ಕುಡ್ಲೆ ಬೀಚ್‌ನಲ್ಲಿ ಇಬ್ಬರ ರಕ್ಷಣೆ

15 GKN 2
Published on

ಗೋಕರ್ಣ: ಇಲ್ಲಿನ ಕುಡ್ಲೆ ಸಮುದ್ರ ತೀರದಲ್ಲಿ ಭಾನುವಾರ ಈಜಲು ಇಳಿದು ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರನ್ನು ಕರ್ತವ್ಯದಲ್ಲಿದ್ದ ಜೀವ ರಕ್ಷಕ ಸಿಬ್ಬಂದಿ ರಕ್ಷಿಸಿ ಮೇಲಕ್ಕೆ ತಂದರು. ಬೆಂಗಳೂರಿನಲ್ಲಿ ಖಾಸಗಿ ಉದ್ಯೋಗದಲ್ಲಿರುವ ಕೇರಳ ಮೂಲದ ರಾಜಿತ್ ಸಿ.ಪಿ.(26) ಮತ್ತು ರಾಣೆಬೆನ್ನೂರಿನ ಪ್ರದೀಪ ಮಾಧವ (27) ಅಲೆಗಳ ಹೊಡೆತಕ್ಕೆ ಸಿಲುಕಿ ತೀರಕ್ಕೆ ಬರಲಾಗದೆ ಸಹಾಯಕ್ಕಾಗಿ ಕೂಗಿಕೊಂಡಾಗ ಸಿಬ್ಬಂದಿ ನಾಗೇಂದ್ರ ಕುರ್ಲೆ, ಮಂಜುನಾಥ ಹೊಸ್ಕಟ್ಟ, ರಘುವೀರ ನಾಯ್ಕ ರಕ್ಷಿಸಿದ್ದಾರೆ. ಕರಾವಳಿ ಪಡೆ ಪೊಲೀಸ್ ವಿಷ್ಣು ಕುರ್ಲೆ, ಎಂ.ಜಿ. ಅಡ್ವೆಂಚರ್ಸ್‌ನ ಆದಿತ್ಯ ಅಂಕೋಲ, ಲೋಹಿತ್ ಮತ್ತು ಸೂರಜ್ ರಕ್ಷಣಾ ಕಾರ್ಯಾಚರಣೆಗೆ ಸಹಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net