ಗಾಂಜಾ ಕಳ್ಳಸಾಗಣೆ: ಎರ್ನಾಕುಲಂ ಎಕ್ಸ್‌ಪ್ರೆಸ್ ರೈಲಿನಲ್ಲಿ 16 ಕೆಜಿ ಗಾಂಜಾದೊಂದಿಗೆ ಸಿಕ್ಕಿಬಿದ್ದ ಇಬ್ಬರು ಯುವಕರು

train
Published on

ಚೆನ್ನೈ: ತಮಿಳುನಾಡಿನ ರಾಣಿಪೇಟ್ ಬಳಿಯ ಅರಕ್ಕೋಣಂ ರೈಲು ನಿಲ್ದಾಣದಲ್ಲಿ ಎರ್ನಾಕುಲಂ ಎಕ್ಸ್‌ಪ್ರೆಸ್ ರೈಲಿನಲ್ಲಿ ಪೊಲೀಸರು ಏಕಾಏಕಿ ತಪಾಸಣೆ ನಡೆಸಿದಾಗ 16 ಕೆಜಿ ಗಾಂಜಾದೊಂದಿಗೆ ಇಬ್ಬರು ಸಿಕ್ಕಿಬಿದ್ದಾರೆ.

ಖಚಿತ ಮಾಹಿತಿ ಆಧರಿಸಿ ದಾಳಿ ಮಾಡಿದ ಪೊಲೀಸರು ರೈಲಿನ ಬೋಗಿಗಳಲ್ಲಿ ಶೋಧಾ ಕಾರ್ಯ ಮಾಡಿದ್ದಾರೆ. ಈ ವೇಳೆ ರೈಲ್ಲಿನಲ್ಲಿದ್ದ ಇಬ್ಬರು ಯುವಕರು ಪೊಲೀಸರನ್ನು ಕಂಡು ಗಾಬರಿಯಾಗಿದ್ದಾರೆ. ಇದರಿಂದ ಅನುಮಾನಗೊಂಡ ಪೊಲೀಸರು ಅವರ ಬ್ಯಾಗ್‌ಗಳನ್ನು ಪರಿಶೀಲಿಸಿ, ವಿಚಾರಣೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಇವರ ಬಳಿ ಸುಮಾರು ಎಂಟು ಪ್ಯಾಕೆಟ್​ಗಳಲ್ಲಿ ಒಟ್ಟು 16 ಕೆಜಿ ಗಾಂಜಾ ಪತ್ತೆಯಾಗಿದೆ.

ಬಂಧಿತರು ಒಡಿಶಾದ ಎಸ್. ಕಾಂಚಿಪುರಂನ ಅರ್ಜುನ್ ಮಲಿಕ್ (24) ವಿ. ಮಣಿಕಂದನ್ (37) ಎಂದು ಗುರುತಿಸಲಾಗಿದೆ. ಅವರ ವಿರುದ್ಧ ಪ್ರಕರಣ ದಾಖಲಾಗಿದೆ. ಇವರಿಬ್ಬರೂ ಬಿಹಾರ ಮತ್ತು ಜಾರ್ಖಂಡ್ ರಾಜ್ಯಗಳಿಂದ ಗಾಂಜಾ ಕಳ್ಳಸಾಗಣೆ ಮಾಡುತ್ತಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಬಂಧಿತರು ಕಡಿಮೆ ದರದಲ್ಲಿ ಗಾಂಜಾವನ್ನು ಖರೀದಿಸಿ ನಂತರ ಅದನ್ನು ತಮಿಳುನಾಡಿನ ಕಾಂಚೀಪುರಂ, ವೆಲ್ಲೂರು, ಅರಕ್ಕೋಣಂ ಮತ್ತು ತಿರುವಣ್ಣಾಮಲೈ ಮುಂತಾದ ಪಟ್ಟಣಗಳಲ್ಲಿ ಸ್ಥಳೀಯ ವಿತರಕರಿಗೆ ಹೆಚ್ಚಿನ ದರದಲ್ಲಿ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ವಿಚಾರಣೆ ವೇಳೆ ತಿಳುದು ಬಂದಿದೆ.

ಇನ್ನು ಮುಂದೆ ರೈಲುಗಳನ್ನು ಸಹ ನಿಯಮಿತವಾಗಿ ತಪಾಸಣೆ ಮಾಡಲಾಗುವುದು ಎಂದು ನಿಷೇಧಾಜ್ಞೆ ಜಾರಿ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ. ಇದಕ್ಕಾಗಿ ಪೊಲೀಸ್ ಶ್ವಾನಗಳಿಗೂ ವಿಶೇಷ ತರಬೇತಿ ನೀಡಲಾಗುತ್ತದೆ ಎಂದಿದ್ದಾರೆ. ಇದಲ್ಲದೇ ರೈಲಿನಲ್ಲಿ ಗಾಂಜಾ ಸಾಗಾಟ ಮಾಡಿದರೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿರುವುದು ವರದಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net