

ಪಣಜಿ: ಕೊವಿಡ್-19 ಸೋಂಕಿಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿರುವ ಆಯುಷ್ ಇಲಾಖೆ ಸಚಿವ ಶ್ರೀಪಾದ್ ನಾಯ್ಕ್ ಅವರ ಆರೋಗ್ಯದಲ್ಲಿ ಕೊಂಚ ಏರುಪೇರಾಗಿದೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ತಿಳಿಸಿದ್ದಾರೆ.
ಶ್ರೀಪಾದ್ ನಾಯ್ಕ್ ಅವರ ರಕ್ತದಲ್ಲಿ ಆಮ್ಲಜನಕ ಶುದ್ಧತ್ವ ಮಟ್ಟ ಇಂದು ಕುಸಿದಿದೆ. ಇಂದು ಸಂಜೆ ದೆಹಲಿಯ ಏಮ್ಸ್ ಮತ್ತು ಕಮಾಂಡ್ ಆಸ್ಪತ್ರೆಯ ತಜ್ಞ ವೈದ್ಯರು ಗೋವಾಕ್ಕೆ ತೆರಳಿದ್ದು, ಸಚಿವರ ಆರೋಗ್ಯದ ಸಂಪೂರ್ಣ ವರದಿ ಪಡೆಯಲಿದ್ದಾರೆ. ಹಾಗೇ ಚಿಕಿತ್ಸೆ ನೀಡಲಿದ್ದಾರೆ ಎಂದೂ ಮುಖ್ಯಮಂತ್ರಿ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ನಾಯಕತ್ವ ಹೊಣೆ ಹೊರಲು ರೆಡಿಯಾಗಿರುವ ರಾಹುಲ್ಗೆ ಮಾದರಿ ನಾಯಕರು ಯಾರು ಗೊತ್ತೆ..?
ದೆಹಲಿಯಿಂದ ಆಗಮಿಸಿರುವ ವೈದ್ಯರ ತಂಡ ಸೂಚಿಸಿದರೆ ನಾಯ್ಕ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ದೆಹಲಿ ಆಸ್ಪತ್ರೆಗೇ ಸ್ಥಳಾಂತರ ಮಾಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಆಗಸ್ಟ್ 12ರಂದು ಶ್ರೀಪಾದ್ ನಾಯ್ಕ್ ಅವರು ಗೋವಾದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಂದು ಮಧ್ಯಾಹ್ನದಿಂದ ಅವರ ಆರೋಗ್ಯದಲ್ಲಿ ಏರಿಳಿತವುಂಟಾಗಿದೆ. (ಏಜೆನ್ಸೀಸ್)