_1787923112509.webp?w=480&auto=format%2Ccompress&fit=max)
_1787923112509.webp?w=480&auto=format%2Ccompress&fit=max)
ಪ್ರಮುಖ ಮುಖ್ಯಾಂಶಗಳು
‘ಹಿಂದಿ ಬಿಗ್‌ಬಾಸ್ ಸೀಸನ್ 16’ರ ಸ್ಪರ್ಧಿ, ಬಾಲಿವುಡ್ ನಟಿ ನಿಮ್ರಿತ್ ಕೌರ್ ಅಹ್ಲುವಾಲಿಯಾ ಅಭಿನಯ ಜತೆಗೆ ಫಿಟ್ನೆಸ್ ವಿಚಾರದಲ್ಲೂ ಗಮನಸೆಳೆಯುತ್ತಾರೆ. ಪ್ರತಿನಿತ್ಯ ಜಿಮ್‌ನಲ್ಲಿ ಬೆವರು ಹರಿಸುವ ಮೂಲಕ ಅವರು ಫಿಟ್‌ನೆಸ್ ಕಾಪಾಡಿಕೊಂಡಿದ್ದಾರೆ. ಆದರೆ, ಇತ್ತೀಚೆಗೆ ಜಿಮ್‌ನಲ್ಲಿ ಹರಸಾಹಸ ಮಾಡಲು ಹೋಗಿ ಅವರು ಪೆಟ್ಟು ಮಾಡಿಕೊಂಡಿರುವುದು ವರದಿಯಾಗಿದೆ. ಅತಿಯಾದ ಭಾರ ಎತ್ತಲು ಹೋಗಿರುವ ನಿಮ್ರಿತ್ ಕೌರ್ ಗಾಯಮಾಡಿಕೊಂಡಿದ್ದಾರೆ. ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆದಿರುವ ನಟಿ ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ. ತಮ್ಮ ಹರಸಾಹಸ ಬಗ್ಗೆ ಇತ್ತೀಚೆಗೆ ಜಾಲತಾಣದ ಮೂಲಕ ನಟಿ ಮಾಹಿತಿ ನೀಡಿದ್ದು, ‘ನಾವು ಎಷ್ಟೇ ಬಲಶಾಲಿಯಾಗಿದ್ದರೂ, ವ್ಯಾಯಾಮ ಮಾಡುವಾಗ ಯಾವುದನ್ನು ಹಗುರವಾಗಿ ಪರಿಗಣಿಸಬಾರದು. ಇತ್ತೀಚೆಗೆ ನಾನು ಜಿಮ್‌ನಲ್ಲಿ ಡೆಡ್ ಲಿಫ್ಸ್ ಮಾಡಲು ಹೋಗಿ, ಗಂಭೀರವಾಗಿ ಪೆಟ್ಟು ಮಾಡಿಕೊಂಡಿದ್ದೇನೆ. ಅದರಿಂದಾಗಿ ನಾನೀಗ ಶೂಟಿಂಗ್ ಬಿಟ್ಟು ಹಾಸಿಗೆ ಹಿಡಿಯುವಂತಾಗಿದೆ. ಸದಾ ಒಂದಿಲ್ಲೊಂದು ಕೆಲಸದಲ್ಲಿ ತೊಡಗಿಸಿಕೊಳ್ಳುವ ನನಗೆ ಇದೀಗ ಮನೆಯಲ್ಲಿ ಸುಮ್ಮನೇ ಕೂರಬೇಕೆಂದರೆ ಕಷ್ಟದ ಕೆಲಸವೇ. ಕೆಲವೊಮ್ಮೆ ನಮ್ಮ ದೇಹಕ್ಕೂ ವಿಶ್ರಾಂತಿ ನೀಡಬೇಕಾಗುತ್ತದೆ. ಸದ್ಯ ನಾನು ವಿರಾಮದಲ್ಲಿರುವುದಕ್ಕೆ ಯಾವುದೇ ಬೇಸರವಿಲ್ಲ. ಯಾಕೆಂದರೆ, ಮುಂದಿನ ಸವಾಲುಗಳನ್ನು ಸ್ವೀಕರಿಸಲು ಮಾನಸಿಕವಾಗಿ ಸಿದ್ಧವಾಗಲು ನನಗೆ ಇದು ಸಕಾಲ. ಆದಷ್ಟು ಬೇಗೆ ಚೇತರಿಸಿಕೊಂಡು ಕೆಲಸಕ್ಕೆ ಮರಳುತ್ತೇನೆ. ಈ ಸಂದರ್ಭದಲ್ಲಿ ನನ್ನ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದವರಿಗೆ ಧನ್ಯವಾದ’ ಎಂದು ಹೇಳಿಕೊಂಡಿದ್ದಾರೆ. ನಿಮ್ರಿತ್ ಕೌರ್ ನಟನೆಯ ವೆಬ್ ಸರಣಿ ‘ಅಬ್ ಹೋಗಾ ಹಿಸಬ್’ ಕಳೆದ ತಿಂಗಳು ಒಟಿಟಿಯಲ್ಲಿ ರಿಲೀಸ್ ಆಗಿತ್ತು. -ಏಜೆನ್ಸೀಸ್