More

    ಬೇಡ ಅಂದ್ರು ಬಿಡಲಿಲ್ಲ -ಕರೊನಾ ಕಾಟ ತಪ್ಪಲಿಲ್ಲ..

    ಬೀಜಿಂಗ್​: ಒಂದು ತಗೊಂಡ್ರೆ ಇನ್ನೆರಡು ಉಚಿತ ಎನ್ನುವುದು ವ್ಯಾಪಾರದ ಆಕರ್ಷಕ ಘೋಷಣೆ. ಕರೊನಾ COVID19 ವೈರಸ್​ ಸೋಂಕು ಹರಡುತ್ತಿರುವ ಮತ್ತು ಲಾಕ್​ಡೌನ್ ನ ಈ ಅವಧಿಯಲ್ಲೇನು ವ್ಯಾಪಾರ! ಎಂದು ಹುಬ್ಬೇರಿಸಬೇಡಿ. ಇದು ವ್ಯಾಪಾರಕ್ಕೆ ಸಂಬಂಧಿಸಿದ ಮಾತಲ್ಲ – ಕ್ವಾರಂಟೈನ್​ಗೆ ಸಂಬಂಧಿಸಿದ್ದು! ವಿಷಾದನೀಯ ವಿಚಾರವಾದರೂ ಇದು ವಾಸ್ತವ!

    ಹೌದು.. ಪೂರ್ವ ಚೀನಾದ ಶಾನ್​ಡಾಂಗ್​ ಪ್ರಾಂತ್ಯದದ ಜಿನಿಂಗ್ ಪಟ್ಟಣದಲ್ಲಿ ನಡೆದ ಘಟನೆ ಇದು. ಒಂದಕ್ಕೆ ಎರಡು ಕ್ವಾರಂಟೈನ್ ಪಡೆದ ವ್ಯಕ್ತಿಯ ಹೆಸರು ಕ್ಸಿಯಾಂಗ್​. ಬಹುತೇಕ ಎರಡು ತಿಂಗಳು ಕ್ವಾರಂಟೈನ್ ಅವಧಿ ಅನುಭವಿಸಿದ ಮಹಾನುಭಾವ. ಈ ಘಟನೆಯನ್ನು ಸ್ವತಃ ಕ್ಸಿಯಾಂಗ್ ವಿವರಿಸುತ್ತ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡಿದ್ದಾರೆ. ಈ ವಿಡಿಯೋ ಸದ್ಯ ಚೀನಾದಲ್ಲಿ ಮನೆಮಾತಾಗಿದೆ!

    ಕರೊನಾ ಸೋಂಕು ತಗುಲಿ ಕಣ್ಣಾರೆ ಸಾವು ಕಂಡ ಆ ಕ್ಷಣ – ಮಹಿಳೆಯೊಬ್ಬರ ಅನುಭವ ಕಥನ

    ಒಂದು ರೀತಿಯಲ್ಲಿ ಇದು ತಪ್ಪೊಪ್ಪಿಗೆಯ ಹೇಳಿಕೆಯಂತೆ ಕಂಡರೂ, ಅನೇಕರು ಇದನ್ನು ತಮಾಷೆಯಾಗಿ ತೆಗೆದುಕೊಂಡಿದ್ದಾರೆ. ಕ್ಸಿಯಾಂಗ್ ಅವರ ನಿರೂಪಣೆಯೂ ಅದೇ ರೀತಿ ಇದೆ ಕೂಡ. ಅವರ ಮಾತುಗಳಲ್ಲೇ ನಿರೂಪಿಸುವುದಾದರೆ,

    ಜಿನ್ನಿಂಗ್ ಪಟ್ಟಣ ಫೆ.8ರಂದು ಲಾಕ್​ಡೌನ್​ಗೆ ಒಳಗಾದ ವೇಳೆ ನಾನು ಮೊದಲ ಬಾರಿ ಕ್ವಾರಂಟೈನ್​ಗೆ ಒಳಗಾಗಬೇಕಾಗಿ ಬಂತು. ಈ ಲಾಕ್​ಡೌನ್​ಗೆ ಎರಡು ದಿನ ಹಿಂದಷ್ಟೇ ನಾನು ಫಿಲಿಪ್ಪೀನ್ಸ್​ನಿಂದ ವಾಪಸಾಗಿದ್ದೆ. 14 ದಿನಗಳ ಕ್ವಾರಂಟೈನ್​ಗೆ ಒಳಗಾಗಲು ಅಧಿಕಾರಿಗಳು ಸೂಚಿಸಿದ್ದರು. ಅದು ನನಗೆ ಬಹಳ ತ್ರಾಸದಾಯಕ ವಿಚಾರ ಎನಿಸಿತ್ತು. ಆದರೆ 50 ದಿನ ಒಂದೇ ಕೊಠಡಿಯೊಳಗೆ ಕುಳಿತಿರುವುದಕ್ಕಿಂತ ಆರಂಭದಲ್ಲೇ 14 ದಿನ ಕುಳಿತಿದ್ದರೆ ಎಷ್ಟೋ ಬೆಟರ್ ಅಂತ ಈಗ ಅನ್ನಿಸ್ತಾ ಇದೆ. ಈ ರೀತಿ ಕುಳಿತಿರಬೇಕಾದ ಪ್ರಸಂಗ ಯಾಕೆ ಎದುರಾಯ್ತು ಗೊತ್ತ? ವಿವರಿಸ್ತೇನೆ ಓದಿ..

    ಭರ್ಜರಿ ಹನಿಮೂನ್​!- ಐಷಾರಾಮಿ ರೆಸಾರ್ಟ್​ನಲ್ಲಿ ಇರೋದು ಇದೊಂದೇ ಜೋಡಿ- 6 ದಿನಕ್ಕೆ ಬಂದವರೀಗ 26 ದಿನ ಇರುವಂತಾಗಿದೆ ನೋಡಿ..

    ಮೊದಲ 14 ದಿನಗಳ ಅವಧಿಯ ಕ್ವಾರಂಟೈನ್ ಮುಗಿಯಿತು ಎಂದು ನಿಟ್ಟುಸಿರು ಬಿಡುತ್ತ ಮನೆಯಿಂದ ಹೊರಬಿದ್ದೆ. ಒಂದು ವಾಕ್ ಹೋಗಿ ಬರೋಣ ಅಂತ ಬೀದಿಗಿಳಿದೆ. ಲಾಕ್​ಡೌನ್ ಅವಧಿ ಮುಗಿದಿರಲಿಲ್ಲ. ಹೊರಗೆ ದಕ್ಷಿಣ ಕೊರಿಯಾದಿಂದ ಆಗತಾನೇ ಬಂದ ಪಕ್ಕದ ಮನೆಯಾತ ಸಿಕ್ಕಿದ. ಆತ ನೇರವಾಗಿ ನನ್ನ ಬಳಿ ಬಂದು ಮಾತನಾಡಿದ. ಆತನ ಜತೆಗೆ ಒಬ್ಬರು ಆರೋಗ್ಯ ಸಿಬ್ಬಂದಿಯೂ ಇದ್ದರು. ಹಾಗೆ, ಆತ ಮತ್ತೆ ನನ್ನನ್ನು ಕ್ವಾರಂಟೈನ್​ಗೆ ದೂಡಿದ. ಮತ್ತೆ ಹದಿನಾಲ್ಕು ದಿನಗಳ ಏಕಾಂತವಾಸ. ಈ ಹದಿನಾಲ್ಕು ದಿನಗಳಲ್ಲಿ ಕೋಣೆಯೊಳಗಿನ ನೆಲದ ಮೇಲೆ ಅಂಗಾತ ಮಲಗಿಕೊಂಡು ಏನೂ ಮಾಡದೇ ಹಾಗೆಯೇ ಕಳೆದುಬಿಟ್ಟೆ. ಅಕ್ಷರಶಃ ಬೆಚ್ಚಿಬಿದ್ದೆ ನಾನು. ಇಷ್ಟಾಗಿ ನಾನು ಮನೆಯಿಂದ ಹೊರಗೆ ಇಳಿಯುವ ಧೈರ್ಯ ಅಥವಾ ಸಾಹಸಕ್ಕೆ ಮುಂದಾಗಲಿಲ್ಲ.

    ಅಸಹ್ಯ! ಲಾಕ್​ಡೌನ್ ನಿಯಮ ಗಾಳಿಗೆ ತೂರಿ ಬಯಲಿಗೆ ಬಂತು ಜೋಡಿ- ಅವರ ಕಾಮದಾಟ ನೋಡಿ ಸುತ್ತಮುತ್ತಲಿನವರು ಶಾಕ್​!

    ಹಾಗಾದರೆ ಎರಡನೇ ಅವಧಿಯ ಕ್ವಾರಂಟೈನ್ ಮುಗಿಯಿತು. ನಿರಂತರ ಮೂರನೇ ಅವಧಿಯ ಕ್ವಾರಂಟೈನ್​ಗೆ ನಾನು ಒಳಗಾಗಬೇಕಾಗಿ ಬಂದ ಬಗೆಯ ಬಗ್ಗೆ ಕುತೂಹಲವೇ? ಇರಿ.. ವಿವರಿಸ್ತೇನೆ ಓದಿ…

    ಆ ಎರಡನೇ ಅವಧಿಯ 14 ದಿನಗಳ ಏಕಾಂತವಾಸ ಮುಗಿಯುತ್ತಿರುವಂತೆ ನನ್ನ ತಮ್ಮ ಸಿಂಗಾಪುರದಿಂದ ಮನೆಗೆ ಬಂದ. ಅಯ್ಯೋ ನನ್ನ ವಿಧಿಯೇ ಎಂದು ಹಣೆಬರೆಹಕ್ಕೆ ಬೈಯುತ್ತಾ ಮತ್ತೆ 14 ದಿನಗಳ ಕ್ವಾರಂಟೈನ್​ಗೆ ಒಳಗಾದೆ. ಹೀಗೆ ಮೂರು ಅವಧಿಯ ಕ್ವಾರಂಟೈನ್​ ಅನ್ನು ಏನೂ ಕೆಲಸ ಮಾಡದೆ ನೆಲದ ಮೇಲೆ ಹೊರಳಾಡುತ್ತ, ಗೋಳಾಡುತ್ತ ಕಳೆದೆ ಎಂದು ಅವರು ವಿವರಿಸಿದ್ದಾರೆ. (ಏಜೆನ್ಸೀಸ್)

    ಸಿಗರೆಟ್​ ಬೇಕಾಗಿತ್ತು ಅಂತ ಫ್ರಾನ್ಸ್​ ನಿಂದ ಸ್ಪೇನ್​ಗೆ ಹೊರಟ!- ರಕ್ಷಿಸೋದಕ್ಕೆ ಹೆಲಿಕಾಪ್ಟರೇ ಬರಬೇಕಾಯಿತು !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts