

ಬೆಳ್ಮಣ್ : ಅಂಚೆ ಕಚೇರಿಯಲ್ಲಿ ಕಳ್ಳತನಕ್ಕೆ ವಿಫಲ ಯತ್ನ ನಡೆದ ಘಟನೆ ಕಾರ್ಕಳದ ಮುಂಡ್ಕೂರು ಅಂಚೆ ಕಚೇರಿಿಯಲ್ಲಿಿ ನಡೆದಿದೆ.
ಮುಂಡ್ಕೂರಿನ ಅಂಚೆ ಕಚೇರಿಗೆ ನುಗ್ಗಿದ ಕಳ್ಳರು ಸಿಸಿ ಕ್ಯಾಮರದ ಡಿವಿಆರ್ ತೆಗೆದು ಕಳ್ಳತನಕ್ಕೆ ಯತ್ನ ನಡೆಸಿ ವಿಫಲರಾಗಿ ಬರೀ ಕೈಯಲ್ಲಿ ವಾಪಸ್ಸಾಗಿದ್ದಾರೆ.
ಯಾವುದೇ ನಗದು ವಸ್ತುಗಳು ಕಳೆದು ಹೋಗಿಲ್ಲ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಪೊಲೀಸರು ವಿವಿಧ ಕೋನಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.