

Priya Marathe: ಬಾಲಿವುಡ್ನ ದೂರದರ್ಶನ ಉದ್ಯಮದಲ್ಲಿ ನಟಿಯಾಗಿ ಬೆಳೆಯುವ ಅಪಾರ ಕನಸು ಹೊತ್ತಿದ್ದ ಯುವನಟಿ ಪ್ರಿಯಾ ಮರಾಠೆ (38) ಇಂದು (ಆ.31) ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ಕ್ಯಾನ್ಸರ್ನಿಂದ ಬಳಲುತ್ತಿದ್ದ ಪ್ರಿಯಾ, ಕಾಯಿಲೆ ಕಾಣಿಸಿಕೊಂಡ ಆರಂಭದ ಹಂತದಲ್ಲಿ ನಟನೆಯಿಂದ ವಿರಾಮ ತೆಗೆದುಕೊಂಡರು. ಈ ವೇಳೆ ನಿರಂತರ ಚಿಕಿತ್ಸೆಗೆ ಒಳಗಾಗಿದ್ದರು. ಇದಾದ ಬಳಿಕ ತಾನು ಗುಣಮುಖಳಾಗಿದ್ದೇನೆ ಎಂದು ಭಾವಿಸಿ, ನಟನಾ ವೃತ್ತಿಗೆ ಮರಳಿದ್ದರು. ಆದರೆ, ಕ್ಯಾನ್ಸರ್ ಇನ್ನಷ್ಟು ಹೆಚ್ಚಾಗಿ ಇದೀಗ ಅವರ ಜೀವವನ್ನೇ ಬಲಿಪಡೆದಿರುವುದು ನಿಜಕ್ಕೂ ದುರಂತವೇ.
20ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ನಟಿಸಿರುವ ಪ್ರಿಯಾ ಮರಾಠೆ, 2006ರಿಂದ ದೂರದರ್ಶನ ಉದ್ಯಮದಲ್ಲಿದ್ದಾರೆ. ಸೀರಿಯಲ್ ಜತೆ ಜತೆಗೆ ಎರಡು ಸಿನಿಮಾಗಳಲ್ಲಿ ನಟಿಸಿದ್ದಾರೆ. 2012ರಲ್ಲಿ ತಮ್ಮದೇ ಚಿತ್ರರಂಗದ ಹಿರಿಯ ನಟನ ಮಗನನ್ನು ವಿವಾಹವಾದ ಅವರು, 38ನೇ ವಯಸ್ಸಿಗೆ ಕ್ಯಾನ್ಸರ್ನಿಂದ ಸಾವನ್ನಪ್ಪಿದ ವಿಚಾರ ಸದ್ಯ ಹಲವರಿಗೆ ಅರಗಿಸಿಕೊಳ್ಳುವುದು ಕಷ್ಟಸಾಧ್ಯವಾಗಿದೆ.
ಇಂದು ಬೆಳಗ್ಗೆ ತಮ್ಮ ಮುಂಬೈ ನಿವಾಸದಲ್ಲಿ ಪ್ರಿಯ ನಿಧನರಾಗಿದ್ದು, ನಟಿಯ ಸಾವಿನ ಸುದ್ದಿ ತಿಳಿದ ಬಾಲಿವುಡ್ ಸೆಲೆಬ್ರಿಟಿಗಳು ಮತ್ತು ಅವರ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ,(ಏಜೆನ್ಸೀಸ್).