ಗಗನ ಸಖಿಯರು ಸರಿಯಾದ ಒಳ ಉಡುಪು ಧರಿಸುವುದು ಕಡ್ಡಾಯ! ಡೆಲ್ಟಾ ಏರ್‌ಲೈನ್ಸ್​​ನಿಂದ ಹೊರ ಬಿತ್ತು ಕಟ್ಟುನಿಟ್ಟಾದ ಹೊಸ ಸೂಚನೆ

  ನವದೆಹಲಿ: ಡೆಲ್ಟಾ ಏರ್‌ಲೈನ್ಸ್ ಕಟ್ಟುನಿಟ್ಟಾದ ಹೊಸ ಸೂಚನೆಯನ್ನು ಹೊರಡಿಸಿದೆ. ಸರಿಯಾದ ಒಳ ಉಡುಪುಗಳನ್ನು ಧರಿಸಲು, ಆಭರಣ ಮತ್ತು ಸರಿಯಾದ ಬಟ್ಟೆಗಳನ್ನು ಹಾಕಲು ಕೇಳಿಕೊಳ್ಳಿ ಎಂದು ಫ್ಲೈಟ್ ಅಟೆಂಡೆಂಟ್‌ಗಳಿಗಾಗಿ ಡೆಲ್ಟಾ ಏರ್‌ಲೈನ್ಸ್ ಮಾರ್ಗಸೂಚಿಯನ್ನು ಹೊರಡಿಸಿದೆ.

* ಫ್ಲೈಟ್ ಅಟೆಂಡೆಂಟ್‌ಗಳು ಸರಿಯಾದ ಒಳ ಉಡುಪು ಧರಿಸುವುದಕ್ಕೆ ಒತ್ತು ನೀಡುವಂತೆ ಕೇಳಲಾಗಿದೆ ಜೊತೆಗೆ, ಅವು ಅದೃಶ್ಯವಾಗಿರಬೇಕು ಎಂದೂ ಡೆಲ್ಟಾ ಏರ್‌ಲೈನ್ಸ್ ಕಟ್ಟುನಿಟ್ಟಿನ ನೀತಿ ಜಾರಿಗೊಳಿಸಿದೆ.

* ಉದ್ದನೆಯ ಕೂದಲನ್ನು ಹಿಂದಕ್ಕೆ ಎಳೆಯಬೇಕು ಅವುಗಳನ್ನು ಪಿನ್ ಮಾಡಬೇಕು.

* ಸರಿಯಾದ ಒಳ ಉಡುಪುಗಳನ್ನು ಧರಿಸಿ, ಆಭರಣ ಮತ್ತು ಸರಿಯಾದ ಬಟ್ಟೆಗಳನ್ನು ಹಾಕಿಕೊಳ್ಳಿ.

* ಕಣ್ರೆಪ್ಪೆಗಳು ನೈಸರ್ಗಿಕವಾಗಿ ಕಾಣಬೇಕು.

* ಮೂಗಿನ ಒಂದು ಸೈಡ್​ ಮಾತ್ರ ಮೂಗುನೊತ್ತು ಹಾಕಿರಬೇಕು. ಅದು ಚಿನ್ನ, ಬೆಳ್ಳಿ, ಬಿಳಿ ಮುತ್ತು, ವಜ್ರ ಅಥವಾ ವಜ್ರದಂತಹ ಸ್ಟಡ್‌  ಮಾತ್ರ ಆಗಿರಬೇಕು.

* ಅಗತ್ಯವಿದ್ದರೆ ನೈಸರ್ಗಿಕ ಕೂದಲಿಗೆ ದಪ್ಪ ಹೈಲೈಟ್‌ಗಳು ಅಥವಾ ಕೃತಕ ಛಾಯೆಗಳಿಲ್ಲದ, ಬಣ್ಣಗಳನ್ನು ಮಾತ್ರ ಬಳಸಿ.

* ಟ್ಯಾಟೂಗಳನ್ನು ಕವರ್ ಮಾಡಿ.

* ಡೆಲ್ಟಾ ಫ್ಲೈಟ್ ಅಟೆಂಡೆಂಟ್‌ಗಳು ನಮ್ಮ ಗ್ರಾಹಕರೊಂದಿಗೆ ಹೆಚ್ಚಿನ ಸಮಯವನ್ನು ಕಳೆಯುತ್ತಾರೆ ಮತ್ತು ನಮ್ಮ ಏರ್‌ಲೈನ್‌ನ ಮುಖವಾಗಿದ್ದಾರೆ. ಡೆಲ್ಟಾ ಬ್ರ್ಯಾಂಡ್ ಅನ್ನು ಸಾಕಾರಗೊಳಿಸುವಾಗ ಉತ್ಸಾಹ ಹೊಂದಿರಬೇಕು.

* ಫ್ಲೈಟ್ ಅಟೆಂಡೆಂಟ್ ತಮ್ಮ  ಸಮವಸ್ತ್ರವನ್ನು ಧರಿಸಿದ ಕ್ಷಣದಿಂದ ಗ್ರಾಹಕ ಸೇವಾ ಅನುಭವವು ಪ್ರಾರಂಭವಾಗುತ್ತದೆ. ಡೆಲ್ಟಾ ಸಮವಸ್ತ್ರವು ಯಾವಾಗಲೂ ಸುರಕ್ಷತೆಗೆ ಆದ್ಯತೆ ನೀಡುತ್ತದೆ.

Share This Article

Bathing : ನೀರಿನಲ್ಲಿ ಇವುಗಳನ್ನು ಬೆರೆಸಿ ಸ್ನಾನ ಮಾಡಿದ್ರೆ ಸಾಕು ಅದೃಷ್ಟ ಖುಲಾಯಿಸುತ್ತದೆ…

ಬೆಂಗಳೂರು: ಪ್ರತಿದಿನ ಸ್ನಾನ ( Bathing ) ಮಾಡುವ ಅಭ್ಯಾಸವನ್ನು ಸಾಮಾನ್ಯವಾಗಿ ಎಲ್ಲರೂ ರೂಢಿಸಿಕೊಂಡಿರುತ್ತಾರೆ. ನೀವು…

ದೀಪಾವಳಿಗೆ ಮನೆ ಸ್ವಚ್ಛ ಮಾಡ್ತಾ ಇದ್ದೀರಾ? ಮನೆಯಲ್ಲಿ cockroach ಇದ್ರೆ ಹೀಗೆ ಮಾಡಿ…

ಬೆಂಗಳೂರು: ಅನೇಕ ಜನರು ತಮ್ಮ ಮನೆಯಲ್ಲಿ ಜಿರಳೆಗಳ ( cockroach )  ಸಮಸ್ಯೆಯನ್ನು ಎದುರಿಸುತ್ತಾರೆ. ಅವುಗಳನ್ನು…

Crab Sukka : ಭಾನುವಾರದ ಬಾಡೂಟಕ್ಕೆ ಮಾಡಿ ರುಚಿಯಾದ ಏಡಿ ಸುಕ್ಕ..

ಬೆಂಗಳೂರು: ವಾರದ ಕೊನೆಯಲ್ಲಿ ಮಧ್ಯಾಹ್ನದ ಸಮಯಕ್ಕೆ ರುಚಿಯಾದ ಅಡುಗೆ ಏನಾದರು ಮಾಡುವ ಪ್ಲಾನ್ (Plan)​ ಹಾಕಿಕೊಂಡಿದ್ದೀರಾ?ಆದಿತ್ಯವಾರದಂದು…