More

    ಸ್ಟಾಪ್ ಕೊಡಿಸಲು ಖುದ್ದು ಬಸ್ ಏರಿದ ತಹಸೀಲ್ದಾರ್ ಪ್ರತಿಭಾ: ಆರ್‌ಟಿಒ ನಿರ್ದೇಶನ ಪಾಲಿಸದ ಡ್ರೈವರ್-ಕಂಡಕ್ಟರ್‌ಗೆ ಪಾಠ

    ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ
    ಕಾಪು ಬಂಗ್ಲೆ ಮೈದಾನ ಬಳಿಯಿರುವ ನೂತನ ಆಡಳಿತಸೌಧಕ್ಕೆ ಬರುವ ಜನರಿಗೆ ಅನುಕೂಲವಾಗುವಂತೆ ಎಲ್ಲ್ಲ ಬಸ್‌ಗಳನ್ನು ಅಲ್ಲಿ ನಿಲುಗಡೆ ಮಾಡುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿ, ಬಸ್ ಮಾಲೀಕರ ಸಂಘಗಳಿಗೆ ಸೂಚನೆ ನೀಡಿದ್ದರೂ ಬಸ್‌ಗಳನ್ನು ನಿಲುಗಡೆ ಮಾಡದೆ ಸಂಚರಿಸುತ್ತಿದ್ದ ಪರಿಣಾಮ ಆಗುವ ತೊಂದರೆ ಮನಗಂಡ ಕಾಪು ತಹಸೀಲ್ದಾರ್ ಪ್ರತಿಭಾ ಆರ್. ಶುಕ್ರವಾರ ಖುದ್ದು ಬಸ್‌ನಲ್ಲಿ ಆಗಮಿಸಿ ಆಡಳಿತ ಸೌಧ ಮುಂಬಾಗ ಬಸ್ ನಿಲುಗಡೆ ಪಡೆದು ಕಚೇರಿ ತಲುಪಿದರು.

    ಆರ್‌ಟಿಒ ಸೂಚನೆಗೆ ನೋ ಕೇರ್: ಸಾರ್ವಜನಿಕರಿಗೆ ತೊಂದರೆ

    ಕಾಪು ನೂತನ ಆಡಳಿತ ಸೌಧದಲ್ಲಿ ಶಾಸಕರ ಕಚೇರಿ, ತಾಲೂಕು ಕಚೇರಿ, ತಾಲೂಕು ಪಂಚಾಯಿತಿ ಕಚೇರಿ, ಉಪಖಜಾನಾಧಿಕಾರಿಗಳ ಕಚೇರಿ, ಆಹಾರ ಶಾಖೆ ಮತ್ತು ಭೂದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿ ಕಾರ್ಯ ನಿರ್ವಹಿಸುತ್ತಿದೆ. ಕಚೇರಿ ಸಿಬ್ಬಂದಿ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಬಸ್ ನಿಲುಗಡೆಗೆ ನಿರ್ದೇಶನ ನೀಡುವಂತೆ ಕಾಪು ತಹಸೀಲ್ದಾರ್ ಜಿಲ್ಲಾ ಪ್ರಾದೇಶಿಕ ಸಾರಿಗೆ ಇಲಾಖೆಗೆ ಕೋರಿದ್ದರು. ಅದರಂತೆ ಸಾರಿಗೆ ಅಧಿಕಾರಿ ಬಸ್ ನಿಲುಗಡೆ ಮಾಡುವಂತೆ ಅವಿಭಜಿತ ದಕ್ಷಿಣಕನ್ನಡ ಜಿಲ್ಲಾ ಕೆನರಾ ಬಸ್ ಮಾಲೀಕರ ಸಂಘ, ಕರಾವಳಿ ಬಸ್ ಮಾಲೀಕರ ಸಂಘ ಹಾಗೂ ಶಿರ್ವ ಬಸ್ ಮಾಲೀಕರ ಸಂಘಕ್ಕೆ 2023 ನವೆಂಬರ್ 3ರಂದು ಸೂಚನೆ ನೀಡಿದ್ದರು. ಆದರೆ ಆ ಬಳಿಕ ಯಾವೊಂದು ಬಸ್‌ಗಳು ನಿಲುಗಡೆ ಮಾಡದೆ ಕಚೇರಿ ಸಿಬ್ಬಂದಿ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವುದನ್ನು ತಹಸೀಲ್ದಾರ್ ಗಮನಕ್ಕೆ ತರಲಾಗಿತ್ತು.

    ತಹಸೀಲ್ದಾರ್ ಹಲವಾರು ಬಾರಿ ಕೇಳಿಕೊಂಡ ಬಳಿಕ ಸ್ಟಾಪ್ ನೀಡಿದರು

    ಪ್ರತಿನಿತ್ಯ ಬಸ್‌ನಲ್ಲಿ ಬರುವ ಕಚೇರಿ ಸಿಬ್ಬಂದಿ ಹಾಗೂ ಸಾರ್ವಜನಿಕರು ಬಸ್‌ಗಳವರೊಡನೆ ವಾಗ್ವಾದ ನಡೆಸುವ ಪರಿಸ್ಥಿತಿ ಇತ್ತು. ಇದನ್ನು ತಿಳಿದ ತಹಸೀಲ್ದಾರ್ ಶುಕ್ರವಾರ ಉಡುಪಿಯಿಂದ ಖುದ್ದಾಗಿ ಕಾಪುವಿಗೆ ಬಸ್‌ನಲ್ಲಿ ಆಗಮಿಸಿದ್ದರು. ತಹಸೀಲ್ದಾರ್ ನಿರ್ವಾಹಕರಲ್ಲಿ ಹಲವು ಬಾರಿ ಕೇಳಿಕೊಂಡ ಬಳಿಕ ಆಡಳಿತ ಸೌಧ ಮುಂಭಾಗ ನಿಲುಗಡೆ ನೀಡಿದ್ದಾರೆ. ಪ್ರಯಾಣಿಕರಿಗೆ ಅನುಕೂಲಕ್ಕಾಗಿ ಬಸ್‌ಗಳನ್ನುನಿಲುಗಡೆ ಮಾಡುವಂತೆ ಸಾರಿಗೆ ಅಧಿಕಾರಿ ಕಟ್ಟು ನಿಟ್ಟಿನ ಕ್ರಮವಹಿಸಬೇಕು ಎಂದು ತಹಸೀಲ್ದಾರ್ ಸೂಚಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts