

ಮುಂಬೈ: ಶಾರುಖ್, ಸಲ್ಮಾನ್ ಖಾನ್, ಅಮಿತಾಬ್ ಬಚ್ಚನ್ ಅಥವಾ ಧರ್ಮೇಂದ್ರ, ಈ ಸ್ಟಾರ್‌ಗಳ ಅಭಿಮಾನಿಗಳ ಸಂಖ್ಯೆ ಕೋಟಿ ದಾಟುತ್ತದೆ. ಅನೇಕ ಬಾಲಿವುಡ್ ಸ್ಟಾರ್‌ಗಳ ಸ್ಟಾರ್‌ಡಮ್ ನೋಡಿ ಜನರು ಆಶ್ಚರ್ಯ ಪಡುತ್ತಾರೆ. ಈ ವಿಚಾರದಲ್ಲಿ ಸೌತ್ ಫಿಲ್ಮ್ ಇಂಡಸ್ಟ್ರಿಯ ಸ್ಟಾರ್ ಗಳು ಹೊರತಾಗಿಲ್ಲ. ಆದರೆ ಇದು 21 ನೇ ಶತಮಾನದಲ್ಲಿ ಮಾತ್ರ ನಡೆಯುತ್ತಿದೆ ಅಂದುಕೊಳ್ಳಬೇಡಿ. ಈ ಹಿಂದೆ ಅಂದರೆ 20ನೇ ಶತಮಾನದ ಹಿಂದೆಯೂ ಸ್ಟಾರ್ ಹೀರೋಗಳ ಮೇಲೆ ಅಭಿಮಾನಿಗಳಿಗೆ ಬಹಳ ಪ್ರೀತಿಯಿತ್ತು.
50-60ರ ದಶಕದಲ್ಲಿ ಬಾಲಿವುಡ್ ಸೂಪರ್‌ಸ್ಟಾರ್‌ಗಳಿಗಾಗಿ ಅಭಿಮಾನಿಗಳು ಏನು ಬೇಕಾದರೂ ಮಾಡಲು ಸಿದ್ಧರಾಗಿದ್ದರು. ಅದಕ್ಕೆ ಉದಾಹರಣೆ ಒಮ್ಮೆ ಸೂಪರ್‌ಸ್ಟಾರ್ ಅನ್ನು ಯಾರೋ ಟ್ಯಾಕ್ಸಿ ಡ್ರೈವರ್ ಎಂದು ತಪ್ಪಾಗಿ ಭಾವಿಸಿದ್ದಕ್ಕೆ ಮುಂಬೈನ ಬೀದಿಗಳಲ್ಲಿ ಟ್ಯಾಕ್ಸಿಗಳು ಕಣ್ಮರೆಯಾಗುವಂತೆ ಮಾಡಿದ್ದರು.
ಈ ಸ್ಟಾರ್ ನಟ ಆಗಿನ ಕಾಲದಲ್ಲಿಯೇ 100 ಕ್ಕೂ ಹೆಚ್ಚು ಚಿತ್ರಗಳಲ್ಲಿ ಕೆಲಸ ಮಾಡಿದ್ದರು. ಯಾರು ಅಂತೀರಾ?, ಆ ನಟ ಬೇರೆ ಯಾರೂ ಅಲ್ಲ, ಆ ಸಮಯದಲ್ಲಿ ಹೆಣ್ಮಕ್ಕಳ ಹಾಟ್ ಫೇವರಿಟ್ ಎಂದು ಕರೆಯಲ್ಪಡುತ್ತಿದ್ದ ದೇವ್ ಆನಂದ್. 1946 ರಲ್ಲಿ ಹಮ್ ಏಕ್ ಹೇ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ ದೇವ್ ಆನಂದ್, 100 ಕ್ಕೂ ಹೆಚ್ಚು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಅವರು ‘ಟ್ಯಾಕ್ಸಿ ಡ್ರೈವರ್’ ಎಂಬ ಚಿತ್ರದಲ್ಲಿ ಕೆಲಸ ಮಾಡಿದ್ದಾರೆ. ದೇವ್ ಆನಂದ್ ಅವರ ನಿಕಟವರ್ತಿಯಾದ ಚುರಿದ್ವಾಲಾ ಅವರು ಪತ್ರಿಕೆಯೊಂದಕ್ಕೆ ಸಂದರ್ಶನ ನೀಡುವಾಗ ಚಿತ್ರದ ಚಿತ್ರೀಕರಣದ ಸಮಯದಲ್ಲಿ, ಒಬ್ಬ ವ್ಯಕ್ತಿ ಸೂಪರ್‌ಸ್ಟಾರ್ ದೇವ್ ಆನಂದ್ ಅವರನ್ನು ಟ್ಯಾಕ್ಸಿ ಡ್ರೈವರ್ ಎಂದು ಹೇಗೆ ತಪ್ಪಾಗಿ ಭಾವಿಸಿದರು ಎಂದು ಹೇಳಿದರು.
'ಟ್ಯಾಕ್ಸಿ ಡ್ರೈವರ್' ಚಿತ್ರದಲ್ಲಿ ಕ್ಲಬ್ ಡ್ಯಾನ್ಸರ್ ಸಿಲ್ವಿ ಪಾತ್ರವನ್ನು ನಿರ್ವಹಿಸಿದ ಶೀಲಾ ರಮಣಿಯನ್ನು ಕರೆದುಕೊಂಡು ಹೋಗಲು ಕಾರನ್ನು ದೇವ್ ಆನಂದ್ ತಾಜ್ ಮಹಲ್ ಹೋಟೆಲ್ ಹೊರಗೆ ನಿಲ್ಲಿಸಿದ್ದರು. ಈ ವೇಳೆ ವಿದೇಶಿಗನೊಬ್ಬ ಆತನನ್ನು 'ಟ್ಯಾಕ್ಸಿ ಡ್ರೈವರ್' ಎಂದು ತಪ್ಪಾಗಿ ಭಾವಿಸಿ ಆತನನ್ನು ರೆಡ್ ಲೈಟ್ ಏರಿಯಾಕ್ಕೆ ಕರೆದುಕೊಂಡು ಹೋಗುವಂತೆ ಹೇಳಿದ್ದಾನೆ. ಆಗ ದೇವ್ ಆನಂದ್ ಅವರು ಸಿನಿಮಾ ಶೂಟಿಂಗ್ ಮಾಡುತ್ತಿರುವುದಾಗಿ ತಿಳಿಸಿದರು. ಇದಾದ ನಂತರ ವಿದೇಶಿಗ ಕ್ಷಮೆ ಯಾಚಿಸಿ ಅಲ್ಲಿಂದ ಹೊರಟರು.
ದೇವ್ ಆನಂದ್ ಅಭಿನಯದ 'ಟ್ಯಾಕ್ಸಿ ಡ್ರೈವರ್' ಚಿತ್ರ ಬಿಡುಗಡೆಯಾದಾಗ ಮುಂಬೈನ ಬೀದಿಗಳಲ್ಲಿ ಟ್ಯಾಕ್ಸಿಗಳು ಕಣ್ಮರೆಯಾಗಲು ಈ ಘಟನೆಯೇ ಕಾರಣ ಎಂದು ಸಾಬೀತಾಯಿತು. ದೇವ್ ಆನಂದ್ ತಮ್ಮ ಬಯೋಗ್ರಫಿಯಲ್ಲಿ ಹೇಳಿಕೊಂಡಿರುವಂತೆ ಅವರ ಈ ಚಿತ್ರ ಬಿಡುಗಡೆಯಾದಾಗ, ಎಲ್ಲಾ ಟ್ಯಾಕ್ಸಿ ಡ್ರೈವರ್‌ಗಳು ಮತ್ತು ಅವರ ಯೂನಿಯನ್ ನಾಯಕರು ತಮ್ಮ ಟ್ಯಾಕ್ಸಿಗಳನ್ನು ಚಿತ್ರಮಂದಿರದ ಹೊರಗೆ ನಿಲ್ಲಿಸಿದರು. ಇದಾದ ನಂತರ ಒಟ್ಟಿಗೆ ‘ಟ್ಯಾಕ್ಸಿ ಡ್ರೈವರ್’ ಸಿನಿಮಾ ವೀಕ್ಷಿಸಿದರು. ಇದರಿಂದಾಗಿ ಅಂದು ಸಂಜೆ ಮುಂಬೈನ ಬೀದಿಗಳಲ್ಲಿ ಟ್ಯಾಕ್ಸಿಗಳು ಮಾಯವಾಗಿದ್ದವು!