

ಕಾಸರಗೋಡು: ಕುಂಬಳೆ ಶಿರಿಯಾ ಅಳಿವೆ ಬಾಗಿಲಿಂದ ಅನಧಿಕೃತವಾಗಿ ಮರಳು ಸಾಗಾಟ ನಡೆಸುತ್ತಿದ್ದ ಇಬ್ಬರನ್ನು ಕುಂಬಳೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರಿಕ್ಕಾಡಿ ನಿವಾಸಿ ಮನ್ಸೂರ್ ಆಲಿ, ಪೆರುವಾಡ್ ಕಡಪ್ಪುರ ನಿವಾಸಿ ಮಹಮ್ಮದ್ ಶಾಫಿ ಬಂಧಿತರು. ಅವರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಅಳಿವೆ ಬಾಗಿಲಲ್ಲಿ ದೋಣಿ ಬಳಸಿ ವ್ಯಾಪಕವಾಗಿ ಮರಳು ಸಂಗ್ರಹಿಸಿ ವಾಹನದಲ್ಲಿ ಸಾಗಿಸುತ್ತಿದ್ದರು. ಕಾಸರಗೋಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ವಿ.ವಿಜಯಭರತ್ ರೆಡ್ಡಿ ನಿರ್ದೇಶನದ ಪ್ರಕಾರ ಎಎಸ್‌ಪಿ ಡಾ.ನಂದಗೋಪಾಲ್ ಮೇಲ್ನೋಟದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.