ಕನ್ನಡ ಹಬ್ಬದಲ್ಲಿ ಆರೋಗ್ಯ ಉಚಿತ ಶಿಬಿರ
ವಿಜಯವಾಣಿ ಸುದ್ದಿಜಾಲ ಉಡುಪಿ
ಕನ್ನಡ ಸಾಹಿತ್ಯ ಪರಿಷತ್ನ ಉಡುಪಿ ತಾಲೂಕು ಘಟಕದ 15ನೇ ಕನ್ನಡ ಸಾಹಿತ್ಯ ಸಮ್ಮೇಳನ ಕಲಾಯತನ ಕೊಡವೂರಿನ ಶಂಕರನಾರಾಯಣ ದೇಗುಲದ ವಸಂತ ಸಭಾಂಗಣದಲ್ಲಿ ಮೇ 17ರಂದು ನಡೆಯಲಿದೆ.


ಶಿಕ್ಷಣ ತಜ್ಞ ಪ್ರೊ. ಎಂ.ಎಲ್. ಸಾಮಗ ಸರ್ವಾಧ್ಯಕ್ಷತೆ ವಹಿಸಲಿದ್ದಾರೆ. ವಿವಿಧ ವಿಚಾರಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮ, ಪುಸ್ತಕ ಬಿಡುಗಡೆ ಹಾಗೂ 20ಕ್ಕೂ ಅಧಿಕ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ನಡೆಯಲಿದೆ.
ಆಯುರ್ವೇದ ಆರೋಗ್ಯ ಶಿಬಿರ
ಅಕ್ಷರ ಜಾತ್ರೆಯಲ್ಲಿ ವಿವಿಧ ತಜ್ಞ ವೈದ್ಯರಿಂದ ಆಯುರ್ವೇದ ಆರೋಗ್ಯ ಶಿಬಿರ ಆಯೋಜಿಸಲಾಗಿದೆ. ಕಣ್ಣು, ಕಿವಿ, ಮೂಗು, ಗಂಟಲು ಮತ್ತು ತಲೆನೋವು ಸಮಸ್ಯೆಗಳಿಗೆ ಉಚಿತ ತಪಾಸಣೆ ನಡೆಯಲಿದೆ. ಅಲ್ಲದೆ, ಕಾಯಿಲೆಗೆ ನಿವಾರಣೆಗಾಗಿ ಆಯುರ್ವೇದಿಕ್ ಔಷಧವನ್ನೂ ವಿತರಿಸಲಾಗುವುದು.
ಕುತ್ಪಾಡಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಆಸ್ಪತ್ರೆಯ ಡಾ. ಸುಷ್ಮಾ ಪ್ರಶಾಂತ, ಡಾ. ಗಾಯತ್ರಿ ಜಿ. ಹೆಗ್ಡೆ, ಡಾ. ಶಬರಿನಾಥ ಎಂ.ಕೆ. ಪಾಲ್ಗೊಳ್ಳಲಿದ್ದು ಆರೋಗ್ಯ ಸಲಹೆಯನ್ನೂ ನೀಡಲಿದ್ದಾರೆ ಎಂದು ಕಸಾಪ ಉಡುಪಿ ತಾಲೂಕು ಘಟಕದ ಅಧ್ಯಕ್ಷ ರವಿರಾಜ ಎಚ್.ಪಿ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.