ಕಡಿದ ಹಾವಿನೊಂದಿಗೇ ಬಂದು ಚಿಕಿತ್ಸೆ ಪಡೆದ!

Snake
Published on

ಬಂಟ್ವಾಳ (ದ.ಕ.): ನಾಗರಹಾವಿನ ಕಡಿತದಿಂದ ಗಾಯಗೊಂಡ ಅರಳ ನಿವಾಸಿ, ಔಷಧ ನೀಡುವಂತೆ ಹಾವಿನ ಸಮೇತ ನಾಟಿ ವೈದ್ಯರ ಬಳಿಗೆ ತೆರಳಿದ ಅಪರೂಪದ ಘಟನೆ ಪೊಳಲಿ ಸಮೀಪದ ಕೊಳತ್ತಮಜಲಿನಲ್ಲಿ ನಡೆದಿದೆ.

ಹಾವು ಹಿಡಿಯಲು ಹೋದ ಸಂದರ್ಭ ಸಣ್ಣ ಗಾತ್ರದ ನಾಗರಹಾವು ಕೈಗೆ ಕಚ್ಚಿತ್ತು. ಗಾಯವಾದರೂ, ಛಲ ಬಿಡದ ಆತ ಕಚ್ಚಿದ ಹಾವನ್ನು ಹಿಡಿದು ವಿಷ ಜಂತು ಕಡಿತಕ್ಕೆ ಔಷಧ ನೀಡುವ ವೈದ್ಯ ಜನಾರ್ದನ ಎಚ್.ಎಸ್.ಕೊಳತ್ತಮಜಲು ಬಳಿ ತೆಗೆದುಕೊಂಡು ಹೋದರು. ಕಡಿದದ್ದು ನಾಗರಹಾವು ಎಂದು ಖಚಿತಪಡಿಸಿದ ವೈದ್ಯರು, ಚಿಕಿತ್ಸೆ ನೀಡಿದರು. ಇದೀಗ ಗಾಯಾಳು ಚೇತರಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net