More

    ಭಾರತ ಕಿರಿಯರ ತಂಡ ಶುಭಾರಂಭ: ಆಫ್ಘನ್ ಎದುರು 6 ವಿಕೆಟ್‌ಗಳ ಗೆಲುವು

    ಜೊಹಾನ್ಸ್‌ಬರ್ಗ್: ಆರಂಭಿಕ ಆದರ್ಶ್ ಸಿಂಗ್ (112 *ರನ್, 108 ಎಸೆತ, 15 ಬೌಂಡರಿ, 2 ಸಿಕ್ಸರ್) ಶತಕ ಹಾಗೂ ಸೌಮಿ ಪಾಂಡೆ (29ಕ್ಕೆ 6) ಮಾರಕ ಬೌಲಿಂಗ್ ದಾಳಿಯ ನೆರವಿನಿಂದ ಭಾರತ ತಂಡ 19 ವಯೋಮಿತಿಯ ತ್ರಿಕೋನ ಏಕದಿನ ಸರಣಿಯಲ್ಲಿ ಅ್ಘಾನಿಸ್ತಾನ ಎದುರು 6 ವಿಕೆಟ್‌ಗಳಿಂದ ಭರ್ಜರಿ ಗೆಲುವು ದಾಖಲಿಸಿದೆ.

    ಟಾಸ್ ಸೋತು ಮೊದಲು ಬ್ಯಾಟಿಂಗ್ ಇಳಿದ ಆ್ಘನ್, 48.2 ಓವರ್‌ಗಳಲ್ಲಿ 198 ರನ್‌ಗಳಿಗೆ ಆಲೌಟ್ ಆಯಿತು. ಪ್ರತಿಯಾಗಿ ಭಾರತ 36.4 ಓವರ್‌ಗಳಲ್ಲಿ 4 ವಿಕೆಟ್‌ಗೆ 202 ರನ್‌ಗಳಿಸಿ ಸುಲಭ ಗೆಲುವು ದಾಖಲಿಸಿತು. ಜ.2ರಂದು ಆತಿಥೇಯ ದಕ್ಷಿಣ ಆಫ್ರಿಕಾ ಎದುರು ಭಾರತ ತನ್ನ ಮುಂದಿನ ಪಂದ್ಯ ಆಡಲಿದೆ.

    ಅ್ಘನ್: 48.2 ಓವರ್‌ಗಳಲ್ಲಿ 198 (ಹಸನ್ 50, ಸೋಹೈಲ್ 71, ಜಮ್‌ಶೀದ್ 26, ನಾಸೀರ್ 25, ಸೌಮಿ ಪಾಂಡೆ 29ಕ್ಕೆ6, ರಾಜ್ ಲಿಂಬಾಲಿ 39ಕ್ಕೆ2).
    ಭಾರತ: 36.4 ಓವರ್‌ಗಳಲ್ಲಿ 4 ವಿಕೆಟ್‌ಗೆ 202 (ಆದರ್ಶ್ 112*, ಆರ್ಶಿನ್ 20, ಮುಶೀರ್ 39*, ಘಝನ್ ರ್ 41ಕ್ಕೆ2).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts