

ಉಳ್ಳಾಲ: ಮಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾಲಯ ಮತ್ತು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲ ಬೆಂಗಳೂರುಆಶ್ರಯದಲ್ಲಿ ವಿಶ್ವವಿದ್ಯಾಲಯ ಮಟ್ಟದ ಚರ್ಚಾ ಸ್ಪರ್ಧೆ 2024-25 ಮಂಗಳ ಗಂಗೋತ್ರಿಯ ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾಲಯದ ಸೆಮಿನಾರ್ ಸಭಾಂಗಣದಲ್ಲಿ ಸೋಮವಾರ ನಡೆಯಿತು.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಮಂಗಳೂರು ವಿಶ್ವವಿದ್ಯಾಲಯ ವಿವಿಧ ಸಂಯೋಜಿತ ಮತ್ತು ಘಟಕ ಕಾಲೇಜುಗಳ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಪದವಿ ವಿಭಾಗದ ವಿದ್ಯಾರ್ಥಿಗಳಿಗೆ ಕೃಷಿ ಕ್ಷೇತ್ರದ ಬೆಳವಣಿಗೆಗೆ ಸಹಕಾರ ಸಂಗಳ ಪಾತ್ರ ಮಹತ್ವವಾದುದಾಗಿದೆ. ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿಗಳಿಗೆ ‘ಮಹಿಳೆಯರು, ಯುವಜನರು ಸಹಕಾರಿ ಕ್ಷೇತ್ರದ ನಾಯಕತ್ವವನ್ನು ವಹಿಸಿಕೊಂಡಾಗ ವಾತ್ರವೇ ರಾಷ್ಟ್ರದ ಅರ್ಥವ್ಯವಸ್ಥೆ ಸದೃಢಗೊಳ್ಳಬಲ್ಲದು’ ಎಂಬ ವಿಚಾರದಲ್ಲಿ ಚರ್ಚಾಸ್ಪರ್ಧೆ ನಡೆಯಿತು.
ಡಾ.ದಯಾನಂದ ನಾಯ್ಕ, ಡಾ.ಪರಮೇಶ್ವರ, ಡಾ.ಗೋವಿಂದರಾಜು ಬಿ.ಎಂ., ಡಾ.ಚಂದ್ರಶೇಖರ್ ಆರ್. ಹಾಗೂ ಡಾ.ಪ್ರಶಾಂತ ನಾಯ್ಕ ತೀರ್ಪುಗಾರರಾಗಿದ್ದರು.
ಪದವಿ ಮಟ್ಟದಲ್ಲಿ ಪ್ರಥಮ- ಶ್ವೇತಾ, ಶ್ರೀ ಭುವನೇಂದ್ರ ಕಾಲೇಜು ಕಾರ್ಕಳ, ದ್ವಿತೀಯ- ಫಾತಿಮತ್ ರಫಿಯಾ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಬಿ.ಎಡ್ ಕಾಲೇಜು ಉಜಿರೆ, ತೃತೀಯ- ಅಜಿತ್‌ಲಾಲ್, ಶ್ರೀ ಭುವನೇಂದ್ರ ಕಾಲೇಜು ಕಾರ್ಕಳ, ಸ್ನಾತಕೋತ್ತರ ವಿಭಾಗದಲ್ಲಿ ಪ್ರಥಮ- ಶ್ರೀದೇವಿ ಕೆ., ವಾಣಿಜ್ಯ ವಿಭಾಗ ಮಂಗಳೂರು ವಿಶ್ವವಿದ್ಯಾಲಯ, ದ್ವಿತೀಯ- ಹರ್ಷಿತಾ ಎಸ್. ಇಲೆಕ್ಟ್ರಾನಿಕ್ಸ್ ವಿಭಾಗ, ಮಂಗಳೂರು ವಿಶ್ವವಿದ್ಯಾಲಯ, ತೃತೀಯ- ಹರಿಪ್ರಸಾದ್ ಕೆ., ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗ, ವಿವೇಕಾನಂದ ಕಾಲೇಜು ಪುತ್ತೂರು ಅವರಿಗೆ ನಗದು ಬಹುವಾನ ಮತ್ತು ಪ್ರಶಸ್ತಿ ಪತ್ರ ಹಾಗೂ ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಪ್ರಶಂಸಾ ಪತ್ರ ವಿತರಿಸಲಾಯಿತು.