More

  ನಿವೃತ್ತರನ್ನು ನೇಮಕ ಮಾಡಿದ ಇಲಾಖೆ ಎದುರು ಪ್ರತಿಭಟನೆ

  ಕಾರವಾರ: ಸರ್ಕಾರದ ವಿವಿಧ ಇಲಾಖೆಗಳಲ್ಲಿ ನಿವೃತ್ತರಾದ ನೌಕರರನ್ನು ಅದೇ ಇಲಾಖೆಯಲ್ಲಿ ಕೆಲಸ ಮುಂದುವರಿಸುತ್ತಿರುವುದು ಸರಿಯಲ್ಲ ಎಂದು ನಿರುದ್ಯೋಗ ನಿವಾರಣಾ ವೇದಿಕೆಯ ವಿಲ್ಸನ್ ಫರ್ನಾಂಡಿಸ್ ಹೇಳಿದರು.
  ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಸಾಕಷ್ಟು ಯುವಕರು ಸರ್ಕಾರಿ ಉದ್ಯೋಗಕ್ಕೆ ಕಾಯುತ್ತಿದ್ದು, ಅವರಿಗೆ ಅನ್ಯಾಯವಾಗುತ್ತಿದೆ. ಹಾಗಾಗಿ ಸಂಘಟನೆ ಮಾಡಿ ಸರ್ಕಾರದ ಈ ನೀತಿಯ ವಿರುದ್ಧ ಹೋರಾಟ ಮಾಡುತ್ತೇವೆ ಎಂದರು.
  ಯಾವ ಇಲಾಖೆಗಳಲ್ಲಿ ನಿವೃತ್ತರಿದ್ದಾರೆ ಎಂಬ ಮಾಹಿತಿ ಪಡೆದು ಅದೇ ಇಲಾಖೆಯ ಎದುರು ಪ್ರತಿಭಟನೆ ಮಾಡುತ್ತೇವೆ. ಈ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ನೀಡಲಾಗಿದೆ ಎಂದರು.
  ವಕೀಲ ಬಾಲಕೃಷ್ಣ ನಾಯ್ಕ ಮಾತನಾಡಿ, ನಿವೃತ್ತರನ್ನು ಮರು ನೇಮಕ ಮಾಡುವುದರಿಂದ ಸಾಮಾಜಿಕ ನ್ಯಾಯ ಕೊಡಿಸಲು ಸಾಧ್ಯವಿಲ್ಲ. ಪುನಃ, ಪುನಃ ಒಬ್ಬರೇ ಒಂದು ಇಲಾಖೆಗೆ ಅಧಿಕಾರಿ ಬರುವುದರಿಂದ ಭ್ರಷ್ಟಾಚಾರವಾಗುತ್ತವೆ.
  ದೇಶದಲ್ಲಿ ಶೇ. 42 ರಷ್ಟು ನಿರುದ್ಯೋಗ ಪರಿಸ್ಥಿತಿ ಇದೆ. ಇಲಾಖೆಗಳಲ್ಲಿ ಶೇ. 90 ರಷ್ಟು ಸರ್ಕಾರಿ ಹುದ್ದೆಗಳು ಖಾಲಿ ಇವೆ.
  ಇಲಾಖೆಗಳಿಗೆ ಗುತ್ತಿಗೆ ಆಧಾರದಲ್ಲಿ ಕೆಲಸಕ್ಕೆ ಪಡೆದು ಅವರಿಗೆ ಸರಿಯಾಗಿ ವೇತನ ನೀಡದೇ ಕಿರುಕುಳ ಮಾಡಲಾಗುತ್ತಿದೆ.‌ ಇದ್ದ ನೌಕರರ ಮೇಲೆ ಒತ್ತಡ ಹಾಕಲಾಗುತ್ತಿದೆ ಎಂದರು.
  ಸರ್ಕಾರ ಕಣ್ಣು ತೆರೆಯುವ ನಿಟ್ಟಿನಲ್ಲಿ ಜನ ಆಂದೋಲನ ಆಗಬೇಕು. ಈ ನಿಟ್ಟಿನಲ್ಲಿ ಹೋರಾಟ ಮಾಡಲು ಮುಂದಾಗಿದ್ದೇವೆ ಎಂದರು.

  ವಿಶಾಲ ಉಳ್ವೇಕರ್, ನಿತ್ಯರಾಜ್ ದುರ್ಗೇಕರ್, ಸಚಿನ್ ಅವರ್ಸೇಕರ್, ಆದೇಶ ದುರ್ಗೇಕರ್ ಸುದ್ದಿಗೋಷ್ಠಿಯಲ್ಲಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts