ಅಪಘಾತದಿಂದ ಚೇತರಿಸಿಕೊಂಡ ಬಳಿಕ Rishabh Pant ಮಾಡಿದ್ದೇನು...? ಮೆಚ್ಚುಗೆಗೆ ಪಾತ್ರವಾಗುತ್ತಿದೆ ಕ್ರಿಕೆಟಿಗನ ಈ ಕಾರ್ಯ

Rishabh Pant
Published on

ನವದೆಹಲಿ: 2022ರ ವರ್ಷಾಂತ್ಯದಲ್ಲಿ ದೆಹಲಿ-ಡೆಹ್ರಾಡೂನ್‌ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಕ್ರಿಕೆಟಿಗ ರಿಷಭ್​ ಪಂತ್​ (Rishabh Pant) ಗುಣಮುಖರಾಗಿ ಕ್ರಿಕೆಟ್​ಗೆ ಮರಳಿದ್ದು, ತಮ್ಮ ಬಿರುಸಿನ ಬ್ಯಾಟಿಂಗ್​​ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ.

ಹೊಸ ವರ್ಷಕ್ಕೆ ತಾಯಿಗೆ ಸರ್ಪ್ರೈಸ್​ ಕೊಡಲೆಂದು ತಮ್ಮ ತವರೂರಿಗೆ ಹೋಗುವಾಗ ಪಂತ್​ ಚಲಾಯಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡಿತ್ತು. ಇದನ್ನು ಗಮನಿಸಿದ ಉತ್ತರಾಖಂಡ ಸಾರಿಗೆ ಸಂಸ್ಥೆಯ ನೌಕರ ಹಾಗೂ ಸ್ಥಳೀಯರು ಪಂತ್​ರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದರು. ಇದೀಗ ಪಂತ್​ ಮಾಡಿರುವ ಈ ಒಂದು ಕೆಲಸ ಎಲ್ಲರ ಗಮನ ಸೆಳೆಯುತ್ತಿದ್ದು, ಕ್ರಿಕೆಟಿಗನ (Rishabh Pant) ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಅಪಘಾತದ ವೇಳೆ ತಮ್ಮನ್ನು ರಕ್ಷಿಸಿದವರಿಗೆ ಧನ್ಯವಾದ ಅರ್ಪಿಸಿರುವ ರಿಷಭ್ (Rishabh Pant)​ ಅವರಿಗೆ ವಿಶೇಷ ಉಡುಗೊರೆಯನ್ನು ನೀಡಿ ಸಹಾಯ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ರಿಷಭ್​ ಪಂತ್​ ಅಪಘಾತಕ್ಕೀಡಾಗಿದ್ದ ವೇಳೆ ಅವರನ್ನು ರಕ್ಷಿಸಿದ್ದ ಇಬ್ಬರು ಯುವಕರಿಗೆ ಕ್ರಿಕೆಟಿಗ ಹೊಸ ಹೋಂಡಾ ಆ್ಯಕ್ಟಿವಾ ಸ್ಕೂಟರ್​ ಗಿಫ್ಟ್​ ನೀಡಿದ್ದು, ರಿಷಭ್​ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಪತ್ರಕರ್ತ ಭರತ್​ ಸುಂದರೇಶನ್​ ಎಂಬುವವರು ರಿಷಭ್​ ಪಂತ್​ ಯುವಕರಾದ ರಜತ್​ ಹಾಗೂ ನಿಶುಗೆ ಅಪಘಾತದಿಂದ ಚೇತರಿಸಿಕೊಂಡ ಬಳಿಕ ಹೋಂಡಾ ಆ್ಯಕ್ಟಿವಾ ಸ್ಕೂಟರ್​ ಗಿಫ್ಟ್​ ನೀಡಿರುವ ವಿಚಾರವನ್ನು ರಿವೀಲ್​ ಮಾಡಿದ್ದು, ಯುವರಕನ್ನು ಮಾತನಾಡಿಸಿದ್ಧಾರೆ. ಈ ವಿಡಿಯೋ ವೈರಲ್​ ಆಗಿದ್ದು, ರಿಷಭ್​ (Rishabh Pant) ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net