ಕುಕನೂರು: ತಾಲೂಕಿನಾದ್ಯಂತ ಮೊಹರಂ ಹಬ್ಬದಲ್ಲಿ ಎಲ್ಲರೂ ಶಾಂತತೆಯನ್ನು ಪಾಲಿಸಿಕೊಂಡು ಆಚರಣೆ ಮಾಡಬೇಕು ಎಂದು ಪಿಎಸ್‌ಐ ಟಿ.ಗುರುರಾಜ ಹೇಳಿದರು.
ಇದನ್ನೂ ಓದಿ: ಯರೇಬೂದಿಹಾಳದಲ್ಲಿ ಮೊಹರಂ ಹಬ್ಬ ಆಚರಣೆ
ಪಟ್ಟಣದ ಪೋಲಿಸ್ ಠಾಣೆ ಆವರಣದಲ್ಲಿ ಶನಿವಾರ ನಡೆದ ಮೊಹರಂ ಹಬ್ಬದ ಶಾಂತಿಸಭೆಯಲ್ಲಿ ಮಾತನಾಡಿದರು. ಭಾರತೀಯ ಸಂಪ್ರದಾಯದಂತೆ ಪ್ರತಿಯೊಂದು ಹಬ್ಬ ಶ್ರೇಷ್ಠವಾದದ್ದು, ಹಿಂದು-ಮುಸ್ಲಿಂ ಬಾಂಧವರು ಅಣ್ಣ-ತಮ್ಮಂದಿರಂತೆ ಪ್ರತಿಯೊಂದು ಹಬ್ಬವನ್ನು ಆಚರಣೆ ಮಾಡಬೇಕು.
ಮೊಹರಂ ಹಬ್ಬದಲ್ಲಿ ಕೆಲವು ಕಿಡಿಗೆಡಿಗಳು ಸಣ್ಣ ವಿಷಯವನ್ನು ಮನಸ್ಸಲ್ಲಿಟ್ಟುಕೊಂಡು ಹಬ್ಬದ ನೆಪದಲ್ಲಿ ಗಲಾಟೆ ಮಾಡುತ್ತಾರೆ. ಅದು ಕಾನೂನಿನ ಅಡಿಯಲ್ಲಿ ಅಪರಾಧವಾಗುತ್ತದೆ. ಕಾನೂನು ಮೀರಿ ನಡೆದರೆ ಅಂತಹವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವದು ಎಂದರು.
ಪ್ರಮುಖರಾದ ರಶೀದ್‌ಸಾಬ ಹಣಜಗಿರಿ, ಗಗನ್ ನೋಟಗಾರ ಮಾತನಾಡಿದರು. ದಳಪತಿ ವೀರಯ್ಯ ತೊಂಟದಾರ್ಯಮಠ, ಜಿಪಂ ಮಾಜಿ ಅಧ್ಯಕ್ಷ ರಾಮಣ್ಣ ಭಜಂತ್ರಿ, ಪ್ರಮುಖರಾದ ರಶೀದ್‌ಸಾಬ ಮುಭಾರಕ್, ಯಮನೂರಪ್ಪ ಗೊರ್ಲೆಕೊಪ್ಪ, ಹಮಾಲರ ಸಂಘದ ಅಧ್ಯಕ್ಷ ನಿಂಗಪ್ಪ ಗೊರ್ಲೆಕೊಪ್ಪ,
ಬಸವರಾಜ ಮಂಡಲಗೇರಿ, ವೀರೇಶ ಸಬರದ್, ಮಲ್ಲಿಕಾರ್ಜುನ ಗೊರ್ಲೆಕೊಪ್ಪ, ಶಶಿಧರ ಭಜಂತ್ರಿ, ಸಿದ್ದಪ್ಪ ದೊಡ್ಡಮನಿ, ಹನುಮಂತಪ್ಪ ಭಜಂತ್ರಿ, ಮಂಜುನಾಥ ನಿಲ್ಲಪ್ಪನವರ್ ಇತರರಿದ್ದರು.