More

    ಶ್ರೀ ಆಂಜನೇಯಸ್ವಾಮಿ ಬ್ರಹ್ಮ ರಥೋತ್ಸವ

    ಚನ್ನಗಿರಿ: ಪಟ್ಟಣದ ಮುದ್ದೇನಹಳ್ಳಿ ಶ್ರೀ ಆಂಜನೇಯಸ್ವಾಮಿ ಬ್ರಹ್ಮ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಬುಧವಾರ ಅದ್ದೂರಿಯಾಗಿ ಜರುಗಿತು.
    ರಥೋತ್ಸವದ ನಿಮಿತ್ತ ಮೂರು ದಿನಗಳ ಕಾಲ ವಿಶೇಷ ಪೂಜೆಗಳು ನಡೆದು, ಜನರು ಭಕ್ತಿಸಾಗರದಲ್ಲಿ ಮಿಂದೆದ್ದರು.

    ಪಟ್ಟಣದ ರಾಜಬೀದಿ ಹಾಗೂ ಮುದ್ದೇನಹಳ್ಳಿ ಗ್ರಾಮದ ಬೀದಿಗಳನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ದೇವರಿಗೆ ಹೂಗಳಿಂದ ಅಲಂಕರಿಸಿ ವಿಶೇಷ ಪೂಜೆ ನೆರವೇರಿಸಲಾಯಿತು.

    ಸೋಮವಾರ ದೇವರಿಗೆ ಅಭಿಷೇಕ, ಪುಣ್ಯಾಹ, ಅಂಕುರ ದರ್ಪಣ, ಅಷ್ಟವದನ ಸೇವೆ, ರಕ್ಷಾಬಂಧನ ಹಾಗೂ ಪಲ್ಲಕ್ಕಿ ಉತ್ಸವ, ಮಂಗಳವಾರ ದೇವರ ಕಳಸ ಸ್ಥಾಪನೆ, ಧ್ವಜಾರೋಹಣ, ನವಗ್ರಹ ಸ್ಥಾಪನೆ, ಗಜೇಂದ್ರೋತ್ಸವ ನಡೆಸಲಾಯಿತು.

    ಬುಧವಾರ ರಥದ ಪೂಜೆ, ರಥಾಂಗಹೋಮ, ಬಲಿದಾನ ಹಾಗೂ ಮಧ್ಯಾಹ್ನ 12 ಗಂಟೆಗೆ ಬ್ರಹ್ಮರಥೋತ್ಸವ ನಡೆಸಲಾಯಿತು.

    ಭಕ್ತರಿಗೆ ಅನ್ನದಾಸೋಹ, ಪಾನಕ, ಕೋಸಂಬರಿ ಪ್ರಸಾದ ಏರ್ಪಡಿಸಲಾಗಿತ್ತು. ಉತ್ಸವದಲ್ಲಿ ತಹಸೀಲ್ದಾರ್ ಪಿ.ಎಸ್. ಎರ‌್ರಿಸ್ವಾಮಿ ಭಾಗವಹಿಸಿದ್ದರು. ದಾವಣಗೆರೆ, ಶಿವಮೊಗ್ಗ, ಭದ್ರಾವತಿ, ಅಜ್ಜಂಪುರ, ಬೀರೂರು, ಚಿತ್ರದುರ್ಗ ವಿವಿಧ ಭಾಗಗಳ ಭಕ್ತರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts