

ಕ್ಯಾಲಿಫೋರ್ನಿಯಾ: ಸಮುದ್ರ ತೀರದಲ್ಲಿ ಮೋಜು ಮಾಡಲು ಬಂದಿದ್ದ ಜನರನ್ನು ಅಲ್ಲಿ ಇರಲು ಬಿಡದೇ ಸೀ ಲಯನ್ಗಳು ಓಡಿಸುತ್ತಿರುವ ಅಚ್ಚರಿ ವಿಡಿಯೋ ಭಾರೀ ಸದ್ದು ಮಾಡುತ್ತಿದೆ.
ಕ್ಯಾಲಿಫೋರ್ನಿಯಾದ ಸ್ಯಾನ್ ಡಿಯಾಗೋ ಬೀಚ್ನಲ್ಲಿ ಈ ಘಟನೆ ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಬೀಚ್ನ ಮರಳಿನಲ್ಲಿ ಕುಳಿತಿದ್ದ ಜನರ ಕಡೆ ಧಾವಿಸಿ ಬಂದ ಸೀ ಲಯನ್ಗಳಿಂದ ಬೆದರಿದ ಜನ ಓಡುತ್ತಿರುವ ದೃಶ್ಯವನ್ನು ಪ್ರವಾಸಿಗರು ಸೆರೆ ಹಿಡಿದಿದ್ದಾರೆ.
ಸದ್ಯ ಯಾರಿಗೂ ಗಾಯವಾಗಿಲ್ಲ. ಜನರನ್ನು ಸುರಕ್ಷಿತವಾಗಿ ಬೀಚ್ನಿಂದ ಹೊರ ಕರೆತರಲಾಗಿದ್ದು, ಸದ್ಯ ಜೀವ ರಕ್ಷಕರನ್ನು ನೇಮಕ ಮಾಡಲಾಗಿದೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.
ಸದ್ಯ ಪ್ರಪಂಚದ ವಿಶೇಷ ಜೀವಿಗಳೆಂದೇ ಸಮುದ್ರ ಸಿಂಹಗಳೆಂದು ಕರೆಯಲ್ಪಡುತ್ತವೆ. ಸಾಮಾನ್ಯವಾಗಿ ನಿಧಾನವಾಗಿ ಚಲಿಸುವ ಇವು ಈ ವಿಡಿಯೋದಲ್ಲಿ ಮನುಷ್ಯರ ಮೇಲೆ ಕೋಪಗೊಂಡು ವೇಗವಾಗಿ ಓಡುತ್ತಿರುವ ವಿಡಿಯೋ ಹಾಸ್ಯಾಸ್ಪದವಾಗಿದೆ.
ಸದ್ಯ ಈ ವಿಡಿಯೋವನ್ನು ಬ್ಯುಟೆಂಗೆಬೀಡೆನ್ ಎಂಬುವರು ತಮ್ಮ ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದು, ಈವರೆಗೆ 2.1ಮಿಲಿಯನ್ ಜನರು ವೀಕ್ಷಿಸಿದ್ದಾರೆ. 79,000 ಮಂದಿ ಲೈಕ್ ಮಾಡಿದ್ದು, 7,000 ಕ್ಕೂ ಅಧಿಕ ಮಂದಿ ಮರುಟ್ವೀಟ್ ಮಾಡಿದ್ದಾರೆ. (ಏಜೆನ್ಸೀಸ್)