

ಟೊಕಿಯೋ: ಕರೊನಾ ವೈರಸ್ ಪ್ರಸರಣ ತಡೆಯಲು ಅಗತ್ಯವಾಗಿರುವ ಮಾಸ್ಕ್ ಜಪಾನ್ನಲ್ಲಿ ಕೊರತೆಯಾಗಿರುವುದರಿಂದ ವಾಯುಯಾನದ ಒಳ ಉಡುಪು ತಯಾರಿಕೆಗೆ ಬಳಸುವ ಬಟ್ಟೆಯಿಂದ ಮಾಸ್ಕ್ ತಯಾರಿಸಲು ಸರ್ಕಾರ ಸೂಚಿಸಿದೆ.
ವಾಯುಯಾನದ ಒಳ ಉಡುಪುಗಳನ್ನು ತಯಾರಿಸುವ ಯುನಿಕ್ಲೊ ಕಂಪನಿ ಒಳ ಉಡುಪಿಗೆ ಬಳಕೆ ಮಾಡುವ ಬಟ್ಟೆಯಿಂದ ಮಾಸ್ಕ್ ತಯಾರಿಸುವುದಾಗಿ ಘೋಷಿಸಿದೆ.
ಒಳ ಉಡುಪು ತಯಾರಿಸಲು ಬಳಸುವ ಬಟ್ಟೆ ಉತ್ಕೃಷ್ಟವಾದ ರೇಷ್ಮೆದಾರಗಳಿಂದ ಕೂಡಿದೆ. ಈ ಬಟ್ಟೆ ಚಳಿಗಾಲದಲ್ಲಿ ಬೆಚ್ಚಗಿನ ಅನುಭವ ಹಾಗೂ ಬೇಸಿಗೆಯಲ್ಲಿ ತಂಪು ಅನುಭವ ನೀಡುವುದರಿಂದ ವಿಮಾನಯಾನದ ಒಳ ಉಡುಪುಗಳಿಗಾಗಿ ಮಾತ್ರ ಬಳಸಲಾಗುತ್ತಿತ್ತು.
ಕರೊನಾ ವೈರಸ್ ಹಾವಳಿಯಿಂದ ಮಾಸ್ಕ್ಗಳು ಕೊರತೆಯಾಗಿತ್ತು. ಅಲ್ಲದೆ ಉತ್ಕೃಷ್ಟ ದರ್ಜೆಯ ಮಾಸ್ಕ್ಗಳು ಇಲ್ಲದ ಹಿನ್ನೆಲೆಯಲ್ಲಿ ಕಂಪನಿ ಈಗ ಮಾಸ್ಕ್ ತಯಾರಿಸಲು ಮುಂದಾಗಿದೆ.
ಶೀಘ್ರದಲ್ಲೇ ಮಾಸ್ಕ್ಗಳು ಮಾರುಕಟ್ಟೆಗೆ ಬಿಡುಗಡೆಯಾಲಿದೆ. ದರವನ್ನು ಕೂಡ ಕಂಪನಿ ಶೀಘ್ರವೇ ಪ್ರಕಟಿಸಲಿದೆ ಎಂದು ತಿಳಿದು ಬಂದಿದೆ. (ಏಜೆನ್ಸೀಸ್)