

ಲಂಡನ್: ಹೌಸ್ ಆಫ್ ಲಾರ್ಡ್ಸ್ನ ಪ್ರತಿನಿಧಿಯಾಗುವುದಕ್ಕೆ ಪ್ರಯತ್ನಿಸುತ್ತಿದ್ದ ಖಲಿಸ್ತಾನ ಬೆಂಬಲಿಗನೊಬ್ಬನನ್ನು ತಡೆಯುವ ಮೂಲಕ ಬ್ರಿಟನ್ ಸರ್ಕಾರ ಭಾರತದೊಂದಿಗೆ ಸಂಭವಿಸಲಿದ್ದ ರಾಜತಾಂತ್ರಿಕ ಬಿಕ್ಕಟ್ಟೊಂದನ್ನು ದೂರ ಮಾಡಿಕೊಂಡಿದೆ.
ಬ್ರಿಟನ್ನಲ್ಲಿರುವ ಸಿಖ್ ಫೆಡರೇಷನ್ನ ಪ್ರಿನ್ಸಿಪಾಲ್ ಅಡ್ವಸೈರ್ ದಬಿಂದರ್ಜಿತ್ ಸಿಂಗ್ ಸಿಧು ಅವರ ಹೆಸರನ್ನು ಹೌಸ್ ಆಫ್ ಲಾರ್ಡ್ಸ್ಗೆ ಅಲ್ಲಿನ ಲೇಬರ್ ಪಾರ್ಟಿ ನಾಮನಿರ್ದೇಶನ ಮಾಡಿತ್ತು. ಹೌಸ್ ಆಫ್ ಲಾರ್ಡ್ಸ್ನ ಅಪಾಯಿಂಟ್ ಕಮಿಷನ್ ಸಿಧು ಹೆಸರನ್ನು ಕೈಬಿಟ್ಟಿತ್ತು. ಬ್ರಿಟನ್ನಲ್ಲಿ 2019ರ ತನಕ ನಿಷೇಧಿಸಲ್ಪಟ್ಟಿದ್ದ ಇಂಟರ್ನ್ಯಾಷನಲ್ ಸಿಖ್ ಯೂತ್ ಫೆಡರೇಷನ್ ಜತೆಗೆ ಸಿಧು ಸಕ್ರಿಯವಾಗಿ ಗುರುತಿಸಿಕೊಂಡಿದ್ದಾರೆ. ಈ ಸಂಘಟನೆ ಭಾರತದಲ್ಲಿ ಇಂದಿಗೂ ನಿಷೇಧಿಸಲ್ಪಟ್ಟಿದೆ.
ಸಿಧು ಯುಕೆ ನ್ಯಾಷನಲ್ ಆಡಿಟ್ ಆಫೀಸ್ (ಭಾರತದ ಸಿಎಜಿ ಕಚೇರಿಗೆ ಸಮ)ನಲ್ಲಿ ಕೆಲಸ ಮಾಡುತ್ತಿದ್ದು, ಪ್ರತ್ಯೇಕ ಸಿಖ್ ರಾಷ್ಟ್ರ ಸ್ಥಾಪನೆಯನ್ನು ಪ್ರತಿಪಾದಿಸುತ್ತ ಬಂದವರು. ಸಿಧು ಅವರ ಹೆಸರು ಕೊನೆಯ ಹಂತದ ತನಕವೂ ಪಟ್ಟಿಯಲ್ಲಿತ್ತು. ಆದರೆ, ಸಂಭಾವ್ಯ ರಾಜತಾಂತ್ರಿಕ ಬಿಕ್ಕಟ್ಟನ್ನು ಮುನ್ನಂದಾಜಿಸಿದ ಲೇಬರ್ ಪಾರ್ಟಿಯ ನಾಯಕತ್ವ ಅವರ ಹೆಸರನ್ನು ಪಟ್ಟಿಯಿಂದ ಕೈಬಿಟ್ಟಿತು ಎಂದು ಮೂಲಗಳು ತಿಳಿಸಿವೆ. (ಏಜೆನ್ಸೀಸ್)
ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್ಗಾಗಿ ನಮ್ಮ ಫೇಸ್ಬುಕ್ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..