ನಿಮ್ಮ ಟ್ವಿಟರ್​ ಖಾತೆ ಸಸ್ಪೆಂಡ್​ ಆಗಿದ್ದಲ್ಲಿ ಈಗ ಬಂದಿದೆ ಹೊಸ ಪರಿಹಾರ!

Twitter
Published on

ನವದೆಹಲಿ: ಎಲಾನ್​ ಮಸ್ಕ್​ ಟ್ವಿಟರ್​ ಖರೀದಿಸುವ ಮುನ್ನ ನಿಮ್ಮ ಖಾತೆ ಸಸ್ಪೆಂಡ್​ ಆಗಿತ್ತಾ? ಹಾಗಾದರೆ ಈಗ ನೀವು, ಸಸ್ಪೆಂಡ್​ ಆಗಿರುವ ಬಗ್ಗೆ ಮೇಲ್ಮನವಿ ಸಲ್ಲಿಸಿ ಖಾತೆಯನ್ನು ಮರಳಿ ಪಡೆಯಬಹುದು.

ಇನ್ನು ಮುಂದೆ ಟ್ವಿಟರ್​ ಬಳಕೆದಾರರು ಖಾತೆ ಸಸ್ಪೆಂಡ್​ ಆದಲ್ಲಿ ಮೇಲ್ಮನವಿ ಸಲ್ಲಿಸಲು ಸಾಧ್ಯವಾಗಲಿದ್ದು ಸಾಮಾಜಿಕ ಮಾಧ್ಯಮ ಮರುಸ್ಥಾಪನೆಯ ಹೊಸ ಮಾನದಂಡಗಳ ಅಡಿಯಲ್ಲಿ ಇದು ಫೆಬ್ರವರಿ 1 ರಿಂದ ಪ್ರಾರಂಭವಾಗುತ್ತದೆ ಎಂದು ಟ್ವಿಟರ್​ ಶುಕ್ರವಾರ ತಿಳಿಸಿದೆ.

ಅಕ್ಟೋಬರ್‌ನಲ್ಲಿ ಎಲೋನ್ ಮಸ್ಕ್​ ಟ್ವಿಟರ್​ ಖರೀದಿಸಿದ ನಂತರ ಅನುಸರಿಸಲಾಗುತ್ತಿರುವ ಹೊಸ ಮಾನದಂಡದ ಅಡಿಯಲ್ಲಿ, ಟ್ವಿಟರ್ ಖಾತೆಗಳನ್ನು ತೀವ್ರ ಅಥವಾ ಪ್ಲಾಟ್‌ಫಾರ್ಮ್‌ನ ನೀತಿಗಳ ಪುನರಾವರ್ತಿತ ಉಲ್ಲಂಘನೆಗಳಿಗಾಗಿ ಮಾತ್ರ ಅಮಾನತುಗೊಳಿಸಲಾಗುತ್ತದೆ.

ಕಾನೂನುಬಾಹಿರ ವಿಷಯ ಅಥವಾ ಚಟುವಟಿಕೆಯಲ್ಲಿ ತೊಡಗುವುದು, ಹಿಂಸೆ ಅಥವಾ ಹಾನಿಯನ್ನು ಪ್ರಚೋದಿಸುವುದು ಅಥವಾ ಬೆದರಿಕೆ ಹಾಕುವುದು ಮತ್ತು ಇತರ ಬಳಕೆದಾರರನ್ನು ಗುರಿಪಡಿಸಿ ಕಿರುಕುಳ ನೀಡುವುದು, ಹೀಗೆ ತೀವ್ರವಾಗಿ ನೀತಿ ಉಲ್ಲಂಘನೆ ಮಾಡುವುದನ್ನು ಒಳಗೊಂಡಿರುತ್ತದೆ.

ಟ್ವಿಟರ್​ ಖಾತೆಯನ್ನು ಅಮಾನತುಗೊಳಿಸುವುದಕ್ಕೆ ಹೋಲಿಸಿದರೆ, ತನ್ನ ನೀತಿಗಳನ್ನು ಉಲ್ಲಂಘಿಸುವ ಟ್ರೇಟ್‌ಗಳ ವ್ಯಾಪ್ತಿಯನ್ನು ಸೀಮಿತಗೊಳಿಸುವುದು ಅಥವಾ ಖಾತೆಯನ್ನು ಬಳಸುವುದನ್ನು ಮುಂದುವರಿಸುವ ಮೊದಲು ಟೀಟ್‌ಗಳನ್ನು ತೆಗೆದುಹಾಕಲು ಬಳಕೆದಾರರನ್ನು ಕೇಳುವಂತಹ ಕಡಿಮೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು Twitter ಹೇಳಿದೆ.

ಡಿಸೆಂಬರ್‌ನಲ್ಲಿ, ಮಸ್ಕ್​ನ ವಿಮಾನ ಪ್ರಯಾಣದ ಮಾಹಿತಿ ಬಗ್ಗೆ ಸಾರ್ವಜನಿಕ ಡೇಟಾವನ್ನು ಪ್ರಕಟಿಸುವ ವಿವಾದದ ಮೇಲೆ ಹಲವಾರು ಪತ್ರಕರ್ತರ ಖಾತೆಗಳನ್ನು ಅಮಾನತುಗೊಳಿಸಿದ್ದಕ್ಕಾಗಿ ಮಸ್ಕ್​ ಟೀಕೆಗೆ ಗುರಿಯಾದರು. ನಂತರ ಅವರು ಖಾತೆಗಳನ್ನು ರಿಸ್ಟೋರ್​ ಮಾಡಿದ್ದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net