ಉಮೇಶ್ ರಾವ್‌ರ ಸಾಹಿತ್ಯ ಸೇವೆ ಅನನ್ಯ

Kateel_Umesh Rao
Published on

ಕಟೀಲು: ಪತ್ರಿಕೆ, ಸ್ಮರಣ ಸಂಚಿಕೆಗಳಲ್ಲಿ ಸಾವಿರಾರು ಬರಹಗಳ ಮೂಲಕ ಸಾಹಿತ್ಯ ಸೇವೆ ಮಾಡಿರುವ ನಿವೃತ್ತ ಶಿಕ್ಷಕ, ಕೃಷಿಕ ಎಕ್ಕಾರು ಉಮೇಶ್ ರಾವ್ ಅವರ ಸಾಹಿತ್ಯ ಮತ್ತು ಕನ್ನಡ ಸೇವೆ ಅನನ್ಯ. ಎರಡೂವರೆ ಸಾವಿರಕ್ಕೂ ಕನ್ನಡ ಪತ್ರಿಕೆಗಳ ಸಂಗ್ರಹಣೆ, ಶಾಲಾ ಮಕ್ಕಳಲ್ಲಿ ಸಾಹಿತ್ಯಾಭಿರುಚಿ ಹುಟ್ಟಿಸಿದ ಉಮೇಶ್ ರಾವ್ ಅವರ ಸಾಧನೆ ಸಾಮಾನ್ಯ ವಿಷಯವಲ್ಲ ಎಂದು ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ಎಂ.ಪಿ. ಶ್ರೀನಾಥ್ ಹೇಳಿದರು.

ಕಟೀಲು ಸಮೀಪದ ಎಕ್ಕಾರಿನಲ್ಲಿರುವ ಹಿರಿಯ ಸಾಹಿತಿ ಉಮೇಶ ರಾವ್ ಅವರ ಮನೆಗೆ ಭೇಟಿ ನೀಡಿ, ಗೌರವಿಸಿ ಮಾತನಾಡಿದರು.

ಸಾಹಿತಿ ಎಕ್ಕಾರು ಡಾ. ಪದ್ಮನಾಭ ಭಟ್, ಕಸಾಪ ಮೂಲ್ಕಿ ತಾಲೂಕು ಘಟಕಾಧ್ಯಕ್ಷ ಮಿಥುನ ಕೊಡೆತ್ತೂರು ಉಮೇಶ ರಾವ್‌ರ ಸಾಧನೆಗಳ ಕುರಿತು ಮಾತನಾಡಿದರು.

ತನ್ನ ಸಂಗ್ರಹಣೆಯಲ್ಲಿರುವ ಪತ್ರಿಕೆಗಳ ವೀಕ್ಷಣೆಗೆ ಅನೇಕರು ಬಂದಿದ್ದಾರೆ. ಇದೀಗ ಕಸಾಪ ಜಿಲ್ಲಾಧ್ಯಕ್ಷರು ಮನೆಗೆ ಭೇಟಿ ನೀಡಿರುವುದು ಖುಷಿಯಾಗಿದೆ ಎಂದು ಉಮೇಶ ರಾವ್ ಹೇಳಿದರು.

ಹೆರಿಕ್ ಪಾಯಸ್, ಪುರುಷೋತ್ತಮ ಕೋಟ್ಯಾನ್, ಪ್ರಕಾಶ್ ಆಚಾರ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net