CINTAA Controversy - ಕಲಾವಿದರ ಸಂಘದಲ್ಲಿ ವಿವಾದದ ಕಾವು!

Poonam Dhillon - padmini kolhapure
Poonam Dhillon - padmini kolhapure
Published on
CINTAA Controversy -
ಹಿಂದಿ ಸಿನಿಮಾ ಮತ್ತು ಟಿವಿ ಕಲಾವಿದರ ಸಂಘದಲ್ಲಿ ಪದಾಧಿಕಾರಿಗಳ ನಡುವೆಯೇ ಕಳೆದ ಎರಡು ವರ್ಷಗಳಿಂದ ಮುಸುಕಿನ ಗುದ್ದಾಟ ನಡೆದಿತ್ತು. ಅಧ್ಯಕ್ಷೆ ಪೂನಮ್​ ಧಿಲ್ಲೋನ್​ ಮತ್ತು ಹಿರಿಯ ಉಪಾಧ್ಯಕ್ಷೆ ಪದ್ಮಿನಿ ಕೊಲ್ಹಾಪುರೆ ಕಾರ್ಯಶೈಲಿಯ ಬಗ್ಗೆ ಅಸಮಾಧಾನದ ಮಾತುಗಳು ಕೇಳಿಬರುತ್ತಿದ್ದವು. ಸಭೆ ನಡೆಸದೇ ಅಥವಾ ಪದಾಧಿಕಾರಿಗಳ ಗಮನಕ್ಕೆ ತರದೇ ಕೆಲ ವಿಷಯಗಳ ಬಗ್ಗೆ ಏಕಪಯ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಕೆಲವರು ಆರೋಪಿಸಿದ್ದರು. ಇದೀಗ 21 ಕಾರ್ಯಕಾರಿ ಸಮಿತಿ ಸದಸ್ಯರ ಪೈಕಿ 11 ಮಂದಿ ರಾಜೀನಾಮೆ ನೀಡಿದ್ದಾರೆ. ಹೇಮಂತ್​ ಪಾಂಡೆ, ಮುಕೇಶ್​ ರಿಷಿ, ಸಾಹಿಲಾ ಛಡ್ಡಾ, ಹೇತಲ್​ ಪರ್ಮಾರ್​, ಪುನೀತ್​ ಇಸ್ಸಾರ್​, ವಿಂದೂ ದಾರಾ ಸಿಂಗ್​, ವಿಕಾಸ್​ ವರ್ಮಾ, ದೀಪಕ್​ ಪರಾಶರ್​ ರಾಜೀನಾಮೆ ನೀಡಿರುವ ಸದಸ್ಯರು. ಸಂದ ಅಧಿಕೃತ ಇ-ಮೇಲ್​ ಬಳಸದೇ ವಯಕ್ತಿಕ ಇ-ಮೇಲ್​ನಿಂದ ಮೇಲ್​ ಮಾಡುವುದು, ಯೋಜನೆಗಳ ಬಗ್ಗೆ, ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಬಗ್ಗೆ ಕಾರ್ಯಕಾರಿ ಸಮಿತಿ ಸಭೆ ನಡೆಸಿ ಮಾಹಿತಿ ನೀಡದೇ ಏಕಪಯ ನಿರ್ಧಾರ ತೆಗೆದುಕೊಳ್ಳುವುದು, ಕೆಲ ಕಲಾವಿದರ ವಿರುದ್ಧ ಕಠಿಣ ಕ್ರಮ ಕೈಗೊಂಡಿರುವುದು ಸೇರಿ ಹಲವು ಆರೋಪಗಳನ್ನು ಮಾಡಿದ್ದಾರೆ. ಜತೆಗೆ ರಾಜೀನಾಮೆ ನೀಡಿರುವ ಸದಸ್ಯರು ಹೊಸದಾಗಿ ಚುನಾವಣೆ ನಡೆಸಲು ಒತ್ತಾಯಿಸಿದ್ದಾರೆ. ಆದರೆ, ಅವರ ರಾಜೀನಾಮೆಯ ಬೆನ್ನಲ್ಲೇ ಅವರ ನಂತರ ಹೆಚ್ಚು ಮತಗಳನ್ನು ಪಡೆದಿದ್ದವರನ್ನು ಕಾರ್ಯಕಾರಿ ಸಮಿತಿಗೆ ಆಯ್ಕೆ ಮಾಡಲಾಗಿದ್ದು, ವಿವಾದದ ಕಾವು ಹೆಚ್ಚಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net