More

    ಕರೊನಾ ಸೋಂಕಿತ ಬ್ರಿಟಿಷ್ ಪ್ರಧಾನಿ ಬೋರಿಸ್​ ಜಾನ್ಸನ್​ ಅವರ ಗರ್ಭಿಣಿ ಪ್ರೇಯಸಿಗೂ ವೈರಸ್​; ಒಂದು ವಾರದಿಂದಲೂ ಕಾಡುತ್ತಿದೆ ಎಂದ ಕ್ಯಾರಿ​

    ಲಂಡನ್​: ಬ್ರಿಟಿಷ್​ ಪ್ರಧಾನ ಮಂತ್ರಿ ಬೋರಿಸ್​ ಜಾನ್ಸನ್​ ಅವರಿಗೆ ಕರೊನಾ ವೈರಸ್​ ತಗುಲಿದ್ದು, ತಾವು ಐಸೋಲೇಶನ್​​ನಲ್ಲಿ ಇರುವುದಾಗಿ ಹೇಳಿಕೊಂಡಿದ್ದಾರೆ.

    ಈಗ ಅವರ ಪ್ರೇಯಸಿ ಕ್ಯಾರಿ ಸೈಮಂಡ್ಸ್​ ಕೂಡ ಕರೊನಾದಿಂದ ಬಳಲುತ್ತಿದ್ದಾರೆ. ಗರ್ಭಿಣಿಯಾಗಿರುವ ಕ್ಯಾರಿಸ್​ ಕಳೆದ ವಾರವರೆಲ್ಲ ಕರೊನಾ ವೈರಸ್​ನಿಂದ ಹಾಸಿಗೆಯ ಮೇಲೆಯೇ ಕಳೆಯುವಂತಾಯಿತು ಎಂದು ತಿಳಿಸಿದ್ದಾರೆ.
    ನನ್ನಲ್ಲಿ ಕಳೆದ ವಾರ ಕರೊನಾ ವೈರಸ್​ ಲಕ್ಷಣಗಳು ಕಂಡು ಬಂತು. ಏಳಲೂ ಆಗದಷ್ಟು ಸುಸ್ತು ಇತ್ತು. ಒಂದು ವಾರ ಸರಿಯಾಗಿ ವಿಶ್ರಾಂತಿ ತೆಗೆದುಕೊಂಡೆ. ಈಗ ಕಾಯಿಲೆಯಿಂದ ಚೇತರಿಸಿಕೊಳ್ಳುತ್ತಿದ್ದೇನೆ. ಮತ್ತೇನೂ ಪರೀಕ್ಷೆ ಅಗತ್ಯವಿಲ್ಲ. ಸ್ಟ್ರಾಂಗ್​ ಆಗಿದ್ದೇನೆ ಎಂದು ಕ್ಯಾರಿ ಹೇಳಿದ್ದಾರೆ.

    ಗರ್ಭಿಣಿಯಾಗಿರುವ ನನಗೆ ಕರೊನಾ ವೈರಸ್​ ತಗುಲಿದಾದ ನಿಜಕ್ಕೂ ಆತಂಕವಾಯಿತು. ಆದರೆ ವೈದ್ಯಕೀಯ ಸಲಹೆ, ಸೂಚನೆಗಳನ್ನು ಚಾಚೂತಪ್ಪದೆ ಪಾಲಿಸಬೇಕು. ಗರ್ಭಿಣಿಯರು ಎಚ್ಚರಿಕೆಯಿಂದ ಇರಿ ಎಂದು ತಿಳಿಸಿದ್ದಾರೆ.

    ಬೋರಿಸ್​ ಜಾನ್ಸನ್​ ಅವರಿಗೂ ಕೂಡ ಕರೊನಾ ವೈರಸ್​ ಇದ್ದು, ಜ್ವರದಿಂದ ಬಳಲುತ್ತಿದ್ದಾರೆ. ಬೋರಿಸ್​ ಜಾನ್ಸಬ್​ (55) ಹಾಗೂ ಕ್ಯಾರಿಸ್​ ಸೈಮಂಡ್ಸ್​(35) ಇಬ್ಬರಿಗೂ ಇನ್ನೂ ಮದುವೆಯಾಗಿಲ್ಲ. ಆದರೆ ಜತೆಗೇ ವಾಸಿಸುತ್ತಿದ್ದಾರೆ. ಕ್ಯಾರಿ ಸೈಮಂಡ್ಸ್​ ಗರ್ಭಿಣಿಯಾಗಿರುವ ಬಗ್ಗೆ ಫೆಬ್ರವರಿಯಲ್ಲಿ ಹೇಳಿದ್ದರು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts