

ವಿಜಯವಾಣಿ ಸುದ್ದಿಜಾಲ ಉಳ್ಳಾಲ
ದಾನ ಮಾಡಲು ಅವಕಾಶ ಸಿಗುವುದು ಭಾಗ್ಯ. ನಮ್ಮೆದುರು ಯಾರಾದರೂ ವೈಯಕ್ತಿಕ ಅಥವಾ ಇತರ ಕಾರ್ಯಕ್ಕಾಗಿ ಸಹಾಯ ಯಾಚಿಸಿ ಬಂದರೆ ಏನನ್ನೂ ಬಯಸದೆ ಕೊಡುಗೆ ನೀಡಬೇಕು. ದಾನ ಪಡೆಯಲು ಯಾರೂ ಬರದಿದ್ದರೆ ನಾವೇ ಅಗತ್ಯವುಳ್ಳವರನ್ನು ಹುಡುಕಿ ಹೋಗಬೇಕಾಗುತ್ತದೆ ಎಂದು ಮರ್ಕಝ್ ನಾಲೆಡ್ಜ್ ಸಿಟಿಯ ವ್ಯವಸ್ಥಾಪಕ ನಿರ್ದೇಶಕ ಡಾ.ಅಬ್ದುಲ್ ಹಕೀಂ ಅಝ್ಹರಿ ಅಭಿಪ್ರಾಯಪಟ್ಟರು.
ಉಳ್ಳಾಲ ದರ್ಗಾದ 22ನೇ ಪಂಚವಾರ್ಷಿಕ ಉರುಸ್ ಪ್ರಯುಕ್ತ ಮಂಗಳವಾರ ಆಯೋಜಿಸಲಾದ ಗಲ್ಫ್ ಮೀಟ್ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೇಂದ್ರ ಜುಮ್ಮಾ ಮಸೀದಿಯ ಖತೀಬ್ ಹಾಫಿಳ್ ಅಬ್ದುಲ್ ಮಜೀದ್ ಫಾಳಿಲಿ ಅಲ್ ಹಿಕಮಿ ಕಾಮಿಲ್ ಸಖಾಫಿ ದುವಾ ನೆರವೇರಿಸಿದರು. ಸಯ್ಯಿದ್ ಅಬ್ದುಲ್ ರಹ್ಮಾನ್ ಸಾದಾತ್ ತಂಙಳ್ ಗುರುವಾಯನಕೆರೆ ಧಾರ್ಮಿಕ ಪ್ರವಚನ ನೀಡಿದರು. ದರ್ಗಾ ಅಧ್ಯಕ್ಷ ಹನೀಫ್ ಹಾಜಿ ಅಧ್ಯಕ್ಷತೆ ವಹಿಸಿದ್ದರು. ಖಿಳ್‌ರಿಯಾನಗರ ಮಸೀದಿ ಅಧ್ಯಕ್ಷ ಹಸನಬ್ಬ, ಖತೀಬ್ ನಿಸಾರ್ ಸಖಾಫಿ, ಇಬ್ರಾಹಿಂ ಮದನಿ, ದರ್ಗಾ ಉಪಾಧ್ಯಕ್ಷ ಅಶ್ರಫ್ ರೈಟ್‌ವೇ, ಮಾಜಿ ಅಧ್ಯಕ್ಷ ಯು.ಎಸ್.ಹಂಝ, ಕಾರ್ಯದರ್ಶಿ ಮುಸ್ತಫಾ ಮದನಿನಗರ, ಇಸ್ಹಾಕ್, ಕೋಶಾಧಿಕಾರಿ ನಾಝೀಮ್ ಮುಕಚೇರಿ, ಸದಸ್ಯರಾದ ಅಬ್ದುಲ್ ಖಾದರ್ ಕೋಡಿ, ಇಮ್ತಿಯಾಝ್, ಅಬೂಬಕ್ಕರ್ ಹೈದರಲಿನಗರ, ಅರೆಬಿಕ್ ಕಾಲೇಜಿನ ಪ್ರೊಫೆಸರ್ ಇಬ್ರಾಹಿಂ ಅಹ್ಸನಿ, ಉಪಾಧ್ಯಕ್ಷ ಅಶ್ರಫ್, ತಂಝೀಲ್ ಯು.ಟಿ.ಕೋಡಿ, ಆಝಾದ್ ಇಸ್ಮಾಯಿಲ್, ಉಸ್ಮಾನ್ ಮುಸ್ಲಿಯಾರ್, ಫಾರೂಕ್ ಅಬ್ಬಾಸ್ ಕೋಟೆಪುರ, ಅಬ್ದುಲ್ ಖಾದರ್ ಸಾದಾತ್, ಇಬ್ರಾಹಿಂ ಉಳ್ಳಾಲ, ನುಹ್ಮಾನ್ ನೂರಾನಿ ಮತ್ತಿತರರು ಉಪಸ್ಥಿತರಿದ್ದರು. ದರ್ಗಾ ಪ್ರಧಾನ ಕಾರ್ಯದರ್ಶಿ ಶಿಹಾಬುದ್ದೀನ್ ಸಖಾಫಿ ಸ್ವಾಗತಿಸಿದರು.
ವ್ಯವಹಾರ ಆರಂಭಕ್ಕೆ ಬೆಳಗ್ಗಿನ ಸಮಯವೇ ಸೂಕ್ತ. ವ್ಯವಹಾರ ಕೇಂದ್ರದಲ್ಲಿ ಸ್ವಚ್ಛತೆ, ಪ್ರಾಮಾಣಿಕತೆಗೆ ಪ್ರಥಮ ಆದ್ಯತೆ ನೀಡಬೇಕು. ಗ್ರಾಹಕರು ಹಾಗೂ ತಮ್ಮ ಬಳಿ ಬರುವವರನ್ನು ಸದಾ ನಗುಮುಖದೊಂದಿಗೆ ಸ್ವಾಗತಿಸಿ ಶಾಂತ ಸ್ವಭಾವದಿಂದ ವ್ಯವಹಾರ ನಡೆಸಬೇಕು. ಪ್ರತಿದಿನ ದಾನ ನೀಡಲು ಮಹತ್ವ ನೀಡಿದಾಗ ವ್ಯವಹಾರದಲ್ಲಿ ಅಭಿವೃದ್ಧಿ ಕಾಣಲು ಸಾಧ್ಯ. ಡಾ.ಅಬ್ದುಲ್ ಹಕೀಂ ಅಝ್ಹರಿ ಮರ್ಕಝ್ ನಾಲೆಡ್ಜ್ ಸಿಟಿಯ ವ್ಯವಸ್ಥಾಪಕ ನಿರ್ದೇಶಕ ವಿದೇಶದಲ್ಲಿ ದುಡಿಯುವವರು ಕುಟುಂಬ ಮತ್ತು ಊರಿಗೆ ಆಸರೆಯಾಗಿರುತ್ತಾರೆ. ನನಗೆ 20 ವರ್ಷ ವಿದೇಶದಲ್ಲಿ ದುಡಿದು ಅನುಭವ ಇದ್ದ ಕಾರಣ ಉರುಸ್‌ನ ಇತಿಹಾಸದಲ್ಲೇ ಮೊದಲ ಬಾರಿಗೆ ಗಲ್ಫ್ ಮೀಟ್ ಆಯೋಜಿಸಿರುವೆ. ಬಿ.ಜಿ.ಹನೀಫ್ ದರ್ಗಾ ಅಧ್ಯಕ್ಷ https://www.vijayavani.net/pre-monsoon-review-meeting https://www.vijayavani.net/sri-shishileswara-temple-jathre