

ಜೈಪುರ: ಟೈಲರ್ ಕನ್ಹಯ್ಯ ಲಾಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಪುರದ ನ್ಯಾಯಾಲಯ ಬಂಧಿತ ಎಲ್ಲಾ ಆರೋಪಿಗಳಿಗೆ 10 ದಿನಗಳ ಕಾಲ ಎನ್ಐಎ ವಶಕ್ಕೆ ನೀಡಲಾಗಿದೆ.
ಪ್ರಕರಣ ಸಂಬಂಧ ನಾಲ್ವರನ್ನು ಬಂಧಿಸಲಾಗಿದ್ದು, ರಾಷ್ಟ್ರೀಯ ತನಿಖಾ ದಳ ಹಾಗೂ ಭಯೋತ್ಪಾದನ ನಿಗ್ರಹ ಪಡೆಯಿಂದ ಇನ್ನೂ 10 ದಿನಗಳ ಕಾಲ ಆರೋಪಿಗಳ ವಿಚಾರಣೆ ನಡೆಯಲಿದೆ.ಆರೋಪಿಗಳಾದ ರಿಯಾಜ್ ಅಖ್ತೇರಿ, ಘೌಸ್ ಮೊಹಮ್ಮದ್, ಆಸಿಫ್ ಮತ್ತು ಮೊಹಸೀನ್ ಈ ನಾಲ್ವರನ್ನು ಹತ್ಯೆ ಪ್ರಕರಣದಲ್ಲಿ ಬಂಧಿಸಲಾಗಿತ್ತು.
ಸದ್ಯ ಪ್ರಕರಣದಲ್ಲಿ ಎನ್ಐಎ ಸಾಕ್ಷ್ಯಗಳನ್ನು ಕಲೆ ಹಾಕುತ್ತಿದ್ದು, ತನಿಖೆ ವೇಳೆ ಬಂಧಿತರಿಂದ ಮತ್ತಷ್ಟು ಸ್ಫೋಟಕ ಮಾಹಿತಿಗಳು ಹೊರಬೀಳುವ ಸಾಧ್ಯತೆ ಇದೆ ಎನ್ನಲಾಗಿದೆ.
ನೂಪುರ್ ಶರ್ಮಾ ಹೇಳಿಕೆ ಬೆಂಬಲಿಸಿದ್ದ ಉದಯಪುರದ ಟೈಲರ್ ಕನ್ಹಯ್ಯ ಲಾಲ್ ಅವರನ್ನು ಜೂನ್ 28 ರಂದು ನಡುರಸ್ತೆಯಲ್ಲಿ ಕತ್ತು ಸೀಳಿ ಭೀಕರ ಹತ್ಯೆ ಮಾಡಲಾಗಿತ್ತು. ಸದ್ಯ ಆರೋಪಿಗಳ ಬಂಧನವಾಗಿದ್ದು, ತನಿಖೆ ಚುರುಕುಗೊಂಡಿದೆ. (ಏಜೆನ್ಸೀಸ್)