ಪಬ್​ಜಿ ಆಡುವಾಗ ಅರಳಿದ ಪ್ರೀತಿ: ಪ್ರಿಯಕರನನ್ನು ಹುಡುಕಿ ಹೊರಟ ವಿವಾಹಿತೆಗೆ ಕಾದಿತ್ತು ಬಿಗ್​ ಶಾಕ್​!

PUBG
Published on

ಲಖನೌ: ಪಬ್​ಜಿ ಆಡುವಾಗ ದ್ವಿತೀಯ ಪಿಯು ವಿದ್ಯಾರ್ಥಿಯ ಪ್ರೀತಿಯ ಬಲೆಯಲ್ಲಿ ಬಿದ್ದ ವಿವಾಹಿತೆ, ಆತನನ್ನು ಹುಡುಕಿಕೊಂಡು ಹಿಮಾಚಲ ಪ್ರದೇಶದಿಂದ ಉತ್ತರ ಪ್ರದೇಶದ ವಾರಣಾಸಿಗೆ ತೆರಳಿದಾಗ ಆಕೆಗೆ ಅಕ್ಷರಶಃ ಆಘಾತವೊಂದು ಎದುರಾಗಿತ್ತು.

ಪಬ್​ಜಿ ಹುಚ್ಚು ಹಿಡಿಸಿಕೊಂಡಿದ್ದ ಮಹಿಳೆಗೆ ಪಬ್​​ಜಿಯಲ್ಲಿ ತನ್ನ ಸಹ ಆಟಗಾರ ವಾರಣಾಸಿ ಮೂಲದ ವ್ಯಕ್ತಿಯೊಬ್ಬನ ಪರಿಚಯವಾಗಿದೆ. ಇದಾದ ಬಳಿಕ ಇಬ್ಬರ ಪರಿಚಯ ಪ್ರೀತಿಗೆ ತಿರುಗಿ, ಪರಸ್ಪರ ಫೋನ್​ ನಂಬರ್​ ಸಹ ವಿನಿಮಯ ಮಾಡಿಕೊಂಡಿದ್ದಾರೆ. ಹೀಗೆ ಇಬ್ಬರ ನಡುವೆ ನಿರಂತರವಾಗಿ ಮಾತುಕತೆ ನಡೆಯುತ್ತಾ ಪ್ರೀತಿ ಗಟ್ಟಿಯಾಗುತ್ತಾ ಸಾಗಿದಾಗ ಪಬ್​ಬಿ ಪ್ರಿಯಕರನನ್ನು ಭೇಟಿ ಮಾಡಲೇಬೇಕು ಅಂದುಕೊಂಡ ಮಹಿಳೆ ಹಿಮಾಚಲ ಪ್ರದೇಶದ ಕಂಗ್ರಾದಿಂದ ನೇರವಾಗಿ ಉತ್ತರ ಪ್ರದೇಶದ ವಾರಣಾಸಿಗೆ ತೆರಳಿದ್ದಾಳೆ.

ಇತ್ತ ವಿವಾಹಿತೆ ದಿಢೀರನೇ ಕಾಣೆಯಾಗಿದ್ದನ್ನು ನೋಡಿ ಆಕೆಯ ಪಾಲಕರು ನಾಪತ್ತೆ ಪ್ರಕರಣ ದಾಖಲಿಸಿದ್ದಾರೆ. ಇನ್ನೊಂದೆಡೆ ವಾರಣಾಸಿಗೆ ಬಂದಿಳಿದ ಮಹಿಳೆ ತಾನು ಈವರೆಗೂ ಪ್ರೀತಿಸುತ್ತಿದ್ದ ವ್ಯಕ್ತಿಯನ್ನು ನೋಡಿ ಒಂದು ಕ್ಷಣ ಆಘಾತಕ್ಕೀಡಾಗಿದಳು. ಏಕೆಂದರೆ ತಾನು ಪ್ರೀತಿಸುತ್ತಿದ್ದ ಆ ವ್ಯಕ್ತಿ ಕೇವಲ ದ್ವಿತೀಯ ಪಿಯುಸಿ ವಿದ್ಯಾರ್ಥಿಯಾಗಿದ್ದ. ಇದರಿಂದ ನಿರಾಸೆಗೊಂಡ ಮಹಿಳೆ ವಾಪಸ್ಸು ತನ್ನ ಪಾಲಕರಿಗೆ ಕರೆ ಮಾಡಿ ತನ್ನನ್ನು ಕರೆದುಕೊಂಡು ಹೋಗುವಂತೆ ಹೇಳಿದಳು.

ಇದಕ್ಕೂ ಮುನ್ನ ದಿಢೀರ್​ ನಾಪತ್ತೆಯಾಗಿ ಮಹಿಳೆಗಾಗಿ ಸಾಕಷ್ಟು ಹುಡುಕಾಟ ನಡೆಸಿ ಚಿಂತಕ್ರಾಂತರಾಗಿದ್ದವರಿಗೆ ಸ್ವತಃ ಮಹಿಳೆಯೇ ಕರೆ ಮಾಡಿದ್ದ ಜೀವ ಮರಳಿ ಬಂದಂತಾಯಿತು. ಕೊನೆಯಲ್ಲಿ ವಾರಣಾಸಿ ಪೊಲೀಸರಿಗೆ ಮಾಹಿತಿ ನೀಡಲಾಯಿತು ಮತ್ತು ಆಕೆಯನ್ನು ಮರಳಿ ಹಿಮಾಚಲ ಪ್ರದೇಶಕ್ಕೆ ಸೇರಿಸಲಾಯಿತು.

ಪಬ್​ಜಿ ಕೇವಲ ಗೇಮ್​ ಅಷ್ಟೇ. ಅದೇ ಜೀವನವಲ್ಲ. ಹೀಗಾಗಿ ಆಟವನ್ನು ಆಟದ ರೀತಿ ಆಡಬೇಕೆ ಹೊರತು ಅದನ್ನೇ ಚಟವಾಗಿಸಿಕೊಂಡರೆ ಏನೆಲ್ಲಾ ಅನಾಹುತಗಳು ಸಂಭವಿಸುತ್ತವೆ ಎಂಬುದಕ್ಕೆ ಈ ಒಂದು ಘಟನೆಯು ಸಹ ತಾಜಾ ಉದಾಹರಣೆಯಾಗಿದೆ. (ಏಜೆನ್ಸೀಸ್​) ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net