More

    ಹರಪನಹಳ್ಳಿ ಶ್ರೀ ಕೋಟೆ ಆಂಜನೇಯಸ್ವಾಮಿ ರಥೋತ್ಸವ ಅದ್ದೂರಿ

    ಹರಪನಹಳ್ಳಿ: ಪಟ್ಟಣದ ಐತಿಹಾಸಿಕ ಪ್ರಸಿದ್ಧ ಶ್ರೀ ಕೋಟೆ ಆಂಜನೇಯಸ್ವಾಮಿ ರಥೋತ್ಸವವು ಮಂಗಳವಾರ ಸಹಸ್ರಾರು ಭಕ್ತರ ಮಧ್ಯೆ ಅದ್ದೂರಿಯಾಗಿ ಜರುಗಿತು.

    ಇದನ್ನೂ ಓದಿ: ಶ್ರೀ ಆಂಜನೇಯಸ್ವಾಮಿ ಬ್ರಹ್ಮ ರಥೋತ್ಸವ

    ಜಾತ್ರೆ ನಿಮಿತ್ತ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಬೆಳಗ್ಗೆಯಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ವಿಶೇಷ ಪೂಜೆ, ದ್ರಾಕ್ಷಿ, ಸೇಬು ಸೇರಿದಂತೆ ತರಹೇವಾರಿ ಹಣ್ಣುಗಳಿಂದ ಅಲಂಕಾರ ಮಾಡಲಾಗಿತ್ತು. ರಥಕ್ಕೆ ವಿವಿಧ ಬಣ್ಣಗಳ ಬಾವುಟ, ದೇವತೆಗಳ ಭಾವಚಿತ್ರ ಜತೆಗೆ ಬಾಳೆದಿಂಡು, ಮಾವಿನ ತೋರಣ ಹಾಗೂ ಪುಷ್ಪಮಾಲೆಯೊಂದಿಗೆ ಸಿಂಗರಿಸಲಾಗಿತ್ತು.

    ದೇವಸ್ಥಾನದ ಧರ್ಮಕರ್ತ ಡಾ.ಹರ್ಷ ಪೂಜೆ ನೇರವೇರಿಸಿ, ಉತ್ಸವ ಮೂರ್ತಿ ಐದು ಸುತ್ತು ಪ್ರದಕ್ಷಿಣೆ ಹಾಕಿದ ಬಳಿಕ ರಥದಲ್ಲಿ ಪ್ರತಿಷ್ಠಾಪಿಸಿ ಭಕ್ತರ ಜಯಘೋಷಗಳ ಮಧ್ಯೆ ಎಳೆಯಲಾಯಿತು. ಹರಕೆ ಹೊತ್ತಿದ್ದ ಭಕ್ತರು ರಥಕ್ಕೆ ತೆಂಗಿನಕಾಯಿ ಒಡೆದು ಪೂಜೆ ಸಲ್ಲಿಸಿದರು. ಬಾಳೆಹಣ್ಣು, ಉತ್ತತ್ತಿ ತೂರಿ ಭಕ್ತಿ ಸಮರ್ಪಿಸಿದರು.

    ಜೋಡಿ ರಥೋತ್ಸವ: ಬೆಣ್ಣಿಹಳ್ಳಿ ಗ್ರಾಮದ ಪಂಪಾಪತಿ ಸ್ವಾಮಿ ಹಾಗೂ ಹಂಪಾಂಬಾ ಜೋಡಿ ರಥೋತ್ಸವ ವಿಜೃಂಭಣೆಯಿಂದ ಜರುಗಿತು. ರಥೋತ್ಸವದ ಹಿನ್ನೆಲೆಯಲ್ಲಿ ಬೆಳಗ್ಗೆ ಕಲಶಾರೋಹಣ, ಕಂಕಣ ಕಟ್ಟುವ ಧಾರ್ಮಿಕ ಕಾರ್ಯಕ್ರಮ ಜರುಗಿದವು. ಸಂಜೆ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ವಿವಿಧ ಪುಷ್ಟಗಳಿಂದ ಅಲಂಕೃತಗೊಂಡಿದ್ದ ಜೋಡಿ ರಥಗಳಿಗೆ ಭಕ್ತರು ಬಾಳೆ ಹಣ್ಣು ಎಸೆದು ಭಕ್ತಿ ಸಮರ್ಪಿಸಿದರು.

    ನೀಲಗುಂದ ಗ್ರಾಮದಲ್ಲಿ ಶ್ರೀ ವೀರಭದ್ರೇಶ್ವರ ಹಾಗೂ ಶ್ರೀ ವೆಂಕಟೇಶ್ವರ ಜೋಡಿ ರಥೋತ್ಸವ ಜರುಗಿತು. ಗುಂಡಗತ್ತಿ ಗ್ರಾಮದಲ್ಲಿ ಆಂಜನೇಯಸ್ವಾಮಿಯ ನೂತನ ರಥೋತ್ಸವವು ವೈಭವೋಪೇತವಾಗಿ ಜರುಗಿತು.

    ಅರಸೀಕೆರೆ ಶ್ರೀ ಕೋಲಶಾಂತೇಶ್ವರ ರಥೋತ್ಸವ, ಚಿರಸ್ತಹಳ್ಳಿ ಗ್ರಾಮದಲ್ಲಿ ಶ್ರೀ ಆಂಜನೇಯಸ್ವಾಮಿ ಹಾಗೂ ಶ್ರೀ ಗುರು ಕಳಕ ಮಲ್ಲೇಶ್ವರ ಸ್ವಾಮಿಯ ರಥೋತ್ಸವವು ಸಂಭ್ರಮ, ಸಡಗರದಿಂದ ಜರುಗಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts