ಕೋಲ್ಕತ್ತಾದಲ್ಲಿ ಇಂದು ಅಮಿತ್​ ಷಾ ಬೃಹತ್​ ರ‍್ಯಾಲಿ: ತೃಣಮೂಲ ಹಾಗೂ ಎಡ ಪಕ್ಷಗಳಿಂದ ಪ್ರತಿಭಟನೆಗೆ ಕರೆ

amith shaa 1 mar 20
Published on

ಕೋಲ್ಕತ್ತಾ : ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ಬಗ್ಗೆ ಅರಿವು ಮೂಡಿಸಲು ಕೇಂದೃ ಗೃಹ ಸಚಿವ ಅಮಿತ್​ ಷಾ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಗತ್​ ಪ್ರಕಾಶ್​ ನಡ್ಡಾ ಅವರು ಪಶ್ಚಿಮ ಬಂಗಾಳದಲ್ಲಿ ಬೃಹತ್ ರ‍್ಯಾಲಿ ನಡೆಸಿರುವ ಬೆನ್ನಲ್ಲೇ ತೃಣಮೂಲ ಕಾಂಗ್ರೆಸ್​ ಹಾಗೂ ಎಡ ಪಕ್ಷಗಳು ಪ್ರತಿಭಟನೆಗೆ ಕರೆ ನೀಡಿವೆ.‘

ಮಾ.1ರಂದು ಕೊಲ್ಕತ್ತಾ ನಗರದಲ್ಲಿ ರ‍್ಯಾಲಿ ನಡೆಯುತ್ತಿದ್ದು ಈ ವೇಳೆ ಬೀದಿಗಿಳಿದು ಪ್ರತಿಭಟನೆ ನಡೆಸಲು ತೃಣಮೂಲ ಕಾಂಗ್ರೆಸ್​ ಹಾಗೂ ಎಡಪಕ್ಷಗಳು ಕರೆ ಕೊಟ್ಟಿವೆ.

ಮುಸ್ಲಿಂ ಲೀಗ್​, ವಿದ್ಯಾರ್ಥಿಗಳು, ವಿವಿಧ ಸಮಾಜ ಸೇವಾ ಸಂಸ್ಥೆಗಳು ಬಂಗಾಳದ ಬಿಜೆಪಿ ಕೇಂದ್ರ ಕಚೇರಿ ಎದುರು ಪ್ರತಿಭಟನೆ ನಡೆಸಲು ನಿರ್ಧರಿಸಿವೆ.

ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಚಿವ ಸಿದ್ದಿಕುಲ್ಲಾ ಚೌಧರಿ ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.

ಕೋಲ್ಕತ್ತಾ ಗೆ ಪ್ರಧಾನಿ ನರೇಂದ್ರ ಮೋದಿ ಬಂದಾಗ ಕಪ್ಪುಬಾವುಟ ಪ್ರದರ್ಶನ ನೀಡಿ ಸ್ವಾಗತಿಸಿದ ರೀತಿ ಕೇಂದ್ರ ಗೃಹ ಸಚಿವ ಅಮಿತ್​ ಷಾ ಅವರಿಗೂ ಕಪ್ಪುಬಾವುಟದ ಸ್ವಾಗತ ಕೋರಲಾಗುವುದು ಎಂದು ಭಾರತೀಯ ಕಮ್ಯುನಿಷ್ಟ್​ ಪಕ್ಷದ (ಮಾರ್ಕಿಸ್ಟ್​) ಪಾಲಿಟ್​ ಬ್ಯೂರೋ ಸದಸ್ಯ ಮಹದಮ್​ ಸಲೀಂ ಹೇಳಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್​ ಷಾ ಅವರು ಬೃಹತ್​ ರ‍್ಯಾಲಿಯಲ್ಲಿ ಪಾಲ್ಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕೊಲ್ಕತ್ತಾದಲ್ಲಿ ಅಧಿಕ ಮಂದಿ ಪೊಲೀಸರನ್ನು ನಿಯೋಜಿಸಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net