More

    ಕಾಪು ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದಲ್ಲಿ ಮನ್ಮಹಾರಥೋತ್ಸವ ಸಂಪನ್ನ

    ಪಡುಬಿದ್ರಿ: ಮಹತೋಭಾರ ಕಾಪು ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದ ವಾರ್ಷಿಕ ಮಹೋತ್ಸವ ಅಂಗವಾಗಿ ಮಾರಿಯಮ್ಮ ದೇವಿಯ ಭೇಟಿ ಸಹಿತ ರಥಾರೋಹಣ ಸಾವಿರಾರು ಭಕ್ತರ ಪಾಲ್ಗೊಳ್ಳುವಿಕೆಯಲ್ಲಿ ಭಾನುವಾರ ವಿಜೃಂಭಣೆಯಿಂದ ಸಂಪನ್ನಗೊಂಡಿತು.

    ದೇಗುಲದ ಪ್ರಧಾನ ತಂತ್ರಿಗಳಾದ ಅನಂತರಾಮ ತಂತ್ರಿ ಕಲ್ಯ ಮತ್ತು ಕೆ.ಪಿ.ಶ್ರೀನಿವಾಸ ತಂತ್ರಿ ಮಡುಂಬು ನೇತೃತ್ವದಲ್ಲಿ ಅರ್ಚಕ ನಾರಾಯಣ ತಂತ್ರಿ ಉಪಸ್ಥಿತಿಯಲ್ಲಿ, ವೈದಿಕ ವೃಂದದವರ ಪಾಲ್ಗೊಳ್ಳುವಿಕೆಯೊಂದಿಗೆ ವಾರ್ಷಿಕ ಮಹೋತ್ಸವ ಹಾಗೂ ಪಲ್ಲಪೂಜೆ ಸಹಿತ ವಿವಿಧ ಧಾರ್ಮಿಕ ವಿಧಿಗಳು ನೆರವೇರಿದವು. ಉತ್ಸವ ಅಂಗವಾಗಿ ದೇವಸ್ಥಾನ ಹಾಗೂ ದೇವರನ್ನು ಹೂವುಗಳಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು.

    ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಅರುಣ್ ಕುಮಾರ್ ಬಿ.ಕೆ, ಗೌರವ ಸಲಹೆಗಾರ ಕೆ.ಪಿ.ಆಚಾರ್ಯ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶಶಿಧರ್ ಎಂ.ಶೆಟ್ಟಿ ಎರ್ಮಾಳು, ರಾಶಿಪೂಜಾ ಮಹೋತ್ಸವ ಸಮಿತಿ ಅಧ್ಯಕ್ಷ ಕೆ.ವಾಸುದೇವ ಶೆಟ್ಟಿ, ಮಾಜಿ ಆಡಳಿತ ಮೊಕ್ತೇಸರ ಮೋಹನ್ ಎಂ.ಬಂಗೇರ, ಮಾಜಿ ಶಾಸಕ ಲಾಲಾಜಿ ಆರ್.ಮೆಂಡನ್, ಪ್ರಮುಖರಾದ ಅನಿಲ್ ಬಲ್ಲಾಳ್ ಕಾಪು ಬೀಡು, ರಮೇಶ್ ಹೆಗ್ಡೆ ಕಲ್ಯ, ಮನೋಹರ್ ಶೆಟ್ಟಿ ಕಾಪು, ಕಾಪು ದಿವಾಕರ ಶೆಟ್ಟಿ, ದೇವಿಪ್ರಸಾದ್ ಶೆಟ್ಟಿ ಬೆಳಪು, ನಡಿಕೆರೆ ರತ್ನಾಕರ ಶೆಟ್ಟಿ, ವಿಕ್ರಂ ಕಾಪು, ಪ್ರಭಾಕರ ಪೂಜಾರಿ ಕಾಪು, ಯೋಗೀಶ್ ಶೆಟ್ಟಿ ಬಾಲಾಜಿ, ರತ್ನಾಕರ ಹೆಗ್ಡೆ ಕಲೀಲಬೀಡು, ಶ್ರೀಕರ ಶೆಟ್ಟಿ ಕಲ್ಯ, ಕೆ.ಶ್ರೀಧರ ಶೆಣೈ, ಪ್ರಸಾದ್ ಜಿ.ಶೆಣೈ ಮತ್ತು ಕಾಪು ಸಾವಿರ ಸೀಮೆಯ ಭಗವದ್ಭಕ್ತರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts