂದು ಹೇಳಿದ್ದಾರಂತೆ.
"ನನ್ನ ಉಡುಗೆ ತೊಡುಗೆಯ ಕಾರಣಕ್ಕಾಗಿ ಮುಸ್ಲಿಂ ಮಾಲೀಕರು ನನಗೆ ಮನೆ ಬಾಡಿಗೆಗೆ ನೀಡಲು ಬಯಸುವುದಿಲ್ಲ. ನಾನು ಮುಸ್ಲಿಂ ಎಂಬ ಕಾರಣಕ್ಕಾಗಿ ಹಿಂದು ಮಾಲೀಕರು ನನಗೆ ಬಾಡಿಗೆ ನೀಡಲು ಬಯಸುವುದಿಲ್ಲ. ಕೆಲವು ಮಾಲೀಕರು ನನಗೆ ಇರುವ ರಾಜಕೀಯ ಬೆದರಿಕೆಗಳ ಬಗ್ಗೆ ಆಕ್ಷೇಪ ಎತ್ತಿದ್ದಾರೆ. ಬಾಡಿಗೆ ಅಪಾರ್ಟ್ಮೆಂಟ್ ಹುಡುಕುವುದು ಮುಂಬೈನಲ್ಲಿ ತುಂಬಾ ಕಷ್ಟವಾಗಿದೆ" ಎಂದು ಉರ್ಫಿ ಬರೆದಿದ್ದಾರೆ.