

ಬೆಂಗಳೂರು: ಬೆಂಗಳೂರಿನ ಯಕ್ಷಸಿಂಚನ ಟ್ರಸ್ಟ್ ಪ್ರತಿವರ್ಷ ಯಕ್ಷಗಾನ ಕ್ಷೇತ್ರದ ಮಹನೀಯರಿಗೆ ನೀಡುವ ಸಾರ್ಥಕ ಸಾಧಕ ಪ್ರಶಸ್ತಿಗೆ ಉಮೇಶ್ ಭಟ್‌ರನ್ನು ಆಯ್ಕೆ ಮಾಡಿದೆ.
ಯಕ್ಷಗಾನ ಕ್ಷೇತ್ರದಲ್ಲಿ 40 ವರ್ಷಗಳ ಅನನ್ಯ ಸೇವೆ ಸಲ್ಲಿಸಿರುವ ಉಮೇಶ್ ಭಟ್ ಸಾಧನೆಯನ್ನು ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ನ.17ರಂದು ಕೆಂಪೇಗೌಡನಗರದ ಉದಯಭಾನು ಕಲಾಸಂಘದಲ್ಲಿ ನಡೆಯವ ಯಕ್ಷಸಿಂಚನದ 15ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಟ್ರಸ್ಟ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಉಮೇಶ್ ಭಟ್ ಯಕ್ಷಗಾನ ಭಾಗವತರಾಗಿ, ಯಕ್ಷ ಗುರುಗಳಾಗಿ ಸೇವೆ ಸಲ್ಲಿಸಿದ್ದಾರೆ. ಚಿಟ್ಟಾಣಿ ರಾಮಚಂದ್ರ ಹೆಗಡೆ, ಜಲವಳ್ಳಿ ವೆಂಕಟೇಶ್ ರಾವ್, ಕುಮಟಾ ಗೋವಿಂದ ನಾಯ್ಕ್ ಮುಂತಾದ ಅತಿರಥ ಕಲಾವಿದರನ್ನು ರಂಗದಲ್ಲಿ ಕುಣಿಸಿದ ಖ್ಯಾತಿ ಇವರದ್ದು.