More

    ಅನಧಿಕೃತ ಕೋಳಿ ಅಂಗಡಿಗೆ ಬೀಗ

    ಉಡುಪಿ: ತೆಂಕನಿಡಿಯೂರು ಗ್ರಾಪಂ ವ್ಯಾಪ್ತಿಯ ದಲಿತರ ಮೀಸಲು ಕ್ಷೇತ್ರದ ಶ್ರೀನಗರದಲ್ಲಿ ಅನಧಿಕೃತವಾಗಿ ನಡೆಸುತ್ತಿದ್ದ ಚಿಕನ್ ಸ್ಟಾಲ್ ಅನ್ನು ಪಿಡಿಒ ಸೀಜ್ ಮಾಡಿದ್ದಾರೆ.

    ಪಂಚಾಯಿತಿಯ ಸದಸ್ಯೆಯೊಬ್ಬರು ಯಾವುದೇ ಅನುಮತಿ ಪಡೆಯದೆ ಕಟ್ಟಡ ಕಟ್ಟಿ ಕೋಳಿ ವ್ಯಾಪಾರ ನಡೆಸುತ್ತಿದ್ದರು. ಇದರಿಂದ ಶ್ರೀನಗರದ ಕಾಲನಿ ಹಾಗೂ ಸುತ್ತಮುತ್ತಲಿನ ಪರಿಸರದಲ್ಲಿ ದುರ್ವಾಸನೆ ಉಂಟಾಗುತ್ತಿತ್ತು. ಹೀಗಾಗಿ ಊರಿನಲ್ಲಿರುವ ಅನಧಿಕೃತ ಕೋಳಿ ಅಂಗಡಿ ತೆರವು ಮಾಡುವಂತೆ ಶ್ರೀನಗರದ ನಿವಾಸಿಗಳು ಹಾಗೂ ಈ ವಾರ್ಡ್‌ನ ಮೀಸಲು ಕ್ಷೇತ್ರ ಗ್ರಾಪಂ ಸದಸ್ಯ ರವಿ ಲಕ್ಷ್ಮೀನಗರ ಹಾಗೂ ಅಂಬೇಡ್ಕರ್ ಯುವಸೇನೆ ಉಡುಪಿ ಜಿಲ್ಲಾ ಶಾಖೆ ಗ್ರಾಪಂಗೆ ಮನವಿ ಮಾಡಿದ್ದರು. ಆದರೂ ಯಾವುದೇ ಕ್ರಮ ಆಗಿರಲಿಲ್ಲ.

    ಪ್ರತಿಭಟನೆ

    ಜ. 20ರಂದು ತೆಂಕನಿಡಿಯೂರು ಗ್ರಾಪಂ ಕಚೇರಿ ಎದುರು ಜಿಲ್ಲಾ ಅಂಬೇಡ್ಕರ್ ಯುವಸೇನೆ ಧರಣಿ ನಡಿಸಿತ್ತು. ಅಲ್ಲದೆ, ಇತ್ತೀಚೆಗೆ ಉಡುಪಿಗೆ ಆಗಮಿಸಿದ್ದ ಉಪಲೋಕಾಯುಕ್ತ ಫಣೀಂದ್ರ ಅವರಿಗೂ ಅನಧಿಕೃತ ಕೋಳಿ ಅಂಗಡಿಯ ವಿರುದ್ಧ ಕ್ರಮ ಜರುಗಿಸದ ಪಿಡಿಒ ವಿರುದ್ಧ ದೂರು ದಾಖಲಿಸಿತ್ತು. ಈ ನಡುವೆ ಜ.17ರಂದು ನಡೆದ ಪಂಚಾಯಿತಿ ಸಾವಾನ್ಯ ಸಭೆಯಲ್ಲಿ ದಾಖಲೆ ಸರಿಪಡಿಸಿಕೊಳ್ಳಲು ಮೂರು ತಿಂಗಳ ಕಾಲಾವಕಾಶ ನೀಡಲು ನಿರ್ಣಯಿಸಿದ್ದರು. ಕಾನೂನು ಬಾಹಿರ ನಿರ್ಣಯಕೈಗೊಂಡ ಪಂಚಾಯಿತಿ ಸದಸ್ಯರ ವಿರುದ್ಧ ಹೈಕೋರ್ಟ್‌ನಲ್ಲಿ ರಿಟ್ ಸಲ್ಲಿಸಲು ಮುಂದಾಗಿದ್ದರು. ಇದೀಗ ತೆಂಕನಿಡಿಯೂರು ಪಿಡಿಒ ಅನಧಿಕೃತ ಕೋಳಿ ಅಂಗಡಿಗೆ ಬೀಗ ಜಡಿದಿದ್ದಾರೆ. ಇದು ಅಂಬೇಡ್ಕರ್ ಯುವಸೇನೆಯ ಹೋರಾಟಕ್ಕೆ ಸಂದ ಗೆಲುವು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts