

Video Viral: ಸೋಶಿಯಲ್ ಮೀಡಿಯಾದಲ್ಲಿ ನಾವು ಹಲವಾರು ವೈರಲ್ ವಿಷಯಗಳನ್ನು ನೋಡುತ್ತೇವೆ. ಗಂಡನಿಗಾಗಿ ಪತ್ನಿ ಕೊಡಯವ ಸಪ್ರೈಸ್ ಗಿಫ್ಟ್ಗಳು, ಹೆಂಡತಿಗಾಗಿ ಗಂಡ ಅಡುಗೆ ಕಲಿತು ಮಾಡಿದ ವಿವಿಧ ತಿಂಡಿ, ತಿನಿಸುಗಳು ಹೀಗೆ ಹಲವಾರು ವೈರಲ್ ಸುದ್ದಿಗಳನ್ನು ನಾವು ನೋಡಿರುತ್ತೇವೆ. ಆದ್ರೆ ಇದೀಗ ವೈರಲ್ ಆಗಿರುವ ವಿಷಯ ಏನು ಅಂದ್ರೆ ಭಾರತೀಯ ಪತ್ನಿಗಾಗಿ ಯುಕೆ ಮೂಲದ ವ್ಯಕ್ತಿ ಇಡ್ಲಿ, ಅನ್ನದ ಜೊತೆಗೆ ವಿವಿಧ ಬಗೆಯ ದಕ್ಷಿಣ ಭಾರತದ ಖಾದ್ಯವನ್ನು ತಾನೇ ಮಾಡಿ ಹೆಂಡತಿಗೆ ಚಹಾದೊಂದಿಗೆ ಸವಿಯಲು ಕೊಟ್ಟ ವಿಡಿಯೋ ಸಖತ್ ವೈರಲ್ ಆಗಿದೆ. ಹಾಗಾದ್ರೆ ಆ ಕುರಿತು ಇನ್ನಷ್ಟು ಮಾಹಿತಿ ಇಲ್ಲಿದೆ ನೊಡಿ.
ಇತ್ತೀಚಿಗೆ ಇನ್‌ಸ್ಟಾಗ್ರಾಮ್ ರೀಲ್ಸ್ನಲ್ಲಿ ವೈರಲ್ ಆದ ಈ ವಿಡಿಯೋದಲ್ಲಿ ಯುಕೆ ಮೂಲದ ಪತಿ ತನ್ನ ಭಾರತೀಯ ಪತ್ನಿಗಾಗಿ ಅಡುಗೆಯವರಾಗಿ ರೂಪಾಂತರಗೊಂಡಿದ್ದಾನೆ. ಯುರೋಪಿಯನ್ ತಿಂಡಿಗಳನ್ನು ತಯಾರಿಸುವ ಬದಲು, ಆತನು ಸಂಪೂರ್ಣವಾಗಿ ಭಾರತೀಯ ದೇಸಿ ಶೈಲಿಯಲ್ಲಿ ಅಡುಗೆ ಮಾಡಲು ನಿರ್ಧರಿಸಿದ್ದಾನೆ. ಇಲ್ಲಿ ಆ ವ್ಯಕ್ತಿಯೂ ತನ್ನ ಹೆಂಡತಿಗೆ ಮೃದುವಾದ ಇಡ್ಲಿಗಳು, ಚಟ್ನಿ ಮತ್ತು ಅನ್ನ ಜೊತೆಗ ಒಂದು ಕಪ್ ಮಸಾಲಾ ಚಾಯ್‌ನೊಂದಿಗೆ ದಕ್ಷಿಣ ಭಾರತದ ಉಪಹಾರವನ್ನು ತಯಾರಿಸುತ್ತಿರುವುದನ್ನು ಕಾಣಬಹುದು.
ವಿಡಿಯೋದಲ್ಲಿ ಅವರು ಪ್ಯಾನ್‌ನಲ್ಲಿ ತೆಂಗಿನ ಎಣ್ಣೆಯನ್ನು ಬಿಸಿ ಮಾಡಿ ಅದಕ್ಕೆ ತಾಜಾ ಕರಿಬೇವಿನ ಎಲೆಗಳನ್ನು ಹಾಕಿ ನಂತರ ಕತ್ತರಿಸಿದ ಈರುಳ್ಳಿ, ಹಸಿರು ಮೆಣಸಿನಕಾಯಿಗಳು ಮತ್ತು ಟೊಮೆಟೊಗಳನ್ನು ಸೇರಿಸಿದರು, ಕೆಲವು ಸೆಕೆಂಡುಗಳ ನಂತರ, ಅವರು ಎಚ್ಚರಿಕೆಯಿಂದ ಇಡ್ಲಿ ಹಿಟ್ಟನ್ನು ಗ್ರೀಸ್ ಮಾಡಿದ ಅಚ್ಚುಗಳಲ್ಲಿ ಚಮಚ ಮಾಡಿ ಸ್ಟೀಮರ್‌ನಲ್ಲಿ ಇರಿಸಿದರು.
ಇಡ್ಲಿಗಳು ಬೇಯುತ್ತಿರುವಾಗ, ಅವರು ಟೊಮೆಟೊ ಮಿಶ್ರಣವನ್ನು ಕಡಲೆಕಾಯಿಯೊಂದಿಗೆ ಬೆರೆಸಿ ರುಚಿಕರವಾದ ಚಟ್ನಿಯನ್ನು ತಯಾರಿಸಿದರು. ಜೊತೆಗೆ ತನ್ನ ಪ್ರೇಯಸಿಗಾಗಿ ಚಾಯ್ ಕೂಡ ತಯಾರಿಸಿದನು, ಬಿಸಿ ನೀರಿಗೆ ಟೀ ಬ್ಯಾಗ್‌ಗಳನ್ನು ಸೇರಿಸಿದನು, ಶುಂಠಿಯನ್ನು ಗಾರ ಮತ್ತು ಕುಟ್ಟಾಣಿಯಿಂದ ಪುಡಿಮಾಡಿ ಹಾಲನ್ನು ಬೆರೆಸಿ ಬಿಸಿಬಿಸಿಯಾದ ಟೀಯನ್ನು ತನ್ನ ಪತ್ನಿಗಾಗಿ ಮಾಡಿ ಕೊಟ್ಟರು.
ನಂತರ ಅವನು ಇಡ್ಲಿ ಮತ್ತು ಚಟ್ನಿಯೊಂದಿಗೆ ಒಂದು ತಟ್ಟೆಯನ್ನು ಜೋಡಿಸಿ, ಸೋಫಾದ ಮೇಲೆ ವಿಶ್ರಾಂತಿ ಪಡೆಯುತ್ತಿದ್ದ ತನ್ನ ಹೆಂಡತಿಯ ಬಳಿಗೆ ನಡೆದನು. ಅವನು ನಗುತ್ತಾ ಬಿಸಿ ಚಹಾ ಕಪ್ ಅನ್ನು ಅವಳಿಗೆ ಕೊಟ್ಟನು, ಮತ್ತು ಅವಳು ಕೃತಜ್ಞತೆಯಿಂದ ಊಟವನ್ನು ಸ್ವೀಕರಿಸಿದಳು.
ನೆಟ್ಟಿಗರ ಪ್ರತಿಕ್ರಿಯೆ
ಈ ವಿಡಿಯೋ ಬೇಗನೆ ವೈರಲ್ ಆಗಿದ್ದು, 35,000 ಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದುಕೊಂಡಿದೆ. ಇದಕ್ಕೆ ಒಬ್ಬ ನೆಟ್ಟಿಗ "ಛೀ. ಅವನು ಪ್ರತಿಯೊಬ್ಬ ಭಾರತೀಯ ಗಂಡನನ್ನೂ ನಾಚಿಕೆಪಡಿಸುತ್ತಾನೆ" ಎಂದು ಕಾಮೆಂಟ್ ಮಾಡಿದ್ದಾರೆ. (ಏಜೆನ್ಸೀಸ್)