More

    ಕರ್ತವ್ಯ ಮೆರೆದ ಉಡುಪಿ ನ್ಯಾಯಾಧೀಶೆ ಶರ್ಮಿಳಾ ಎಸ್.

    ಉಡುಪಿ: ಮಹಿಳೆಯರ ಹಾಗೂ ಮಕ್ಕಳ ಹಕ್ಕುಗಳ ಕುರಿತು ಜಾಗೃತಿ ಮೂಡಿಸುವುದಷ್ಟೇ ಅಲ್ಲ, ಆ ಹಕ್ಕುಗಳ ಮೂಲಕ ರಕ್ಷಣೆ ನೀಡುವುದೂ ಸಹ ನಮ್ಮ ಪರಮ ಕರ್ತವ್ಯ ಎನ್ನುವುದನ್ನು ಉಡುಪಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಧೀಶೆ ಶರ್ಮಿಳಾ ಎಸ್. ತೋರ್ಪಡಿಸಿದ್ದಾರೆ.

    ಹೊರರಾಜ್ಯದ ಓರ್ವ ಮಹಿಳೆ ತನ್ನ ಇಬ್ಬರು ಚಿಕ್ಕ ಮಕ್ಕಳೊಂದಿಗೆ ಗುರುವಾರ ಮಧ್ಯಾಹ್ನದ ರಣ ಬಿಸಿಲಿನಲ್ಲಿ ರಸ್ತೆಯಲ್ಲಿ ಅಡ್ಡಾಡುತ್ತ ಅದೇನೋ ವಸ್ತು ಮಾರಾಟ ಮಾಡುತ್ತಿರುವುದನ್ನು ಕಂಡ ನ್ಯಾಯಾಧೀಶೆ ಶರ್ಮಿಳಾ ಎಸ್., ಅವರನ್ನು ರಕ್ಷಿಸುವ ಮೂಲಕ ಜನರ ಗಮನ ಸೆಳೆದಿದ್ದಾರೆ.

    ನಗರದ ನ್ಯಾಯಾಲಯದ ಮುಂಭಾಗದ ರಸ್ತೆಯಲ್ಲಿ ಹೊರ ರಾಜ್ಯದ ಮಹಿಳೆಯೋರ್ವಳು ತನ್ನ ಇಬ್ಬರು ಪುಟಾಣಿ ಮಕ್ಕಳ ಮೂಲಕ ಸುಂದರ ಕಲಾಕೃತಿ ಇರುವ ಸಣ್ಣ ಪುಸ್ತಕ ವಾರಾಟ ವಾಡಿಸುತ್ತಿದ್ದಳು. ಆಕೆ ನೆರಳಲ್ಲಿ ಕುಳಿತು, ಮಕ್ಕಳ ಬಳಿ ಪುಸ್ತಕ ಮಾರಾಟ ಮಾಡಿಸುತ್ತಿದ್ದಳು. ನ್ಯಾಯಾಲಯಕ್ಕೆ ತೆರಳುತ್ತಿದ್ದ ನ್ಯಾಯಾಧೀಶೆ ಶರ್ಮಿಳಾ ಅವರು ಇದನ್ನು ನೋಡಿ ಕೂಡಲೇ ಮಹಿಳೆ-ಮಕ್ಕಳು ಇದ್ದ ಸ್ಥಳಕ್ಕೆ ಆಗಮಿಸಿದರು. ಮೊಬೈಲ್ ಮೂಲಕ ಮಹಿಳಾ ಠಾಣೆ ಪೊಲೀಸರಿಗೆ ಕರೆ ಮಾಡುತ್ತಿದ್ದಂತೆ ಅವರೂ ಸ್ಥಳಕ್ಕೆ ದೌಡಾಯಿಸಿದರು.

    ಶರ್ಮಿಳಾ ಅವರು ಆ ಮಹಿಳೆಯ ಬಳಿ ಕುಟುಂಬದ ಬಗ್ಗೆ ಪ್ರಶ್ನಿಸಿದರು. ಕಣ್ಣೀರಿಡುತ್ತ ವಾತನಾಡಿದ ಆಕೆ, ಹೊಟ್ಟೆಗೆ ತಿನ್ನಲು ಸರಿಯಾಗಿ ಆಹಾರ ತಿನ್ನಲು ದುಡ್ಡಿಲ್ಲ. ಹೀಗಾಗಿ ಈ ಸಣ್ಣ ಪುಸ್ತಕ ವಾರಾಟ ವಾಡುತ್ತಿದ್ದೇನೆ ಎಂದು ಗದ್ಗದಿತವಾಗಿ ಉತ್ತರಿಸಿದಳು. ಇದೇ ವೇಳೇ ಮಕ್ಕಳ ರಕ್ಷಣಾ ಟಕ ಹಾಗೂ ಕಾರ್ಮಿಕ ಇಲಾಖೆಗೂ ವಾಹಿತಿ ನೀಡಿದ್ದರಿಂದ ಅವರೂ ಸ್ಥಳಕ್ಕಾಗಮಿಸಿದರು. ಕಾನೂನಾತ್ಮಕವಾಗಿ ತಾಯಿ-ಮಕ್ಕಳನ್ನು ರಕ್ಷಿಸುವ ಪ್ರಕ್ರಿಯೆ ನಡೆಸಿದರು.

    ಸ್ಥಳಕ್ಕಾಗಮಿಸಿದ ಮಹಿಳಾ ಠಾಣೆಯ ಸಿಬ್ಬಂದಿ ಸ್ಟೇಷನ್‌ಗೆ ಬರಲು ಸೂಚಿಸಿದರೂ ಮಹಿಳೆ ನಿರಾಕರಿಸಿದರು. ಕೊನೆಗೆ ಹರಸಾಹಸ ಪಟ್ಟು ಮಹಿಳಾ ಠಾಣಾ ಸಿಬ್ಬಂದಿ ಆಟೋ ರಿಕ್ಷಾದಲ್ಲಿ ಮಹಿಳೆ ಹಾಗೂ ಮಕ್ಕಳನ್ನು ಠಾಣೆಗೆ ಕರೆದುಕೊಂಡು ಹೋದರು. ಪೊಲೀಸರು ಬರುವವರೆಗೂ ನ್ಯಾಯಧೀಶೆ ಶರ್ಮಿಳಾ ಅವರೇ ಸ್ಥಳದಲ್ಲಿದ್ದು, ಮಕ್ಕಳ ಆರೈಕೆ ವಾಡಿ, ಬಳಿಕ ಅವರು ನ್ಯಾಯಾಲಯಕ್ಕೆ ತೆರಳಿದರು. ತಾಯಿ ಹಾಗೂ ಇಬ್ಬರು ಮಕ್ಕಳನ್ನು, ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರು ಪಡಿಸಿದರು. ನಂತರ ಸಖಿ ಸೆಂಟರ್‌ಗೆ ಅವರನ್ನು ಸ್ಥಳಾಂತರಿಸಲಾಗಿದ್ದು, ಆರೈಕೆ ಮಾಡಲಾಗುತ್ತಿದೆ. ನ್ಯಾಯಾಧೀಶೆಯ ಮಾನವೀಯ ಕಳಕಳಿಗೆ ಇದೀಗ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

    ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯೂ ಆಗಿರುವ ನಾನು ಜಿಲ್ಲೆಯಲ್ಲಿ ಹಕ್ಕುಗಳ ರಕ್ಷಣೆಗೆ ಬಗ್ಗೆ ಜನರಿಗೆ ಅರಿವು ಮೂಡಿಸುವ ಕಾರ್ಯವನ್ನು ಮಾಡುತ್ತಿದ್ದೇನೆ. ಕಣ್ಣೆದುರಿಗೇ ಮಕ್ಕಳ ಹಕ್ಕು ನಾಶ ಆಗುತ್ತಿರುವುದನ್ನು ಕಂಡು ಅವರನ್ನು ರಕ್ಷಿಸುವ ಕಾರ್ಯ ಮಾಡಿದ್ದೇನೆ. ಸಾರ್ವಜನಿಕರೂ ಸಹ ಇಂತಹ ವಿದ್ಯಮಾನ ಕಂಡುಬಂದಲ್ಲಿ ನಮಗ್ಯಾಕೆ ಎಂದು ಸುಮ್ಮನೆ ಹೋಗಬಾರದು. ಸಂವಿಧಾನ ನೀಡಿರುವ ಹಕ್ಕುಗಳನ್ನು ರಕ್ಷಿಸುವುದು ಪ್ರತಿ ಪ್ರಜೆಯ ಕರ್ತವ್ಯವಾಗಿದೆ.
    – ಶರ್ಮಿಳಾ ಎಸ್. ಹಿರಿಯ ಸಿವಿಲ್ ನ್ಯಾಯಾಧೀಶೆ, ಉಡುಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts