"ನಿಮಗೆ ಗೊತ್ತಿತ್ತು! ಆದ್ರೆ..." ಔಟ್ ಇದ್ದರೂ​ ಕೊಡದ ಅಂಪೈರ್! ಮೈದಾನದಲ್ಲೇ ಬುಮ್ರಾ ಕಿಡಿ | IND vs WI Test

ವಿಜಯವಾಣಿ (35)
Published on

ನವದೆಹಲಿ: ಪ್ರಸಕ್ತ ದೆಹಲಿಯಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್​ನ ( IND vs WI Test) ನಾಲ್ಕನೇ ದಿನದಾಟದಲ್ಲಿ ಆನ್​ಫೀಲ್ಡ್​ ಅಂಪೈರ್​ ಕೊಟ್ಟ ತೀರ್ಪಿನ ವಿರುದ್ಧ ಸದ್ಯ ಟೀಮ್ ಇಂಡಿಯಾ ವೇಗಿ ಜಸ್ಪ್ರೀತ್​ ಬುಮ್ರಾ ಅಸಮಾಧಾನಗೊಂಡಿದ್ದಾರೆ.

ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ 2ನೇ ಟೆಸ್ಟ್ ಪಂದ್ಯದ 4ನೇ ದಿನದ ಮೊದಲ ಇನ್ನಿಂಗ್ಸ್​ನಲ್ಲಿ ಜಾನ್ ಕ್ಯಾಂಪ್‌ಬೆಲ್​ಗೆ ಬೌಲ್​ ಮಾಡಿದ ಜಸ್ಪ್ರೀತ್ ಬುಮ್ರಾ, ತಮ್ಮ ಓವರ್​ನಲ್ಲಿ ಜಾನ್​ ಎಲ್‌ಬಿಡಬ್ಲ್ಯೂ ಆಗಿದ್ದಾರೆ ಎಂದು ಆನ್​ಫೀಲ್ಡ್​​ ಅಂಪೈರ್​​ನತ್ತ ಕೂಗಿದರು. ಆದರೆ, ಇದಕ್ಕೆ ಔಟ್​ ಕೊಡದ ಹಿನ್ನಲೆ ಥರ್ಡ್​ ಅಂಪೈರ್​ಗೆ ಬುಮ್ರಾ ಮೇಲ್ಮನವಿ ಸಲ್ಲಿಸಿದರು. ಆದರೆ, ಅಲ್ಲಿಯೂ ತನ್ನ ಪರ ತೀರ್ಪು ಬರದಿದ್ದಾಗ ಆನ್​ಫೀಲ್ಡ್​ ಅಂಪೈರ್ ಮೇಲೆ ತಮ್ಮ ಬೇಸರ, ಅಸಮಾಧಾನವನ್ನು ವ್ಯಕ್ತಪಡಿಸಿದರು. ಈ ದೃಶ್ಯ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.

55ನೇ ಓವರ್‌ನ ಐದನೇ ಎಸೆತದಲ್ಲಿ ಈ ಘಟನೆ ನಡೆಯಿತು. ಬುಮ್ರಾ ಎಸೆದ ಚೆಂಡು, ಕ್ಯಾಂಪ್‌ಬೆಲ್ ಅವರ ಪ್ಯಾಡ್‌ಗಳಿಗೆ ತಗುಲಿ, ಹೊರ ಹೋಯಿತು. ಇದು ಖಚಿತವಾಗಿ ಔಟ್​ ಎಂದೇ ಬುಮ್ರಾ ಡಿಆರ್​ಎಸ್​ಗೆ ಮನವಿ ಮಾಡಿದರು. ಈ ಪರಿಶೀಲನೆಯಲ್ಲಿ, ಚೆಂಡು ಬ್ಯಾಟ್ ಮತ್ತು ಪ್ಯಾಡ್ ಎರಡರ ಮಧ್ಯೆ ಹಾದುಹೋದಾಗ ಅಲ್ಟ್ರಾಎಡ್ಜ್‌ನಲ್ಲಿ ಸ್ವಲ್ಪ ಸ್ಪೈಕ್ ಕಂಡುಬಂದಿದೆ. ಇದನ್ನು ಔಟ್​ ಎಂದು ನಿರ್ಣಯಿಸಲು ಸಾಧ್ಯವಾಗದ ಹಿನ್ನೆಲೆ ಮೂರನೇ ಅಂಪೈರ್ ಅಲೆಕ್ಸ್ ವಾರ್ಫ್, ಆನ್​ಫೀಲ್ಡ್ ಅಂಪೈರ್‌ಗೆ ನಿಮ್ಮ ನಿರ್ಧಾರಕ್ಕೆ ಬದ್ಧರಾಗಿ ಎಂದರು. ಹೀಗೇಳುತ್ತಿದ್ದಂತೆ, ಅದು ನಾಟೌಟ್ ಎಂದು ರಿಚರ್ಡ್ಸ್​ ಘೋಷಿಸಿದರು.

ಇನ್ನು ಅಂಪೈರ್​ ನಿರ್ಧಾರದಿಂದ ಹಾಗೂ ಒಂದು ರಿವ್ಯೂವ್ ಕಳೆದುಕೊಂಡ​ ಬೇಸರದಿಂದ ಅಂಪೈರ್​ನತ್ತ ಸಾಗಿದ ಬುಮ್ರಾ, ಇದು ಔಟ್​ ಅಂತ ನಿಮಗೆ ಗೊತ್ತಿತ್ತು. ಆದರೆ, ಟೆಕ್ನಾಲಜಿಗೆ ಇದನ್ನು ಸಾಬೀತುಪಡಿಸಲು ಸಾಧ್ಯವಾಗಲಿಲ್ಲ ಎಂದು ನಗುತ್ತಲೇ ಹೇಳಿದರು,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net